Monday, 2 August 2021

ಚೀನಾ ಪ್ರವಾಹ: ಮೃತರ ಸಂಖ್ಯೆ 302ಕ್ಕೆ ಏರಿಕೆ, ಹತ್ತಾರು ಮಂದಿ ಇನ್ನೂ ನಾಪತ್ತೆ


ಚೀನಾ ಪ್ರವಾಹ: ಮೃತರ ಸಂಖ್ಯೆ 302ಕ್ಕೆ ಏರಿಕೆ, ಹತ್ತಾರು ಮಂದಿ ಇನ್ನೂ ನಾಪತ್ತೆ

ಬೀಜಿಂಗ್: ಕೇಂದ್ರ ಚೀನಾದಲ್ಲಿ ಇತ್ತೀಚೆಗೆ ಸಂಭವಿಸಿದ್ದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 302ಕ್ಕೆ ಏರಿಕೆಯಾಗಿದೆ. ಹತ್ತಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆನಾನ್ ಪ್ರಾಂತ್ಯದ ರಾಜಧಾನಿ ಜೆಂಗ್‌ಜೌನಲ್ಲಿ ದಾಖಲೆಯ ಪ್ರಮಾಣದಲ್ಲಿ ಪ್ರವಾಹ ಉಂಟಾಗಿತ್ತು. ಪರಿಣಾಮವಾಗಿ 292 ಮಂದಿ ಮೃತಪಟ್ಟು 47 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯಾಡಳಿತ ತಿಳಿಸಿದೆ.

ಕಾರು ಪಾರ್ಕಿಂಗ್‌ ಪ್ರದೇಶಗಳು, ಸುರಂಗ ಮಾರ್ಗಗಳು ಸೇರಿದಂತೆ ಹಲವೆಡೆಗಳಲ್ಲಿ ಜನರು ಸಿಲುಕಿದ್ದರು.ಜನರು ಭುಜಮಟ್ಟದ ನೀರಿನಲ್ಲಿ ಸಿಲುಕಿಹಾಕಿಕೊಂಡಿರುವುದು, ಹತ್ತಾರು ಕಾರುಗಳು ಪ್ರವಾಹದಲ್ಲಿ ಕೊಚ್ಚಿಹೋಗಿರುವ ದೃಶ್ಯಗಳು ಚೀನಾದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಜೆಂಗ್‌ಜೌನ ಕಾರು ಪಾರ್ಕಿಂಗ್ ಮತ್ತು ಇತರ ನೆಲಮಾಳಿಗೆ ಪ್ರದೇಶಗಳಿಂದ 39 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಮೇಯರ್ ಹೂ ಹಾಂಗ್ ತಿಳಿಸಿದ್ದಾರೆ.ಚೀನಾದಲ್ಲಿ ದಶಕದಲ್ಲೇ ಸಂಭವಿಸಿದ ಭೀಕರ ಪ್ರವಾಹ ಇದಾಗಿದೆ ಎನ್ನಲಾಗಿದೆ.

ಜುಲೈ 17ರಿಂದ ಚೀನಾದಲ್ಲಿ ಸುರಿದಿದ್ದ ಭಾರಿ ಮಳೆ ಲಕ್ಷಾಂತರ ಮಂದಿಯನ್ನು ಸಂಕಷ್ಟಕ್ಕೀಡುಮಾಡಿತ್ತು. ಸಾವಿರಾರು ಮನೆಗಳಿಗೆ ಹಾನಿಯಾಗಿತ್ತಲ್ಲದೆ, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಾಶವಾಗಿತ್ತು.SHARE THIS

Author:

0 التعليقات: