Tuesday, 10 August 2021

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ): ಬ್ಲಡ್ ಡೊನೇಷನ್ ಕ್ಯಾಂಪೇನ್ 2021 ರ ಭಾಗವಾಗಿ ಅಮ್ಮುಂಜೆಯಲ್ಲಿ ಯಶಸ್ವೀ ರಕ್ತದಾನ ಶಿಬಿರ


 ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ): ಬ್ಲಡ್ ಡೊನೇಷನ್ ಕ್ಯಾಂಪೇನ್  2021 ರ ಭಾಗವಾಗಿ ಅಮ್ಮುಂಜೆಯಲ್ಲಿ ಯಶಸ್ವೀ ರಕ್ತದಾನ ಶಿಬಿರ

ಬಂಟ್ವಾಳ,  : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ 5 ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ ವಿವಿಧ ನಗರಗಳ 21 ರಕ್ತನಿಧಿಗಳಲ್ಲಿ ಏಕ ಕಾಲಕ್ಕೆ ಆಯೋಜಿಸಿದ ಬ್ಲಡ್ ಡೊನೇಷನ್ ಕ್ಯಾಂಪೇನ್ - 2021 ರ ಭಾಗವಾಗಿ, ಸೌಹಾರ್ದ ಫ್ರೆಂಡ್ಸ್ ಅಮ್ಮುಂಜೆ ಹಾಗೂ ಯೆನೆಪೋಯ ಆಸ್ಪತ್ರೆ ಸಹಯೋಗದೊಂದಿಗೆ ಯಶಸ್ವೀ ರಕ್ತದಾನ ಶಿಬಿರ ಕಾರ್ಯಕ್ರಮವು ಅಮ್ಮುಂಜೆಯ ಮುನವ್ವರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಿತು.

ಕೊರೋನ ಮುಂಜಾಗೃತ ಕ್ರಮವನ್ನು ಪಾಲಿಸಿ ಕೊಂಡು ನಡೆದ ಕಾರ್ಯಕ್ರಮದಲ್ಲಿ ಒಟ್ಟು 104 ಜನಸ್ನೇಹಿ ರಕ್ತದಾನಿಗಳು, ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ವಿವಿಧ ರೀತಿಯ ರೋಗಕ್ಕೆ ತುತ್ತಾಗಿರುವ ರೋಗಿಗಳ ಜೀವವನ್ನು ಉಳಿಸುವ ಕಾರ್ಯಕ್ಕೆ ಕೈ ಜೋಡಿಸಿದರು. ಕಾರ್ಯಕ್ರಮದಲ್ಲಿ ಡಾಕ್ಟರ್ EKA ಸಿದ್ದೀಕ್, ಶಿಬಿರದ ರೂವಾರಿ ಅಬ್ದುಲ್ ಮಜೀದ್ ಕೈಕಂಬ, ಅಬ್ದುಲ್ ಹಕೀಂ ತಾಳಿಪ್ಪಾಡಿ ಇವರನ್ನು ಅಭಿನಂದಿಸಲಾಯಿತು.

ಯಶಸ್ವಿಯಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದೀಕ್ ಬಾಕಿಮಾರ್ ವಹಿಸಿದ್ದರು. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ಇಫಾಝ್ ಬನ್ನೂರು, ಇಂಝಮಾಮ್ ಕಲಾಯಿ, ಝುಬೈರ್ ಸಿಕೆ ಸೌಹಾರ್ದ ಫ್ರೆಂಡ್ಸ್ ಅಮ್ಮುಂಜೆ ಸದಸ್ಯರಾದ ಖಲೀಲ್ ಅಂಕಮಾರ್, ಅಬ್ದುಲ್ ಸತ್ತಾರ್ ಮಂಡೆಬೆಟ್ಟು, ಅಶ್ರಫ್ ಜೆ, ಇಕ್ಬಾಲ್ ಜಾಂಪಲ್ ಹಾಗೂ ಯೆನೆಪೋಯ ಆಸ್ಪತ್ರೆ ರಕ್ತನಿಧಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊರೋನ ಸಂಧಿಘ್ನ ಪರಿಸ್ಥಿತಿಯಲ್ಲೂ ರೋಗಿಗಳ ಅವಶ್ಯಕತೆಗಾಗಿ ಧಾವಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ದಾನಿಗಳಿಗೂ, ಯೆನೆಪೋಯ ಆಸ್ಪತ್ರೆ ರಕ್ತನಿಧಿ ಸಿಬ್ಬಂಧಿಗಳಿಗೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಜನಸ್ನೇಹಿಗಳಿಗೂ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಸಂಘಟಕರು ಕೃತಜ್ಞತೆಯನ್ನು ಸಲ್ಲಿಸಿದರು.

ಕಾರ್ಯಕ್ರಮವನ್ನು ಅಶ್ಪಾಕ್ ಎ.ಯಚ್ ನಿರೂಪಿಸಿದರು. ಫತ್ತಾಹ್ ಸ್ವಾಗತಿಸಿ ವಂದಿಸಿದರು.

SHARE THIS

Author:

0 التعليقات: