Sunday, 1 August 2021

ಕೇರಳದಲ್ಲಿ ಒಂದೇ ದಿನ 20,728 ಕೊರೋನಾ ಪ್ರಕರಣ ದಾಖಲು


ಕೇರಳದಲ್ಲಿ ಒಂದೇ ದಿನ 20,728 ಕೊರೋನಾ ಪ್ರಕರಣ ದಾಖಲು

ತಿರುವನಂತಪುರಂ: ಕೇರಳದಲ್ಲಿ ಕೊರೋನಾ ಏರಿಕೆಯಾಗುತ್ತಿದ್ದು, ಗಡಿ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದೀಗ ಕೊರೋನಾದಿಂದ ನಿನ್ನೆ 56 ಮಂದಿ ಸಾವನ್ನಪ್ಪಿದ್ದು, ಒಂದೇ ದಿನ 20,728 ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸಿನಲ್ಲಿ ಒಟ್ಟು 1,70,690 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.12.14 ರಷ್ಟಿದೆ. ಈವರೆಗೆ ರಾಜ್ಯದಲ್ಲಿ 2,73,87,700 ಕೋವಿಡ್ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ನಿನ್ನೆ ಒಂದೇ ದಿನ 17,792 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಸೋಂಕಿನಿಂದ ಇಂದು 56 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 16,837ಕ್ಕೆ ಏರಿದೆ.


SHARE THIS

Author:

0 التعليقات: