ಮೊದಲ ಟೆಸ್ಟ್ ನಲ್ಲಿ ಭಾರತ 278 ರನ್ಗೆ ಆಲೌಟ್!
ನಾಟಿಂಗ್ಹ್ಯಾಮ್: ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಶತಕಾರ್ಧದ(84, 214 ಎಸೆತ, 12 ಬೌಂಡರಿ)ಸಹಾಯದಿಂದ ಭಾರತವು ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 278 ರನ್ ಗಳಿಸಿ ಆಲೌಟಾಗಿದೆ. ಈ ಮೂಲಕ 95 ರನ್ ಇನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಭಾರತದ ಪರ ರಾಹುಲ್ ಬಳಿಕ ಆಲ್ ರೌಂಡರ್ ರವೀಂದ್ರ ಜಡೇಜ(56,86 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ವಿಕೆಟ್ಕೀಪರ್ ರಿಷಭ್ ಪಂತ್ 25, ಜಸ್ಪ್ರೀತ್ ಬುಮ್ರಾ 28 ರನ್ ಗಳಿಸಿದರು.
ರೋಹಿತ್ ಶರ್ಮಾರೊಂದಿಗೆ ಇನಿಂಗ್ಸ್ ಆರಂಭಿಸಿದ ರಾಹುಲ್ ಮೊದಲ ವಿಕೆಟ್ ಗೆ 97 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆ ನಂತರ ಭಾರತವು 145 ರನ್ಗೆ 5 ವಿಕೆಟ್ ಕಳೆದುಕೊಂಡಾಗ 6ನೇ ವಿಕೆಟ್ಗೆ ಜಡೇಜರೊಂದಿಗೆ 60 ರನ್ ಸೇರಿಸಿದ ರಾಹುಲ್ ತಂಡವನ್ನು ಆಧರಿಸಿದರು. ಬಾಲಂಗೋಚಿಗಳಾದ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ಕೊನೆಯ ವಿಕೆಟ್ಗೆ 33 ರನ್ ಜೊತೆಯಾಟ ನಡೆಸಿ ತಂಡದ ಮುನ್ನಡೆಗೆ ನೆರವಾದರು.
ಇಂಗ್ಲೆಂಡ್ ಪರವಾಗಿ ಒಲ್ಲಿ ರಾಬಿನ್ಸನ್ (5-85) ಐದು ವಿಕೆಟ್ ಗೊಂಚಲು ಪಡೆದರೆ, ಜೇಮ್ಸ್ ಆ್ಯಂಡರ್ಸನ್ 54 ರನ್ಗೆ 4 ವಿಕೆಟ್ಗಳನ್ನು ಉರುಳಿಸಿ ಮಿಂಚಿದರು.
0 التعليقات: