Monday, 2 August 2021

ಜುಲೈ ತಿಂಗಳಿನಲ್ಲಿ 1.62 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಜುಲೈ ತಿಂಗಳಿನಲ್ಲಿ 1.62 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ

ಕೋವಿಡ್ 2ನೇ ಅಲೆಯ ಪರಿಣಾಮ ಕುಸಿತವಾಗಿದ್ದ ಆರ್ಥಿಕ ಚಟುವಟಿಕೆಗಳು ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಹೊಸ ವಾಹನಗಳ ಮಾರಾಟದಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಂಡುಬರುತ್ತಿದೆ.

ಕಳೆದ ಮೇ ಮತ್ತು ಜೂನ್ ಅವಧಿಯಲ್ಲಿ ಸಾಕಷ್ಟು ಇಳಿಕೆ ಕಂಡಿದ್ದ ಹೊಸ ವಾಹನ ಮಾರಾಟವು ಇದೀಗ ಸಾಕಷ್ಟು ಸುಧಾರಿಸಿದ್ದು, ಮಾರುತಿ ಸುಜುಕಿ ಕಂಪನಿಯು ಕೂಡಾ ಆರ್ಥಿಕ ಸಂಕಷ್ಟದ ಅವಧಿಯಲ್ಲೂ ಜುಲೈ ತಿಂಗಳಿನಲ್ಲಿ 1.62 ಲಕ್ಷ ಯುನಿಟ್ ಕಾರುಗಳನ್ನು ಮರಾಟ ಮಾಡಿ ಶೇ. 36 ರಷ್ಟು ಬೆಳವಣಿಗೆ ಸಾಧಿಸಿದೆ.

ಮಾರುತಿ ಸುಜುಕಿಯು ಜುಲೈನಲ್ಲಿ ಒಟ್ಟು 1,62,462 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಮಿನಿ ಕಾರುಗಳು, ಕಂಪ್ಯಾಕ್ಟ್ ಕಾರುಗಳು ಮತ್ತು ಯುಟಿಲಿಟಿ ಕಾರುಗಳ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆಯನ್ನು ಮುಂದುವರಿಸಿದೆ.

2020ರ ಜುಲೈ ಅವಧಿಯಲ್ಲಿ 1.08 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಜುಲೈನಲ್ಲಿ ಶೇ.36 ರಷ್ಟು ಬೆಳವಣಿಗೆ ಸಾಧಿಸಿದ್ದು, ಆರ್ಥಿಕ ಸಂಕಷ್ಟದ ನಡುವೆಯೂ ಹೊಸ ವಾಹನ ಖರೀದಿ ಹೆಚ್ಚಿಸಲು ಹಲವಾರು ಯೋಜನೆಗಳನ್ನು ರೂಪಿಸಿದ ಪರಿಣಾಮ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗಿದೆ.

ಮಿನಿ ಕಾರು ವಿಭಾಗದಲ್ಲಿ ಆಲ್ಟೊ, ಎಸ್-ಪ್ರೆಸ್ಸೊ ಕಂಪ್ಯಾಕ್ಟ್ ಕಾರುಗಳ ವಿಭಾಗದಲ್ಲಿ ವ್ಯಾಗನ್‌ಆರ್, ಸೆಲೆರಿಯೊ, ಸ್ವಿಫ್ಟ್, ಇಗ್ನಿಸ್, ಬಲೆನೊ, ಡಿಜೈರ್ ಮಾರಾಟವಾಗುತ್ತಿದ್ದರೆ ಯುಟಿಲಿಟಿ ವಿಭಾಗದಲ್ಲಿ ಎರ್ಟಿಗಾ, ಎಸ್-ಕ್ರಾಸ್, ವಿಟಾರಾ ಬ್ರೆಝಾ, ಎಕ್ಸ್‌ಎಲ್ 6 ಮಾದರಿಗಳಿವೆ.

ಮಾರುತಿ ಸುಜುಕಿ ಕಾರು ಮಾರಾಟ ಬೆಳವಣಿಗೆಗೆ ಮಿನಿ ಮತ್ತು ಕಂಪ್ಯಾಕ್ಟ್ ವಿಭಾಗಗಳ ಕಾರುಗಳೇ ಪ್ರಮುಖ ಕೊಡುಗೆ ನೀಡುತ್ತಿದ್ದು, ಇತ್ತೀಚೆಗೆ ಕಂಪನಿಯು ದೇಶಾದ್ಯಂತ ಪರಿಚಯಿಸಿರುವ ಸ್ಮಾರ್ಟ್ ಫೈನಾನ್ಸ್ ಸೇವೆಗಳು ಗ್ರಾಹಕರನ್ನು ಸೆಳೆಯುತ್ತಿವೆ.

ಮಾರುತಿ ಸುಜುಕಿಯು ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಎರಡು ಮಾದರಿಯ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರು ಮಾದರಿಗಳನ್ನು ಅರೆನಾ ಮಾರಾಟ ಮಳಿಗೆಗಳಲ್ಲಿ ಮತ್ತು ಪ್ರೀಮಿಯಂ ಕಾರು ಮಾದರಿಗಳನ್ನು ನೆಕ್ಸಾ ಮಳಿಗೆಗಳಲ್ಲಿ ಮಾರಾಟ ಮಾಡುತ್ತದೆ.

ಅರೆನಾದಲ್ಲಿ ಎಸ್-ಪ್ರೆಸ್ಸೊ, ಸ್ವಿಫ್ಟ್, ವಿಟಾರಾ ಬ್ರೆಝಾ, ಆಲ್ಟೊ, ವ್ಯಾಗನ್‌ಆರ್, ಡಿಸೈರ್, ಇಕೋ, ಸೆಲೆರಿಯೊ, ಎರ್ಟಿಗಾ ಕಾರುಗಳ ಮಾರಾಟ ಹೊಂದಿದ್ದರೆ ನೆಕ್ಸಾದಲ್ಲಿ ಇಗ್ನಿಸ್, ಬಲೆನೊ, ಎರ್ಟಿಗಾ ಎಕ್ಸ್6, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳ ಮಾರಾಟ ಸೌಲಭ್ಯ ಹೊಂದಿದೆ.

ಮಾರುತಿ ಸುಜುಕಿಯು ಪರಿಚಯಿಸಿರುವ ಹೊಸ ಡಿಜಿಟಲ್ ಫೈನಾನ್ಸ್ ಪ್ಲ್ಯಾಟ್‌ಫಾರ್ಮ್ ಸೇವೆಗಳು ನೆಕ್ಸಾ ಮತ್ತು ಅರೆನಾದಲ್ಲಿನ ಎಲ್ಲಾ ಕಾರು ಮಾದರಿಗಳಿಗೂ ಅನ್ವಯವಾಗಲಿದ್ದು, ಹೊಸ ಕಾರು ಖರೀದಿದಾರರಿಗೆ ಎಂಡ್-ಟು-ಎಂಡ್ ಮತ್ತು ಲೈವ್ ಕಾರ್ ಫೈನಾನ್ಸ್ ಸೇವೆ ಒದಗಿಸುವ ಗುರಿ ಹೊಂದಿದೆ.SHARE THIS

Author:

0 التعليقات: