Monday, 2 August 2021

ಒಲಿಂಪಿಕ್ಸ್ : 200 ಮೀ. ಓಟದಲ್ಲಿ ಸೆಮಿ ಫೈನಲ್ ತಲುಪಲು ದ್ಯುತಿ ಚಂದ್ ವಿಫಲ


 ಒಲಿಂಪಿಕ್ಸ್ : 200 ಮೀ. ಓಟದಲ್ಲಿ ಸೆಮಿ ಫೈನಲ್ ತಲುಪಲು ದ್ಯುತಿ ಚಂದ್ ವಿಫಲ

ಟೋಕಿಯೊ: ಭಾರತದ ಭರವಸೆಯಾಗಿದ್ದ ಓಟಗಾರ್ತಿ ದ್ಯುತಿ ಚಂದ್ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಸೋಮವಾರ ನಡೆದ ಮಹಿಳೆಯರ 200 ಮೀಟರ್ ಹೀಟ್-4ರಲ್ಲಿ ಸ್ಪರ್ಧಿಸಿದ ದ್ಯುತಿ ಚಂದ್ ಕೊನೆಯವರಾಗಿ ಗುರಿ ಮುಟ್ಟಿದರು.

23.85 ಸೆಕೆಂಡ್ ಗಳಲ್ಲಿ ಗುರಿ ತಲುಪಿದ ದ್ಯುತಿ ಚಂದ್ ಈ ಋತುವಿನ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರೂ ಸೆಮಿ ಫೈನಲ್ ತಲುಪಲು ಸಾಧ್ಯವಾಗಲಿಲ್ಲ.

ಚಂದ್ ಒಟ್ಟು 41 ಸ್ಪರ್ಧಿಗಳ ಪೈಕಿ 38ನೇ ಸ್ಥಾನ ಪಡೆದರು. ಈ ಹಿಂದೆ 200 ಮೀ.  ಓಟದಲ್ಲಿ 23 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿರುವುದು ದ್ಯುತಿ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಮಹಿಳೆಯರ 100 ಮೀಟರ್ ಓಟದಲ್ಲೂ ಸೆಮಿ ಫೈನಲ್ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ದ್ಯುತಿ ಚಂದ್ ವಿಫಲರಾಗಿದ್ದರು.


SHARE THIS

Author:

0 التعليقات: