ದೇಶಾದ್ಯಂತ ಅಡುಗೆ ಅನಿಲ ಬೆಲೆ 25 ರೂ. ಹೆಚ್ಚಳ
ಹೊಸದಿಲ್ಲಿ: ದೇಶೀಯ (14.2 ಕಿಲೋಗ್ರಾಂ) ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG ಅಥವಾ ಅಡುಗೆ ಅನಿಲ) ಸಿಲಿಂಡರ್ ಬೆಲೆಯನ್ನು ಮಂಗಳವಾರ 25 ರೂ. ಏರಿಸಲಾಗಿದೆ. ಈ ಏರಿಕೆಯೊಂದಿಗೆ ದೇಶೀಯ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿಯಲ್ಲಿ 859 ರೂ.ಗೆ ತಲುಪಿದೆ.
ದೇಶಾದ್ಯಂತ ಇದೇ ಪ್ರಮಾಣದಲ್ಲಿ ಬೆಲೆಯನ್ನು ಹೆಚ್ಚಿಸಲಾಗಿದೆ.
ತೈಲ ಕಂಪನಿಗಳು ದೇಶೀಯ ಅಡುಗೆ ಅನಿಲದ ಬೆಲೆಯನ್ನು ಸತತ ಎರಡನೇ ತಿಂಗಳು ಹೆಚ್ಚಿಸಿವೆ. ದೇಶೀಯ ಸಿಲಿಂಡರ್ ಬೆಲೆ ಜೂನ್ 1 ರಂದು 809 ರೂ. ಇತ್ತು. ಇದನ್ನು ಜುಲೈ 1 ರಂದು 834 ರೂ.ಗೆ ಏರಿಸಲಾಗಿದೆ.
ಜನವರಿ 1 ರಿಂದ ಆಗಸ್ಟ್ 17 ರ ನಡುವೆ ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ತಲಾ 165 ರೂ ಏರಿಕೆಯಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡವನ್ನು ಕಡಿಮೆ ಮಾಡಲು ತೈಲ ಕಂಪನಿಗಳು ಆಗಸ್ಟ್ 1 ರಂದು ಎಲ್ ಪಿ ಜಿ ಬೆಲೆ ಏರಿಕೆಯನ್ನು ತಡೆಹಿಡಿದಿದ್ದವು ಎಂದು ವಲಯ ವೀಕ್ಷಕರು ಹೇಳುತ್ತಾರೆ.
0 التعليقات: