Thursday, 26 August 2021

ಮಹಾರಾಷ್ಟ್ರ: ಒಂದೇ ದಿನ 5 ಸಾವಿರ ದಾಟಿದ ಕೋವಿಡ್ ಸೋಂಕು

 

ಮಹಾರಾಷ್ಟ್ರ: ಒಂದೇ ದಿನ 5 ಸಾವಿರ ದಾಟಿದ ಕೋವಿಡ್ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ಐದು ದಿನಗಳ ಬಳಿಕ ಮತ್ತೆ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಬುಧವಾರ 5031 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, 216 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

"ಕೋವಿಡ್ ಸೂಕ್ತ ನಡವಳಿಕೆಯನ್ನು ಜನ ನಿಧಾನವಾಗಿ ಬಿಟ್ಟಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣ" ಎಂದು ಮಸೀನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸತ್ಯೇಂದ್ರನಾಥ್ ಮೆಹ್ರಾ ಹೇಳಿದ್ದಾರೆ.

"ಜನ ಸುರಕ್ಷಿತ ಅಂತರವನ್ನು ಕಾಪಾಡುತ್ತಿಲ್ಲ ಹಾಗೂ ಮಾಸ್ಕ್ ಧರಿಸುವಲ್ಲಿ ನಿಷ್ಕಾಳಜಿ ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳದಿರುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ನಾವು ಮೂರನೇ ಅಲೆಯನ್ನು ಎದುರಿಸಬೇಕಾಗಬಹುದು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮುಂಬೈನಲ್ಲಿ 342 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಮಹಾನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 15956ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 64,37,680ಕ್ಕೇರಿದ್ದು, 50183 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,36,571ಕ್ಕೇರಿದೆ.

ಪುಣೆಯಲ್ಲಿ ಅತ್ಯಧಿಕ ಎಂದರೆ 12673 ಸಕ್ರಿಯ ಪ್ರಕರಣಗಳಿದ್ದು, ಥಾಣೆಯಲ್ಲಿ 7041 ಮತ್ತು ಸತಾರಾದಲ್ಲಿ 5400 ಸಕ್ರಿಯ ಪ್ರಕರಣಗಳಿವೆ.


SHARE THIS

Author:

0 التعليقات: