Saturday, 7 August 2021

ಬುಮ್ರಾ ದಾಳಿಗೆ ಕುಸಿದ ಇಂಗ್ಲೆಂಡ್: ಭಾರತಕ್ಕೆ 209 ರನ್ ಗುರಿ!


ಬುಮ್ರಾ ದಾಳಿಗೆ ಕುಸಿದ ಇಂಗ್ಲೆಂಡ್: ಭಾರತಕ್ಕೆ 209 ರನ್ ಗುರಿ!

ನಾಯಕ ಜೋ ರೂಟ್ ಶತಕದ ಹೊರತಾಗಿಯೂ ಇಂಗ್ಲೆಂಡ್ 2ನೇ ಇನಿಂಗ್ಸ್ ನಲ್ಲಿ 303 ರನ್ ಗಳಿಗೆ ಆಲೌಟಾಗಿದ್ದು, ಭಾರತ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು 208 ರನ್ ಗಳ ಗುರಿ ಪಡೆದಿದೆ.

ನಾಟಿಂಗ್ ಹ್ಯಾಂನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 4ನೇ ದಿನವಾದ ಶನಿವಾರ ಭಾರತ ಮೊದಲ ಇನಿಂಗ್ಸ್ ನಲ್ಲಿ 278 ರನ್ ಗಳಿಗೆ ಆಲೌಟಾಯಿತು. ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 303 ರನ್ ಗಳಿಗೆ ಆಲೌಟಾಗಿದೆ.

ಮೊದಲ ಇನಿಂಗ್ಸ್ ನಲ್ಲಿ 95 ರನ್ ಗಳ ಮುನ್ನಡೆ ಪಡೆದಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು 2 ದಿನಗಳ ಆಟದಲ್ಲಿ 208 ರನ್ ಗಳಿಸಬೇಕಿದೆ. ಜೋ ರೂಟ್ 172 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ 109 ರನ್ ಗಳಿಸಿದ್ದಾಗ ಔಟಾದರು. ಇದು ರೂಟ್ ಅವರ 21ನೇ ಟೆಸ್ಟ್ ಶತಕವಾಗಿದೆ.

ಭಾರತದ ಪರ ಮಾರಕ ದಾಳಿ ಸಂಘಟಿಸಿದ ಜಸ್ ಪ್ರೀತ್ ಬುಮ್ರಾ 5 ವಿಕೆಟ್ ಕಿತ್ತರೆ, ಮೊಹಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಪಡೆದರು.SHARE THIS

Author:

0 التعليقات: