Saturday, 14 August 2021

ಕೆರಿಬಿಯನ್ ರಾಷ್ಟ್ರದ ಹೈಟಿಯಲ್ಲಿ ಪ್ರಬಲ ಭೂಕಂಪ : 300 ಕ್ಕೂ ಹೆಚ್ಚು ಮಂದಿ ಸಾವು, ಸುನಾಮಿ ಎಚ್ಚರಿಕೆ

 

ಕೆರಿಬಿಯನ್ ರಾಷ್ಟ್ರದ ಹೈಟಿಯಲ್ಲಿ ಪ್ರಬಲ ಭೂಕಂಪ : 300 ಕ್ಕೂ ಹೆಚ್ಚು ಮಂದಿ ಸಾವು, ಸುನಾಮಿ ಎಚ್ಚರಿಕೆ

ಹೈಟಿ : ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸುನಾಮಿ ಭೀತಿಯ ನಡುವೆಯೇ 7.2ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯಾಲಾಜಿಕ್ ಸರ್ವೆ ತಿಳಿಸಿದೆ.ರಿಕ್ಟರ್ ಮಾಪಕದಲ್ಲಿ 7.2 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಭೂಕಂಪನವು ಸುಮಾರು 10 ಕಿಲೋಮೀಟರ್ ಆಳವಾಗಿತ್ತು ಮತ್ತು ಸೇಂಟ್-ಲೂಯಿಸ್-ಡು-ಸುಡ್ ನಿಂದ ಈಶಾನ್ಯಕ್ಕೆ 12 ಕಿಲೋಮೀಟರ್ ಅಪ್ಪಳಿಸಿತು.

ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಪ್ರಬಲ ಭೂಕಂಪಸಂಭವಿಸಿದ್ದು,ಸುಮಾರು 300 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಹೈಟಿಯ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದೆ. ನಾವು ಹೈಟಿ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದೇವೆ. ಆರೋಗ್ಯ ಅಗತ್ಯಗಳನ್ನು ನಿರ್ಣಯಿಸಲು ಮತ್ತು ತುರ್ತು ವೈದ್ಯಕೀಯ ಆರೈಕೆಯನ್ನು ಬೆಂಬಲಿಸಲು ನಾವು ಕೆಲಸ ಮಾಡುತ್ತಿವೆ,' ಎಂದು ಡಬ್ಲ್ಯೂಹೆಚ್‌ಒ ಟ್ವೀಟ್ ಮಾಡಿದೆ.

ಭೂಕಂಪವು ಕೆರಿಬಿಯನ್ ದೇಶದ ದಕ್ಷಿಣ ಪ್ರದೇಶಗಳಿಗೆ ಅಪಾರ ಹಾನಿ ಉಂಟುಮಾಡಿದೆ ಎಂದು ಹೈಟಿಯನ್ ಪ್ರಧಾನಿ ಏರಿಯಲ್ ಹೆನ್ರಿ ಹೇಳಿದರು. ಸಂತ್ರಸ್ತರಿಗೆ ಸಹಾಯ ಮಾಡಲು ಲಭ್ಯವಿರುವ ಎಲ್ಲಾ ಸರ್ಕಾರಿ ಸಂಪನ್ಮೂಲಗಳನ್ನು ಸಜ್ಜುಗೊಳಿಸಲಾಗುವುದು ಎಂದು ಅವರು ಹೇಳಿದರು.

ಹೈಟಿಯಲ್ಲಿ ಸಂಭವಿಸಿದ ಭಾರಿ ಭೂಕಂಪದಿಂದ ಬಾಧಿತರಾದವರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಸಂತಾಪ ವ್ಯಕ್ತಪಡಿಸಿದ್ದು, ಈ ದುರಂತದಿಂದ ತಾವು 'ದುಃಖಿತನಾಗಿದ್ದೇನೆ' ಎಂದು ತಿಳಿಸಿದ್ದು, 'ತಕ್ಷಣದ ಯುಎಸ್ ಪ್ರತಿಕ್ರಿಯೆ'ಯನ್ನು ಅಧಿಕೃತಗೊಳಿಸಿರುವುದಾಗಿ ಹೇಳಿದ್ದಾರೆ.


SHARE THIS

Author:

0 التعليقات: