Thursday, 19 August 2021

ಬೆಂಗಳೂರು; ಮಾಸ್ಕ್ ಧರಿಸದಿದ್ರೆ ಇನ್ಮೇಲೆ 250 ರೂ. ದಂಡ ಫಿಕ್ಸ್.!


ಬೆಂಗಳೂರು;
ಮಾಸ್ಕ್ ಧರಿಸದಿದ್ರೆ ಇನ್ಮೇಲೆ 250 ರೂ. ದಂಡ ಫಿಕ್ಸ್.!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಂಡಿದೆ. ಇದರ ಜೊತೆಗೆ ಸಾಲು ಸಾಲು ಹಬ್ಬಗಳು ಕೂಡ ಬರುತ್ತಿದೆ. ವರಮಹಾಲಕ್ಷ್ಮಿ ಹಬ್ಬ, ಮೊಹರಂ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿದೆ. ಹಬ್ಬದ ಹಿನ್ನೆಲೆ ರಸ್ತೆ, ಮಾರ್ಕೆಟ್ ಗಳಲ್ಲಿ ಹಣ್ಣು ಹೂ ಅಗತ್ಯ ಸಾಮಾನು ಖರೀದಿ ಕೂಡ ಜೋರಾಗಿದೆ.

ಆದ್ದರಿಂದ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಾರ ಮಾರ್ಕೆಟ್ ಗಳಲ್ಲಿ ಹೆಚ್ಚು ಜನರು ಭೇಟಿ ನೀಡುವಂತಿಲ್ಲ, ಅಲ್ಲದೇ ಮಾಸ್ಕ್ ಧರಿಸದವರಿಗೆ 250 ರೂ.ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡಿದರೇ 250 ರೂ. ದಂಡ ವಿಧಿಸಲಾಗುತ್ತದೆ. ಬೆಂಗಳೂರಿನ ವ್ಯಾಪ್ತಿಯಲ್ಲಿರುವ ಅಂಗಡಿಗಳ ಮಾಲೀಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರುತ್ತದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ಆಗಸ್ಟ್ 30 ರವರೆಗೆ ನೈಟ್ ಕರ್ಪ್ಯೂ ವಿಸ್ತರಿಸಲಾಗಿದೆ.

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ಕೊರೊನಾ ಸೋಂಕಿನ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ ಆಗಸ್ಟ್ 30 ರವರೆಗೆ ನೈಟ್ ಕರ್ಪ್ಯೂ ವಿಸ್ತರಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಪ್ಯೂ ಆದೇಶ ಜಾರಿಯಲ್ಲಿರಲಿದೆ.

ನಗರದಲ್ಲಿ ಕೊರೋನಾ ಪ್ರಕರಣಗಳ ( Corona Case ) ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ, ನಿಯಂತ್ರಣ ಕ್ರಮವಾಗಿ, ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 9 ಗಂಟೆಯ ನಂತ್ರ ನೈಟ್ ಕರ್ಪ್ಯೂ ( Night Curfew ) ಜಾರಿಗೊಳ್ಳಲಿದ್ದು, ಈ ವೇಳೆಯಲ್ಲಿ ಅನಗತ್ಯವಾಗಿ ಓಡಾಡುವಂತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಲ್ಲದೇ, ವಾಹನಗಳನ್ನು ಪೊಲೀಸರು ಸೀಜ್ ಕೂಡ ಮಾಡಲಿದ್ದಾರೆ.SHARE THIS

Author:

0 التعليقات: