Friday, 13 August 2021

45 ಕೋಟಿಗೆ ನಿವಾಸ ಮಾರಿದ ಅಭಿಷೇಕ್ ಬಚ್ಚನ್


45 ಕೋಟಿಗೆ ನಿವಾಸ ಮಾರಿದ ಅಭಿಷೇಕ್ ಬಚ್ಚನ್

ಮುಂಬೈ, ಆ.13- ಬಾಲಿವುಡ್‍ನ ಹಿರಿಯ ನಟ ಅಮಿತಾಬ್‍ಬಚ್ಚನ್‍ರ ಪುತ್ರ ಹಾಗೂ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಐಷಾರಾಮಿ ನಿವಾಸವನ್ನು 45 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. 2014ರಲ್ಲಿ ಮುಂಬೈನ ಒಬೆರಾಯ್ ವೆಸ್ಟ್‍ನಲ್ಲಿರುವ ಐಶಾರಾಮಿ ಅಪಾರ್ಟ್‍ಮೆಂಟ್‍ನಲ್ಲಿ 41 ಕೋಟಿ ನೀಡಿ ಪ್ಲಾಟ್ ಅನ್ನು ಖರೀದಿಸಿದ್ದರಾದರೂ ಅಭಿಷೇಕ್ ಹಾಗೂ ಆತನ ಪತ್ನಿ, ಮಾಜಿ ವಿಶ್ವಸುಂದರಿ ಐಶ್ವರ್ಯಾರೈ ಅವರು ಬಿಗ್ ಬಿ ಮನೆಯಲ್ಲೇ ವಾಸಿಸುತ್ತಿರುವುದರಿಂದ ಅಭಿಷೇಕ್ ತಮ್ಮ ಒಡೆತನದ ಪ್ಲಾಟ್ ಅನ್ನು 45 ಕೋಟಿಗೆ ಮಾರಿದ್ದಾರೆ.

ಇತ್ತೀಚೆಗೆ ಅಭಿಷೇಕ್ ಬಚ್ಚನ್ ಅವರು ನಟಿಸಿರುವ ಬಿಗ್‍ಬುಲ್ ಚಿತ್ರವು ಸೋಲಿನ ಹಾದಿ ಹಿಡಿದಿರುವ ಬೆನ್ನಲ್ಲೇ ಅಭಿಷೇಕ್ ಬಚ್ಚನ್ ಅವರು ಐಷಾರಾಮಿ ನಿವಾಸವನ್ನು ಮಾರಿರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಹಲವರು ಟ್ರೋಲ್ ಮಾಡಿದ್ದಾರೆ. ಆದರೆ ಐಷಾರಾಮಿ ನಿವಾಸವನ್ನು ಮಾರಿದ್ದರಿಂದ ಬಂದಿರುವ 45 ಕೋಟಿ ಹಣವನ್ನು ಉದ್ಯಮದಲ್ಲಿ ತೊಡಗಿಸಲು ಅಭಿಷೇಕ್ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಅಭಿಷೇಕ್ ಅವರು ಈಗ ಮಾರಾಟ ಮಾಡಿರುವ ಐಷಾರಾಮಿ ನಿವಾಸ ಇರುವ ಅಪಾರ್ಟ್‍ಮೆಂಟ್‍ನಲ್ಲೇ ಬಾಲಿವುಡ್‍ನ ಸ್ಟಾರ್ ನಟರಾದ ಅಕ್ಷಯ್‍ಕುಮಾರ್ 52 ಕೋಟಿ ನೀಡಿ ಫ್ಲ್ಯಾಟ್ ಖರೀದಿಸಿದ್ದರೆ, ಶಾಹಿದ್‍ಕಪೂರ್ ಅವರು 42, 43ನೆ ನಂಬರಿನ ಐಷಾರಾಮಿ ನಿವಾಸಗಳನ್ನು ಖರೀದಿಸಿದ್ದಾರೆ.

ಇತ್ತೀಚೆಗೆ ಬಾಲಿವುಡ್‍ನ ಸ್ಟಾರ್ ಕಲಾವಿದರಾದ ಹೃತಿಕ್‍ರೋಷಣ್, ರಾಣಿಮುಖರ್ಜಿ, ಸನ್ನಿಲಿಯೋನ್, ಜಾಹ್ನವಿ ಕಪೂರ್, ದಿಶಾಪಟಾನಿ, ಟಾಲಿವುಡ್‍ನ ಸ್ಟಾರ್ ನಟ ರಾಮ್‍ಚರಣ್, ನಟಿಯರಾದ ಸಮಂತಾ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು ಫ್ಲ್ಯಾಟ್‍ಗಳನ್ನು ಖರೀದಿಸಿರುವಾಗ ಅಭಿಷೇಕ್ ಬಚ್ಚನ್ ಅವರು ಐಷಾರಾಮಿ ನಿವಾಸವನ್ನು ಮಾರಿರುವುದು ಆಶ್ಚರ್ಯ ಮೂಡಿಸಿದೆ.

ಅಭಿಷೇಕ್ ಬಚ್ಚನ್ ಸದ್ಯ ಬಾಬ್‍ಬಿಸ್ವಾಸ್, ದಾಸವಿ, ಗುಲಾಬ್ ಜಮೂನ್ ಚಿತ್ರಗಳಲ್ಲಿ ನಟಿಸುತ್ತಿದ್ದರೆ, ಐಶ್ವರ್ಯಾರೈ ಪೊನ್ನಿಯಿನ್ ಸೆಲ್ವನ್ ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂರ ನಿರ್ದೇಶನವಿದೆ.SHARE THIS

Author:

0 التعليقات: