Wednesday, 11 August 2021

ಕೇರಳ: ಸಂಪೂರ್ಣ ಲಸಿಕೆ ಪಡೆದ 40,000ಕ್ಕೂ ಅಧಿಕ ಜನರಿಗೆ ಕೋವಿಡ್-19 ಸೋಂಕು


 ಕೇರಳ: ಸಂಪೂರ್ಣ ಲಸಿಕೆ ಪಡೆದ 40,000ಕ್ಕೂ ಅಧಿಕ ಜನರಿಗೆ ಕೋವಿಡ್-19 ಸೋಂಕು

ಹೊಸದಿಲ್ಲಿ: ಕೇರಳದಲ್ಲಿ 40,000 ಕ್ಕೂ ಹೆಚ್ಚು ಕೋವಿಡ್ -19 ಸೋಂಕುಗಳು ಲಸಿಕೆ ಹಾಕಿದವರಲ್ಲಿ ಕಂಡುಬಂದಿವೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಉನ್ನತ ಅಧಿಕೃತ ಮೂಲಗಳು ಎನ್ ಡಿಟಿವಿಗೆ ತಿಳಿಸಿವೆ.

ಲಸಿಕೆಗಳು ಅಥವಾ ಹಿಂದಿನ ಸೋಂಕಿನಿಂದ ಒದಗಿಸಲಾದ ರೋಗನಿರೋಧಕ ಶಕ್ತಿಯನ್ನು ತಪ್ಪಿಸಿಕೊಳ್ಳಲು ವೈರಸ್ ಸಾಕಷ್ಟು ರೂಪಾಂತರಗೊಂಡರೆ ನಿಜವಾದ ಆತಂಕವಿದೆ ಎಂದು ಮೂಲಗಳು ತಿಳಿಸಿವೆ.

ವೇಗವಾಗಿ ಹರಡುವ ಸೋಂಕುಗಳಲ್ಲಿ ಡೆಲ್ಟಾ ರೂಪಾಂತರದ ಗುಣಲಕ್ಷಣವಿದೆಯೇ ಎಂದು    ಇನ್ನೂ ತಿಳಿದುಬಂದಿಲ್ಲ, ಡೆಲ್ಟಾ ರೂಪಾಂತರ  ಮೊದಲು ಭಾರತದಲ್ಲಿ ಕಂಡುಬಂದಿದ್ದು ಬಳಿಕ ಪ್ರಪಂಚದಾದ್ಯಂತದ ದೇಶಗಳಲ್ಲಿ ಉಲ್ಬಣಕ್ಕೆ ಕಾರಣವಾಯಿತು.

ಹೆಚ್ಚಿನ ಕೊರೋನ ಪ್ರಕರಣಗಳು ಪತ್ತನಂತಿಟ್ಟ ಜಿಲ್ಲೆಯಿಂದ ವರದಿಯಾಗಿವೆ. ಪತ್ತನಂತಿಟ್ಟದಲ್ಲಿ ಮೊದಲ ಕೋವಿಡ್ ಡೋಸ್ ನಂತರ 14,974 ಜನರು ಸೋಂಕಿಗೆ ಒಳಗಾಗಿದ್ದರೆ, ಎರಡನೇ ಲಸಿಕೆ ನಂತರ 5,042 ಜನರು ಸೋಂಕಿಗೆ ಒಳಗಾಗಿದ್ದಾರೆ.



SHARE THIS

Author:

0 التعليقات: