Tuesday, 31 August 2021

 ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರು ಹೆಚ್ಚಳ  ಒಂದೇ ವರ್ಷದಲ್ಲಿ 165 ರೂ. ಏರಿಕೆ

ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರು ಹೆಚ್ಚಳ ಒಂದೇ ವರ್ಷದಲ್ಲಿ 165 ರೂ. ಏರಿಕೆ


 ಅಡುಗೆ ಅನಿಲ ಸಿಲಿಂಡರ್ ಬೆಲೆ 25 ರು ಹೆಚ್ಚಳ
ಒಂದೇ ವರ್ಷದಲ್ಲಿ 165 ರೂ. ಏರಿಕೆ

ನವದೆಹಲಿ: ಕೊರೊನಾ ಸಾಂಕ್ರಾಮಿಕದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೆ ಕಹಿಸುದ್ದಿ ಸಿಕ್ಕಿದೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಮತ್ತೆ ಏರಿಕೆ ಮಾಡಲಾಗಿದೆ. ಸೆಪ್ಟೆಂಬರ್ 01ರಿಂದ ಅಡುಗೆ ಅನಿಲ ಪ್ರತಿ ಸಿಲಿಂಡರ್ ಮೇಲೆ ಹೆಚ್ಚುವರಿ 25 ರು ತೆರಬೇಕಾಗುತ್ತದೆ.

ಪರಿಷ್ಕೃತ ದರ ಪಟ್ಟಿ ಬುಧವಾರದಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ಹೇಳಿವೆ. ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ. ಏರಿಕೆ ಮಾಡಿದ್ದಲ್ಲದೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 75 ರೂ. ನಷ್ಟು ಏರಿಸಲಾಗಿದೆ.

ಬೆಲೆ ಹೆಚ್ಚಳದ ಬಳಿಕ ರಾಜಧಾನಿ ದೆಹಲಿಯಲ್ಲಿ ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ಬೆಲೆ 884.50 ರು ಪ್ರತಿ ಸಿಲಿಂಡರ್ ಆಗಿದೆ. ಜುಲೈ 1ರಂದು ಸಿಲಿಂಡರ್ ಬೆಲೆ 25.50 ರು ಹೆಚ್ಚಿಸಲಾಗಿತ್ತು. ಆಗಸ್ಟ್ 17ರಂದು ಮತ್ತೊಮ್ಮೆ 25 ರು ಹೆಚ್ಚಳವಾಗಿತ್ತು.

ಬೆಂಗಳೂರು ನಗರದಲ್ಲಿ ಆಗಸ್ಟ್ ತಿಂಗಳಲ್ಲಿ ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ 837.50 ರೂ.ಗಳಿಂದ 863 ರೂ.ಗಳಿಗೆ ಏರಿಕೆಯಾಗಿತ್ತು. ಸೆ.1ರಿಂದ 888.20 ರು ನೀಡಬೇಕಾಗುತ್ತದೆ.

ಮೇ 1, 2014ರಲ್ಲಿ 410.50 ರು ಇದ್ದ ಸಿಲಿಂಡರ್ ಬೆಲೆ ದ್ವಿಗುಣವಾಗಿ ಈಗ ಸರಾಸರಿ 859.50 ರು ನಷ್ಟಾಗಿದೆ. ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ 1 ಮತ್ತು 15ನೇ ತಾರೀಕಿನ ಬಳಿಕ ಸಿಲಿಂಡರ್ ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ. ಬೆಲೆ ಏರಿಕೆಯಾಗುತ್ತಲೇ ಹೋಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.


 ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ ದಾಳಿ:   8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ

ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ ದಾಳಿ: 8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ

ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ ದಾಳಿ: 
8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ

ನೈರುತ್ಯ ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ ದಾಳಿ ನಡೆಸಿದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದು, ವಿಮಾನವೊಂದಕ್ಕೆ ಹಾನಿ ಸಂಭವಿಸಿದೆ ಎಂದು ಸೌದಿಯ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಅಭಾ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಇದು ಎರಡನೇ ಡ್ರೋನ್‌ ದಾಳಿಯಾಗಿದೆ ಎಂದು ತಿಳಿದು ಬಂದಿದೆ. ಇದುವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆಗಳೂ ಹೊತ್ತುಕೊಂಡಿಲ್ಲ ಎನ್ನಲಾಗಿದೆ.

ಯೆಮೆನ್‌ ನಲ್ಲಿ ಸೌದಿ ನೇತೃತ್ವದ ಸೇನಾ ಒಕ್ಕೂಟವು ಇರಾನ್‌ ಬೆಂಬಲಿತ ಶಿಯಾ ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದು, ಈ ದಾಳಿಯ ಬಗ್ಗೆ ಹಾಗೂ ಸಂಭವಿಸಿದ ಸಾವು ನೋವುಗಳ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಒಕ್ಕೂಟವು, ತನ್ನ ಪಡೆಗಳು ಸ್ಫೋಟಕ ಡ್ರೋನ್‌ ಅನ್ನು ʼತಡೆದಿದೆʼ ಎಂದು ಮಾತ್ರ ಹೇಳಿಕೆ ನೀಡಿದೆ.

2015 ರಿಂದ, ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ವಿರುದ್ಧ ಹೋರಾಡುತ್ತಿರುವ ಯೆಮೆನ್‌ನ ಹೌದಿ ಬಂಡುಕೋರರು ಸೌದಿ ಅರೇಬಿಯಾದಲ್ಲಿ ಮಿಲಿಟರಿ ಸ್ಥಾಪನೆಗಳು ಮತ್ತು ನಿರ್ಣಾಯಕ ತೈಲ ಮೂಲಸೌಕರ್ಯಗಳೊಂದಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿದ್ದಾರೆ.


 ಹಾವು ಕಡಿತದಿಂದ ಯುವಕ ಮೃತ್ಯು

ಹಾವು ಕಡಿತದಿಂದ ಯುವಕ ಮೃತ್ಯು

 

ಹಾವು ಕಡಿತದಿಂದ ಯುವಕ ಮೃತ್ಯು

ಬಂಟ್ವಾಳ, ಆ.31: ವಿಷಕಾರಿ ಹಾವಿನ ಕಡಿತಕ್ಕೊಳಗಾದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳವಾರ ಸಂಜೆಯ ಸುಮಾರಿಗೆ ಸಂಭವಿಸಿದೆ.

ಬಡಗಕಜೆಕಾರು ಗ್ರಾಮದ ಪಾಂಡವರ ಕಲ್ಲು ನಿವಾಸಿ ಉಸ್ಮಾನ್ ಅವರ ಪುತ್ರ ಆಸಿದ್ ( 26) ಮೃತಪಟ್ಟವರು.

ಆಸಿದ್ ಅವರು ಕೂಲಿ ಕಾರ್ಮಿಕನಾಗಿದ್ದು, ವಾಮದಪದವು ಬಳಿ ಮಂಗಳವಾರ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಾವಿನ ಕಡಿತಕ್ಕೊಳಗಾಗಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅವರು ಉಸ್ಮಾನ್ ಅವರ ಮೂವರು ಪುತ್ರರಲ್ಲಿ ಕೊನೆಯವರಾಗಿದ್ದು, ಅವಿವಾಹಿತರಾಗಿದ್ದರು.


ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.20.1 ಬೆಳವಣಿಗೆ ಕಂಡ ಭಾರತ

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.20.1 ಬೆಳವಣಿಗೆ ಕಂಡ ಭಾರತ

 

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಶೇ.20.1 ಬೆಳವಣಿಗೆ ಕಂಡ ಭಾರತ

ನವದೆಹಲಿ:ಭಾರತ 2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.20.1ರಷ್ಟು ಬೆಳವಣಿಗೆ ಕಂಡಿದೆ.

ಕೊವಿಡ್-19 ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್‌ಡೌನ್‌ ಹೇರಿದ್ದರಿಂದ ಕಳೆದ ವರ್ಷದ, ಅಂದರೆ FY21ರ ಏಪ್ರಿಲ್​ನಿಂದ ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 24.4ರಷ್ಟು ಕುಗ್ಗಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರದಲ್ಲಿ ಇದು ಭಾರೀ ಪ್ರಮಾಣದ ಕುಸಿತ ಎಂದು ಹೇಳಲಾಗಿತ್ತು.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯಲ್ಲಿ ಶೇ.18.5ರಷ್ಟು ಬೆಳವಣಿಗೆ

ಕಳೆದ ವರ್ಷ ಕಡಿಮೆ ಮೂಲಾಂಶ ಹಿನ್ನೆಲೆಯಲ್ಲಿ ಈ ತ್ರೈಮಾಸಿಕದಲ್ಲಿ ದಾಖಲೆಯ ಬೆಳವಣಿಗೆ ಆಗಿದೆ ಎಂಬುದು ಆಗಸ್ಟ್ 31ರಂದು ಬಿಡುಗಡೆಯಾದ ದತ್ತಾಂಶದಿಂದ ತಿಳಿದುಬಂದಿದೆ.

ರಾಯಿಟರ್ಸ್‌ ಸಮೀಕ್ಷೆ ಸತ್ಯವಾಗಿದ್ದು, 41 ಅರ್ಥಶಾಸ್ತ್ರಜ್ಞರ ಸಮೀಕ್ಷೆಯಂತೆ, 2021 ರ ಏಪ್ರಿಲ್-ಜೂನ್ ನಲ್ಲಿ ಭಾರತದ ಜಿಡಿಪಿ 20 ಪ್ರತಿಶತ ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿತ್ತು.

ಕಳೆದ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಕೊರೊನಾವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಿದ್ದರಿಂದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 24.4 ಪ್ರತಿಶತದಷ್ಟು ಕುಗ್ಗಿತ್ತು. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಆರ್ಥಿಕತೆಯಲ್ಲಿ ಕಂಡಂತಹ ಅತ್ಯಂತ ಕಡಿಮೆ ತ್ರೈಮಾಸಿಕ ಜಿಡಿಪಿ ದರವಾಗಿತ್ತು.

ಜೂನ್ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 21.6 ರಷ್ಟು ಬೆಳವಣಿಗೆಯನ್ನು ಆರ್ ಬಿಐ ಅಂದಾಜಿಸಿತ್ತು. ಜಿಡಿಪಿ ದರ ಭಾರೀ ಏರಿಕೆಗೆ ಪ್ರಮುಖ ಕಾರಣ ಕಳೆದ ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತವು ಕಾರಣವಾಗಿದೆ.

ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ಆಗಸ್ಟ್ 20 ರಿಂದ 25 ರವರೆಗಿನ 41 ಅರ್ಥಶಾಸ್ತ್ರಜ್ಞರ ಸಮೀಕ್ಷೆಯು ಭಾರತದ ಜಿಡಿಪಿ ಮೂರು ತಿಂಗಳ ಅವಧಿಯಲ್ಲಿ ಶೇಕಡಾ 20.0 ರಷ್ಟು ಬೆಳವಣಿಗೆಯಾಗಬಹುದೆಂದು ಭವಿಷ್ಯ ನುಡಿದಿದ್ದು, ಇದೀಗ ಆ ಅಂಕಿ ಅಂಶಗಳು ನಿಜವಾಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ದಾಖಲೆಯ ಶೇ. 24.4ರಷ್ಟು ಇಳಿಕೆಯಾಗಿದೆ.


 ಎಸ್ಸೆಸ್ಸಫ್ ಸಾಲೆತ್ತೂರ್ ಸೆಕ್ಟರ್ ರೀವಿವ್ ಅರ್ಧ ವಾರ್ಷಿಕ ಮಹಾಸಭೆ.

ಎಸ್ಸೆಸ್ಸಫ್ ಸಾಲೆತ್ತೂರ್ ಸೆಕ್ಟರ್ ರೀವಿವ್ ಅರ್ಧ ವಾರ್ಷಿಕ ಮಹಾಸಭೆ.

 

ಎಸ್ಸೆಸ್ಸಫ್ ಸಾಲೆತ್ತೂರ್ ಸೆಕ್ಟರ್ ರೀವಿವ್ ಅರ್ಧ ವಾರ್ಷಿಕ ಮಹಾಸಭೆ.

ಬಂಟ್ವಾಳ: ಎಸ್ಸೆಸ್ಸೆಫ್ ಸಾಲೆತ್ತೂರ್ ಸೆಕ್ಟರ್ ಇದರ ರೀವಿವ್ ಅರ್ಧ ವಾರ್ಷಿಕ ಮಹಾಸಭೆಯು ಆಗಸ್ಟ್ 29  ಆದಿತ್ಯವಾರದಂದು ಮೆದು ಮದ್ರಸಾ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಸಯ್ಯಿದ್ ಮದಕ ತಂಙಳ್‌ ಕಾರ್ಯಕರ್ತರಿಗೆ ವಿಶೇಷ ಉಪದೇಶ ನೀಡಿದರು, ಎಸ್.ಎಸ್.ಎಫ್ ಸಾಲೆತ್ತೂರ್ ಸೆಕ್ಟರ್ ಅಧ್ಯಕ್ಷರಾದ ನಾಸಿರ್ ಲತೀಫಿ ಕಟ್ಟತ್ತಿಲ‌ರವರ ಅಧ್ಯಕ್ಷತೆಯಲ್ಲಿ, ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಲಿ ಮದನಿ ಸಭೆಯನ್ನು ಉದ್ಘಾಟಿಸಿದರು, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ವರದಿ ವಾಚಿಸಿ, ಕೋಶಾಧಿಕಾರಿ ಫಾರೂಕ್ ಟಿ.ಯು ನಗರ ಲೆಕ್ಕ ಪತ್ರ ಮಂಡಿಸಿದರು. ಡಿವಿಷನ್ ವೀಕ್ಷಕರಾಗಿ ಉಸ್ಮಾನ್ ಸಖಾಫಿ ಸಜಿಪ, ಹಾರಿಸ್ ಕೆಂಜಿಲ ಆಗಮಿಸಿದ್ದರು, ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಆಬಿದ್ ನ‌ಈಮಿ ಸಭೆಯನ್ನುದ್ದೇಶಿಸಿ ಮಾತನಾಡಿದರು,

ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನೌಫಳ್ ಕಟ್ಟತ್ತಿಲ ಸ್ವಾಗತಿಸಿ, ಕಾರ್ಯದರ್ಶಿ ಶಫೀಕ್ ಕಟ್ಟತ್ತಿಲ ಸೆಂಟ್ರಲ್ ವಂದಿಸಿದರು.

 ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕುರಿತು ತಾಲಿಬಾನ್ ಜೊತೆ ಭಾರತ ಮಾತುಕತೆ

ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕುರಿತು ತಾಲಿಬಾನ್ ಜೊತೆ ಭಾರತ ಮಾತುಕತೆ

 ಆಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಕುರಿತು ತಾಲಿಬಾನ್ ಜೊತೆ ಭಾರತ ಮಾತುಕತೆ

ದೋಹಾ : ಕತಾರ್ ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಮಂಗಳವಾರ ದೋಹಾದಲ್ಲಿ ತಾಲಿಬಾನ್ ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್ಜಾಯ್ ಅವರನ್ನು ಭೇಟಿ ಮಾಡಿ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಶೀಘ್ರ ವಾಪಸಾತಿ ಕುರಿತು ಚರ್ಚೆ ನಡೆಸಿದರು.

ತಾಲಿಬಾನ್ ಪಕ್ಷದ ಮನವಿಯ ಮೇರೆಗೆ ದೋಹಾದ ಭಾರತದ ರಾಯಭಾರ ಕಚೇರಿಯಲ್ಲಿ ಈ ಸಭೆ ನಡೆದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

'ಆಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಶೀಘ್ರ ವಾಪಸಾತಿಯ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದೆ. ಭಾರತಕ್ಕೆ ಭೇಟಿ ನೀಡಲು ಬಯಸುವ ಆಫ್ಘನ್ ಪ್ರಜೆಗಳು, ವಿಶೇಷವಾಗಿ ಅಲ್ಪಸಂಖ್ಯಾತರ ಪ್ರಯಾಣದ ಬಗ್ಗೆಯೂ ಮಾತುಕತೆ ನಡೆಸಲಾಯಿತು' ಎಂದು ಹೇಳಿಕೆ ತಿಳಿಸಿದೆ.

ಆಫ್ಘಾನಿಸ್ತಾನದ ಮಣ್ಣನ್ನು ಯಾವುದೇ ರೀತಿಯಲ್ಲಿ ಭಾರತೀಯ ವಿರೋಧಿ ಚಟುವಟಿಕೆಗಳು ಮತ್ತು ಭಯೋತ್ಪಾದನೆಗೆ ಬಳಸಬಾರದು ಎಂದು ಭಾರತೀಯ ರಾಯಭಾರಿ ಭಾರತದ ಕಳವಳವನ್ನು ಎತ್ತಿದರು.

ಈ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಪರಿಹರಿಸಲಾಗುವುದು ಎಂದು ತಾಲಿಬಾನ್ ಪ್ರತಿನಿಧಿ ರಾಯಭಾರಿಗೆ ಭರವಸೆ ನೀಡಿದರು ಎಂದು ಹೇಳಿಕೆ ತಿಳಿಸಿದೆ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಸೋಮವಾರ ಇಂಡಿಯಾ ಟುಡೇಗೆ ಮಾತನಾಡಿ, ಭಾರತವು ಈ ಪ್ರದೇಶದ ಪ್ರಮುಖ ದೇಶವಾಗಿದ್ದು, ಆಫ್ಘಾನಿಸ್ತಾನದ ಹೊಸ ಆಡಳಿತವು ಅವರಿಗೆ ಬೆದರಿಕೆಯಾಗಿರುವುದಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸಂದರ್ಶನವೊಂದರಲ್ಲಿ ಜಬಿಹುಲ್ಲಾ ಮುಜಾಹಿದ್ ಅವರು ಆಫ್ಘಾನಿಸ್ತಾನದೊಂದಿಗೆ ಭಾರತದ ಉತ್ತಮ ಸಂಬಂಧವನ್ನು ವಿವರಿಸಿದರು ಮತ್ತು ತಾಲಿಬಾನ್ ಅಡಿಯಲ್ಲಿ ರಚಿಸಲಾದ ಹೊಸ ಸರ್ಕಾರ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ ಎಂದು ಹೇಳಿದರು.


 ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ನಿರ್ಧಾರ :  ಬೈಡನ್

ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ನಿರ್ಧಾರ : ಬೈಡನ್


 ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ನಿರ್ಧಾರ :
ಬೈಡನ್

ವಾಷಿಂಗ್ಟನ್: 20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಅಫ್ಗಾನಿಸ್ತಾನದಿಂದ ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡಿರುವುದು ಅತ್ಯುತ್ತಮ ನಿರ್ಧಾರ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಮರ್ಥಿಸಿಕೊಂಡಿದ್ದಾರೆ.

ಮಂಗಳವಾರ ಶ್ವೇತಭವನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಅಮೆರಿಕದ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯುದ್ಧದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು ಬೈಡನ್ ಹೇಳಿದ್ದಾರೆ.

'ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಾಗ ಈ ಯುದ್ಧವನ್ನು ಕೊನೆಗೊಳಿಸುವುದಾಗಿ ಅಮೆರಿಕದ ಜನರಿಗೆ ಭರವಸೆಯನ್ನು ಕೊಟ್ಟಿದ್ದೇನೆ. ನಾನು ಆ ಬದ್ಧತೆಯನ್ನು ಗೌರವಿಸುತ್ತೇನೆ ' ಎಂದು ಹೇಳಿದ್ದಾರೆ.

'ಜಗತ್ತು ಬದಲಾಗುತ್ತಿದ್ದು, ಅಮೆರಿಕ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಚೀನಾದಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದೇವೆ. ರಷ್ಯಾದಿಂದಲೂ ಅನೇಕ ಕ್ಷೇತ್ರಗಳಲ್ಲಿ ಸ್ಪರ್ಧೆ ಎದುರಾಗಿದೆ. ಸೈಬರ್ ದಾಳಿ ಮತ್ತು ಪರಮಾಣು ಪ್ರಸರಣದ ಸವಾಲುಗಳು ನಮ್ಮ ಮುಂದಿದೆ' ಎಂದು ಹೇಳಿದ್ದಾರೆ.


 ರಾಜ್ಯದಲ್ಲಿ ಸೆ.5 ರವರೆಗೆ ಭಾರೀ ಮಳೆ :   ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್' ಘೋಷಣೆ

ರಾಜ್ಯದಲ್ಲಿ ಸೆ.5 ರವರೆಗೆ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್' ಘೋಷಣೆ


 ರಾಜ್ಯದಲ್ಲಿ ಸೆ.5 ರವರೆಗೆ ಭಾರೀ ಮಳೆ : 
ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್' ಘೋಷಣೆ

ಬೆಂಗಳೂರು : ಸೆಪ್ಟೆಂಬರ್ ಆರಂಭದಿಂದಲೇ ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ರಾಮನಗರದಲ್ಲಿ ಸೆಪ್ಟೆಂಬರ್ 3 ರಿಂದ ಮುಂದಿನ ಎರಡು ದಿನ ಹಾಗೂ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಸೆಪ್ಟೆಂಬರ್ 5 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಇಂದು ಮತ್ತು ನಾಳೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೆ. 3ರಿಂದ 5ರವರೆಗೂ ಮಳೆಯ ಅಬ್ಬರ ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗಲಿದೆ.

ಇಂದಿನಿಂದ ಸೆಪ್ಟೆಂಬರ್ 2ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದು, ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.


 US ಸೈನ್ಯ ಸಹಾಯಕನ ಮೃತ ದೇಹವನ್ನ  ಹೆಲಿಕಾಪ್ಟರ್‌ʼಗೆ ನೇತು ಹಾಕಿ ಗಸ್ತು ತಿರುಗಿದ ತಾಲಿಬಾನ್

US ಸೈನ್ಯ ಸಹಾಯಕನ ಮೃತ ದೇಹವನ್ನ ಹೆಲಿಕಾಪ್ಟರ್‌ʼಗೆ ನೇತು ಹಾಕಿ ಗಸ್ತು ತಿರುಗಿದ ತಾಲಿಬಾನ್

US ಸೈನ್ಯ ಸಹಾಯಕನ ಮೃತ ದೇಹವನ್ನ
ಹೆಲಿಕಾಪ್ಟರ್‌ʼಗೆ ನೇತು ಹಾಕಿ ಗಸ್ತು ತಿರುಗಿದ ತಾಲಿಬಾನ್

ಡಿಜಿಟಲ್‌ ಡೆಸ್ಕ್ :‌ ಅಫ್ಘಾನಿಸ್ತಾನ ದೇಶ ಈ ಶತಮಾನದ ಕೆಟ್ಟ ದುರಂತವನ್ನ ಎದುರಿಸುತ್ತಿದ್ದು, ತಾಲಿಬಾನ್ ಮತ್ತೊಮ್ಮೆ ಸಂಪೂರ್ಣವಾಗಿ ದೇಶದ ಚುಕ್ಕಾಣಿ ಹಿಡಿದಿದೆ. ಯುಎಸ್ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದೆ ಸರಿದಿದ್ದು, ಈಗ ತಾಲಿಬಾನ್ ತನ್ನ ಕ್ರೂರ ರೂಪಕ್ಕೆ ಮರಳಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬನನ್ನ ಹಗ್ಗದಿಂದ ನೇಣು ಬಿಗಿದು ಹೆಲಿಕಾಪ್ಟರ್ʼಗೆ ನೇತು ಹಾಕಲಾಗಿದೆ. ಈ ವಿಮಾನವನ್ನ ಕಂದಹಾರ್‌ನ ಕೆಲವು ಪ್ರದೇಶದಲ್ಲಿ ಹಾರಿಸಲಾಗುತ್ತಿದ್ದು, ಗಲ್ಲಿಗೇರಿಸಿದ ವ್ಯಕ್ತಿ ಯುಎಸ್ ಸೈನ್ಯದ ಸಹಾಯಕ ಎಂದು ಹೇಳಲಾಗ್ತಿದೆ.

ತಾಲಿಬಾನ್ ಒಬ್ಬ ವ್ಯಕ್ತಿಗೆ ಇಂತಹ ಕ್ರೂರ ಶಿಕ್ಷೆಯನ್ನ ನೀಡಿದೆ ಎಂದು ನಂಬಲಾಗಿದೆ. ಕಂದಹಾರ್ ಪ್ರಾಂತ್ಯದಲ್ಲಿ ಕ್ರೂರ ತಾಲಿಬಾನ್ ಒಬ್ಬ ವ್ಯಕ್ತಿಯನ್ನ ಕೊಂದು ಆತನ ಶವವನ್ನ ಯುಎಸ್ ಮಿಲಿಟರಿ ಹೆಲಿಕಾಪ್ಟರ್‌ಗೆ ಕೊಂಡೊಯ್ದು ಗಸ್ತು ತಿರುಗಿಸಿ ಬೀದಿ ಯುದ್ದಕ್ಕೂ ಕೊಂಡೊಯ್ದಿದೆ ಎಂದು ಹಲವಾರು ಪತ್ರಕರ್ತರು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವ್ಯಕ್ತಿಯು ಯುಎಸ್ ಸೈನ್ಯದ ಸಹಾಯಕ ಎಂದು ಹೇಳಲಾಗುತ್ತಿದೆ. ಫುಟೇಜ್‌ನಲ್ಲಿ, ಒಬ್ಬ ವ್ಯಕ್ತಿ ಯುಎಸ್ ಮಿಲಿಟರಿ ಹೆಲಿಕಾಪ್ಟರ್‌ನಿಂದ ನೇತಾಡುತ್ತಿರುವುದು ಕಂಡು ಬರುತ್ತದೆ.

ಯುಎಸ್ ಮಿಲಿಟರಿ ಹೋದ ನಂತ್ ರತಾಲಿಬಾನ್ ಇದನ್ನು ಕಂದಹಾರ್ ಪ್ರಾಂತ್ಯದಲ್ಲಿ ಗಸ್ತು ತಿರುಗಲು ಬಳಸುತ್ತಿದೆ. ವೀಡಿಯೊವನ್ನು ಸಾಮಾನ್ಯ ಕ್ಯಾಮರಾಗಳಿಂದ ಚಿತ್ರೀಕರಿಸಲಾಗಿದೆ, ಈ ಕಾರಣದಿಂದಾಗಿ ಆತ ಬದುಕಿದ್ದಾನೋ ಇಲ್ಲವೋ ಎಂದು ಹೇಳುವುದು ತುಂಬಾ ಕಷ್ಟಕರವಾಗಿದೆ. ಇನ್ನು ತಾಲಿಬಾನಿಗಳು ಆ ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿ ಸಾಯಿಸಿದರು ಎಂದು ಹಲವು ವರದಿಗಳಲ್ಲಿ ಹೇಳಲಾಗಿದೆ.

ಕಂದಹಾರ್ʼನಲ್ಲಿ ಗಸ್ತು ತಿರುಗುತ್ತಿದೆ ತಾಲಿಬಾನ್ ವಾಯುಪಡೆ

ತಾಲಿಬಾನಿಗೆ ಲಿಂಕ್ ಮಾಡಲಾಗಿದೆ ಎಂದು ಹೇಳಿಕೊಳ್ಳುವ ಟ್ವಿಟರ್ ಖಾತೆಯಾದ ತಾಲಿಬ್ ಟೈಮ್ಸ್ ಹಂಚಿಕೊಂಡ ತುಣುಕು, 'ನಮ್ಮ ವಾಯುಪಡೆ! ಈ ಸಮಯದಲ್ಲಿ, ಇಸ್ಲಾಮಿಕ್ ಎಮಿರೇಟ್‌ನ ವಾಯುಪಡೆಯ ಹೆಲಿಕಾಪ್ಟರ್‌ಗಳು ಕಂದಹಾರ್ ನಗರದ ಮೇಲೆ ಹಾರುತ್ತಿವೆ ಮತ್ತು ನಗರದಲ್ಲಿ ಗಸ್ತು ತಿರುಗುತ್ತಿವೆ' ಎಂದಿದೆ.

ಯುಎಸ್ ಸೈನಿಕರು ಶಸ್ತ್ರಾಸ್ತ್ರಗಳು, ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನ ಬಿಟ್ಟಿದ್ದಾರೆ..!

ಡೈಲಿ ಮೇಲ್ ಪ್ರಕಾರ, ಕಳೆದ ತಿಂಗಳು ಕನಿಷ್ಠ 7 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನ ಯುಎಸ್ ಆಫ್ಘಾನಿಸ್ತಾನಕ್ಕೆ ಪೂರೈಸಿದೆ. 20 ವರ್ಷಗಳಲ್ಲಿ, ಅಮೆರಿಕನ್ನರು ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನ ಅಲ್ಲಿ ಜಮಾ ಮಾಡಿದ್ದರು. ಆದ್ರೆ, ಸಧ್ಯ ಸೈನಿಕರು ಅಫ್ಘಾನಿಸ್ತಾನದಲ್ಲಿ ತಮ್ಮೆಲ್ಲಾ ರಕ್ಷಣಾ ಸಾಧನಗಳನ್ನು ಬಿಟ್ಟು ಹಿಂದಿರಗಿದ್ದಾರೆ ಎನ್ನಲಾಗ್ತಿದೆ.

ಅಮೆರಿಕ ಎಲ್ಲಾ ಪ್ರಮುಖ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಿದೆ..!

ಆಗಸ್ಟ್ 31 ರಂದು, ಯುಎಸ್ ಪಡೆಗಳು ಅಫ್ಘಾನಿಸ್ತಾನವನ್ನ ತೊರೆದವು. ಅಫ್ಘಾನಿಸ್ತಾನವನ್ನು ತೊರೆದ ತಕ್ಷಣ, ಯುಎಸ್ ಮಿಲಿಟರಿ 73 ವಿಮಾನಗಳು, 27 ಹಮ್ವೀಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಹೆಚ್ಚಿನ ಸಾಮರ್ಥ್ಯದ ರಕ್ಷಣಾ ಸಾಧನಗಳನ್ನು ಹೊರಡುವ ಮೊದಲು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೇಳಿತು.


 ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ 756 ಚದರ ಕಿ.ಮೀ ಅರಣ್ಯ ನಾಶ

ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ 756 ಚದರ ಕಿ.ಮೀ ಅರಣ್ಯ ನಾಶ

  ಕ್ಯಾಲಿಫೋರ್ನಿಯಾ: ಭೀಕರ ಕಾಡ್ಗಿಚ್ಚಿಗೆ 756 ಚದರ ಕಿ.ಮೀ ಅರಣ್ಯ ನಾಶ

ಕ್ಯಾಲಿಫೋರ್ನಿಯಾ, ಆ.31: ಕ್ಯಾಲಿಫೋರ್ನಿಯಾದ ಸೌತ್ಲೇಕ್ ತಾಹೊ ನಗರದ ಬಳಿಯ ಅರಣ್ಯದಲ್ಲಿ ಆಗಸ್ಟ್ 14ರಂದು ಕಾಣಿಸಿಕೊಂಡ ಕಾಡ್ಗಿಚ್ಚು ಕ್ರಮೇಣ ನಗರಪ್ರದೇಶದತ್ತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದುವರೆಗೆ ಸುಮಾರು 256 ಚದರ ಕಿ.ಮೀ ಅರಣ್ಯ ಬೆಂಕಿಯಿಂದ ಸುಟ್ಟುಹೋಗಿದ್ದು 600ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದೆ. ಇನ್ನೂ 2000 ಕಟ್ಟಡಗಳು ಅಪಾಯದ ಅಂಚಿನಲ್ಲಿವೆ. ಈ ಮಧ್ಯೆ ಕ್ಯಾಲಿಫೋರ್ನಿಯಾದ ಪಕ್ಕದಲ್ಲಿರುವ ನೆವಾಡದಲ್ಲಿ ಸೋಮವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ರೆಸಾರ್ಟ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಸೌತ್ಲೇಕ್ ತಾಹೊದಲ್ಲಿ ಬೇಸಿಗೆ ರಜೆಯ ಮೋಜಿಗಾಗಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಕಾಡ್ಗಿಚ್ಚಿನ ಹಿನ್ನೆಲೆಯಲ್ಲಿ ತಕ್ಷಣ ನಗರದಿಂದ ತೆರಳುವಂತೆ ಘೋಷಣೆ ಹೊರಡಿಸಿದ ಬೆನ್ನಲ್ಲೇ ರಸ್ತೆ, ಹೆದ್ದಾರಿಗಳಲ್ಲಿ ವಾಹನಗಳ ಸಾಲು ಬೆಳೆದು ಟ್ರಾಫಿಕ್ ಜ್ಯಾಂ ಉಂಟಾಗಿದೆ. ನೆವಾಡದ ನಿವಾಸಿಗಳಿಗೂ ಸ್ಥಳಾಂತರಕ್ಕೆ ಸಿದ್ಧವಾಗಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಸೌತ್ ಲೇಕ್ ತಾಹೊದ ಪ್ರಮುಖ ಆಸ್ಪತ್ರೆ 'ಬಾರ್ಟನ್ ಮೆಮೋರಿಯಲ್ ಹಾಸ್ಟಿಟಲ್'ನಲ್ಲಿದ್ದ ಹಲವು ರೋಗಿಗಳನ್ನು ಸುರಕ್ಷಿತ ಸ್ಥಳದಲ್ಲಿದ್ದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಲ್ ಡೊರಾಡೊ ನಗರದಲ್ಲಿನ ಜೈಲಿನಲ್ಲಿದ್ದ ಖೈದಿಗಳನ್ನೂ ನೆರೆಯ ಗ್ರಾಮದ ಜೈಲಿಗೆ ಸ್ಥಳಾಂತರಿಸಲಾಗಿದೆ. ಬುಧವಾರ ಕ್ಯಾಲಿಫೋರ್ನಿಯಾದಲ್ಲಿ ತೀವ್ರ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಇದರಿಂದ ಕಾಡ್ಗಿಚ್ಚು ಮತ್ತಷ್ಟು ತೀವ್ರವಾಗಿ ಹರಡಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.


 ಅಮೆರಿಕದ ಸೇನೆ ವಾಪಸ್:ತಾಲಿಬಾನ್ ಹರ್ಷ

ಅಮೆರಿಕದ ಸೇನೆ ವಾಪಸ್:ತಾಲಿಬಾನ್ ಹರ್ಷ


  ಅಮೆರಿಕದ ಸೇನೆ ವಾಪಸ್:ತಾಲಿಬಾನ್ ಹರ್ಷ

ಕಾಬೂಲ್, ಆ.31: ಅಮೆರಿಕದ ಸೇನೆ ಹಿಂಪಡೆವ ಪ್ರಕ್ರಿಯೆ ನಿಗದಿತ ಗಡುವಿಗೆ ಒಂದು ದಿನ ಮುಂಚಿತವಾಗಿ ಪೂರ್ಣಗೊಳ್ಳುತ್ತಿದ್ದಂತೆಯೇ "ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ" ಎಂದು ತಾಲಿಬಾನ್ ಹರ್ಷ ವ್ಯಕ್ತಪಡಿಸಿದೆ.

ಎರಡು ದಶಕಗಳ ಸಂಘರ್ಷದ ಬಳಿಕ ಅಮೆರಿಕ ತನ್ನ ಪಡೆಯನ್ನು ಸಂಪೂರ್ಣ ವಾಪಸ್ ಕರೆಸಿಕೊಂಡಿರುವುದಾಗಿ ಘೋಷಿಸುತ್ತಿದ್ದಂತೆಯೇ, ಸಂಭ್ರಮಾಚರಣೆ ಅಂಗವಾಗಿ ಸಾಂಪ್ರದಾಯಿಕ ಕುಶಾಲತೋಪುಗಳನ್ನು ಕಾಬೂಲಿನಲ್ಲಿ ಸಿಡಿಸಲಾಯಿತು. "ಅಮೆರಿಕದ ಸೈನಿಕರು ಕಾಬಲ್ ವಿಮಾನ ನಿಲ್ದಾಣ ತೊರೆದಿದ್ದಾರೆ ಮತ್ತು ನಮ್ಮ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ" ಎಂದು ತಾಲಿಬಾನ್ ಸಂಭ್ರಮಿಸಿದೆ.

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ ಹಿರಿಯ ತಾಲಿಬಾನ್ ಪದಾಧಿಕಾರಿ ಅನಸ್ ಹಖ್ಖಾನಿ, "ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲು ಹೆಮ್ಮೆ ಎನಿಸುತ್ತಿದೆ" ಎಂದು ಹೇಳಿದ್ದಾರೆ. "20 ವರ್ಷಗಳ ಧರ್ಮಯುದ್ಧ, ತ್ಯಾಗ ಮತ್ತು ಸಂಕಷ್ಟದ ಬಳಿಕ ನಾವು ಮತ್ತೆ ಇತಿಹಾಸ ಸೃಷ್ಟಿಸಿದ್ದೇವೆ ಮತ್ತು ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದೇವೆ ಎನ್ನಲು ಸಂತಸವಾಗುತ್ತಿದೆ" ಎಂದು ಬಣ್ಣಿಸಿದ್ದಾರೆ.

ಅಮೆರಿಕ ಸೇನೆ ವಾಪಾಸ್ಸಾಗಿ ಪ್ರಕ್ರಿಯೆ ಪೂರ್ಣಗೊಳಿಸಿದ ಹೇಳಿಕೆ ನೀಡುತ್ತಿದ್ದಂತೆಯೇ ಸಣ್ಣ ಶಸ್ತ್ರಾಸ್ತ್ರಗಳು ಮತ್ತು ದೊಡ್ಡ ಮಿಷಿನ್‌ಗನ್ ಗುಂಡುಗಳು 45 ನಿಮಿಷಗಳ ಕಾಲ ಸಂಭ್ರಮಾಚರಣೆ ಅಂಗವಾಗಿ ಹಾರಿದವು ಎಂದು ಎಎಫ್‌ಪಿ ವರದಿ ಮಾಡಿದೆ.

"ಅಕ್ಕಪಕ್ಕ ನಿಂತವರಿಗೆ ಗಾಯಗಳಾಗುವ ಸಾಧ್ಯತೆ ಇರುವುದರಿಂದ ತಾಲಿಬಾನಿ ಹೋರಾಟಗಾರರು ಕುಶಾಲತೋಪು ಹಾರಿಸುವುದು ಸ್ಥಗಿತಗೊಳಿಸುವಂತೆ ಹಖ್ಖಾನಿ ಗುಂಪು ಟ್ವೀಟ್‌ನಲ್ಲಿ ಸಲಹೆ ಮಾಡಿದೆ.

"ಎಲ್ಲ ಅಮೆರಿಕನ್ ಪಡೆಗಳು ಅಫ್ಘಾನಿಸ್ತಾನ ತೊರೆದಿವೆ. ನೀವು ಸಂಭ್ರಮಾಚರಣೆಯ ಕುಶಾಲತೋಪು ಹಾರುವ ಶಬ್ದ ಆಲಿಸಬಹುದು" ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರೀಮಿ ಹೇಳಿಕೆ ನೀಡಿದ್ದಾರೆ.


 ತೆಲಂಗಾಣ: ಪ್ರವಾಹದಲ್ಲಿ 7 ಮಂದಿ ಸಾವು

ತೆಲಂಗಾಣ: ಪ್ರವಾಹದಲ್ಲಿ 7 ಮಂದಿ ಸಾವು


 ತೆಲಂಗಾಣ: ಪ್ರವಾಹದಲ್ಲಿ 7 ಮಂದಿ ಸಾವು

ಹೈದರಾಬಾದ್‌: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ನವ ವಿವಾಹಿತೆ ಸೇರಿದಂತೆ ಕನಿಷ್ಠ ಏಳು ಮಂದಿ ಕೊಚ್ಚಿ ಹೋಗಿದ್ದಾರೆ.

ವಿಕಾರಾಬಾದ್‌ ಜಿಲ್ಲೆಯಲ್ಲಿ ಮದುವೆ ಮುಗಿಸಿಕೊಂಡು ವಧು-ವರ ಹಾಗೂ ಅವರ ಸಂಬಂಧಿಕರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರವಾಹದ ರಭಸದಲ್ಲಿ ಸಿಲುಕಿದ್ದಾರೆ. ವಧು ಪ್ರವಾಲಿಕಾ ಮತ್ತು ವರ ನವಾಜ್‌ ರೆಡ್ಡಿ ಜೊತೆಗೆ ಇತರೆ ನಾಲ್ಕು ಜನ ಪ್ರಯಾಣಿಸುತ್ತಿದ್ದರು. ವಧು, ಆಕೆಯ ಅತ್ತಿಗೆ ಶ್ವೇತಾ ಮತ್ತು ಅವರ ಎಂಟು ವರ್ಷ ವಯಸ್ಸಿನ ಮಗ ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆ ಸೋಮವಾರ ವರದಿಯಾಗಿದೆ.

ವಾರಂಗಲ್‌ನಲ್ಲಿ ಭಾನುವಾರ ರಾತ್ರಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರ ದೇಹ ಚರಂಡಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿತ್ತು. ಅವರನ್ನು ಶಿವನಗರದ ವೊರ್‍ರೊಮ್‌ ಕ್ರಾಂತಿ ಕುಮಾರ್‌ ಎಂದು ಗುರುತಿಸಲಾಗಿದೆ ಹಾಗೂ ಲ್ಯಾಪ್‌ಟಾಪ್‌ ಸಹ ದೊರೆತಿದೆ.

ಶಂಕರಪಲ್ಲಿಯಲ್ಲಿ 70ರ ವಯೋಮಾನದ ವ್ಯಕ್ತಿಯೊಬ್ಬರು ಕಾರಿನೊಂದಿಗೆ ಕೊಚ್ಚಿ ಹೋಗಿರುವುದು ಹಾಗೂ ಅದಿಲಾಬಾದ್‌ನಲ್ಲಿ 30 ವರ್ಷ ವಯಸ್ಸಿನ ಕಾರ್ಮಿಕರೊಬ್ಬರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಇಬ್ಬರು ಯುವತಿಯರು ಸಹ ನೀರಿನಲ್ಲಿ ಕೊಚ್ಚಿ ಹೋಗಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ರಾಜನ್ನ-ಸಿರಿಸಿಲ್ಲ ಜಿಲ್ಲೆಯಲ್ಲಿ ಹರಿಯುವ ನೀರಿನಲ್ಲಿ ಸಿಲುಕಿಕೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಿಂದ 12 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಹೈದರಾಬಾದ್‌, ಅದಿಲಾಬಾದ್‌, ನಿಜಾಮಾಬಾದ್‌, ಕರೀಂನಗರ್‌, ವಾರಂಗಲ್‌ ಹಾಗೂ ಖಮ್ಮುಂನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೃಷ್ಣ ಮತ್ತು ಗೋದಾವರಿ ನದಿಗಳ ನೀರಿನ ಹರಿವು ಹೆಚ್ಚಳವಾಗಿದೆ.


 ರಾಜ್ಯದಲ್ಲಿ ಕೊರೋನಾ ಏರಿಳಿತ:   ಇಂದು 1,217 ಪ್ರಕರಣ ಪತ್ತೆ; 25 ಸಾವು!

ರಾಜ್ಯದಲ್ಲಿ ಕೊರೋನಾ ಏರಿಳಿತ: ಇಂದು 1,217 ಪ್ರಕರಣ ಪತ್ತೆ; 25 ಸಾವು!


 ರಾಜ್ಯದಲ್ಲಿ ಕೊರೋನಾ ಏರಿಳಿತ: 
ಇಂದು 1,217 ಪ್ರಕರಣ ಪತ್ತೆ; 25 ಸಾವು!

ಬೆಂಗಳೂರು: ಕೊರೋನಾ ಎರಡನೇ ಅಲೆಯಲ್ಲಿ ಮೊದಲ ಬಾರಿಗೆ ಸಾವಿರಕ್ಕಿಂತ ಕಡಿಮೆ ಬಂದಿದ್ದ ಪ್ರಕರಣಗಳ ಸಂಖ್ಯೆ ಇಂದು ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 1,217 ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 29,48,228ಕ್ಕೆ ಏರಿಕೆಯಾಗಿದೆ.

ಮಹಾಮಾರಿಗೆ 25 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,318ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ಬೆಂಗಳೂರಿನಲ್ಲಿ ಇಂದು 287 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,37,837ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಇಂದು 1,198 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,93,715ಕ್ಕೆ ಏರಿಕೆಯಾಗಿದೆ. ಇನ್ನು 18,386 ಸಕ್ರೀಯ ಪ್ರಕರಣಗಳಿವೆ.

ರಾಜ್ಯಾದ್ಯಂತ ಇಂದು 1,28,657 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,217 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.94ಕ್ಕೆ ಇಳಿದಿದೆ.


Friday, 27 August 2021

 ನೆಟ್ ವರ್ಕ್ ಸಮಸ್ಯೆ: ಆನ್ ಲೈನ್ ಕ್ಲಾಸ್ ಗಾಗಿ ಮರವೇರಿದ್ದ ವಿದ್ಯಾರ್ಥಿ ಬಿದ್ದು ತೀವ್ರ ಗಾಯ

ನೆಟ್ ವರ್ಕ್ ಸಮಸ್ಯೆ: ಆನ್ ಲೈನ್ ಕ್ಲಾಸ್ ಗಾಗಿ ಮರವೇರಿದ್ದ ವಿದ್ಯಾರ್ಥಿ ಬಿದ್ದು ತೀವ್ರ ಗಾಯ

 

ನೆಟ್ ವರ್ಕ್ ಸಮಸ್ಯೆ: ಆನ್ ಲೈನ್ ಕ್ಲಾಸ್ ಗಾಗಿ ಮರವೇರಿದ್ದ ವಿದ್ಯಾರ್ಥಿ ಬಿದ್ದು ತೀವ್ರ ಗಾಯ

ಕಾಸರಗೋಡು: ನೆಟ್ ವರ್ಕ್ ಸಮಸ್ಯೆಯಿಂದ ಮೊಬೈಲ್ ರೇಂಜ್  ಸಿಗದಿರುವ  ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿ ಆಲಿಸುವುದಕ್ಕಾಗಿ ಮರವೇರಿದ್ದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಕಣ್ಣೂರು ಕಣ್ಣವ ಬಳಿ ನಡೆದಿದೆ.

ಕಣ್ಣವ ನಿವಾಸಿ ಅನಂತು ಬಾಬು ಗಾಯಾಳು ವಿದ್ಯಾರ್ಥಿ. ಈತ ಪ್ಲಸ್ ವನ್ ಅಲೋಟ್ ಮೆಂಟ್ ವೀಕ್ಷಿಸಲು ಗುರುವಾರ ಸಂಜೆ ಮನೆ ಸಮೀಪದ ಮರವನ್ನೇರಿ ರೆಂಬೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಅನಂತುವಿನ ಬೆನ್ನು ಮೂಳೆಗೆ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕಾಲನಿಯಲ್ಲಿ 72 ರಷ್ಟು ವಿದ್ಯಾರ್ಥಿಗಳಿದ್ದಾರೆ. ಇವರು ಆನ್ ಲೈನ್ ತರಗತಿಗೆ  ರೇಂಜ್ ಹುಡುಕಿಕೊಂಡು ಗುಡ್ಡ ಬೆಟ್ಟ ಸುತ್ತಾಡಬೇಕು. ಇಲ್ಲದಿದ್ದಲ್ಲಿ ಮರವೇರಬೇಕಾದ ಅನಿವಾರ್ಯ ಸ್ಥಿತಿಯಿದೆ.

 ಕೋರಗೆರೆ: ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ಕೋರಗೆರೆ: ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ


 ಕೋರಗೆರೆ: ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ

ತುಮಕೂರು: ಅಂತರ್ಜಾತಿ ವಿವಾಹವಾಗಿರುವ ಕಾರಣಕ್ಕೆ ದಂಪತಿಗೆ ಸವರ್ಣೀಯರು ಹಲ್ಲೆ, ಕಿರುಕುಳ ನೀಡುತ್ತಿದ್ದು, ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಚಿ.ನಾ.ಹಳ್ಳಿ ತಾಲೂಕಿನ ಕೋರಗೆರೆ ಎಂಬಲ್ಲಿಂದ ಕೇಳಿಬಂದಿದೆ.

2007ರಲ್ಲಿ ಚಿ.ನಾ.ಹಳ್ಳಿ ತಾಲೂಕು ಕೋರಗೆರೆ ಗ್ರಾಮದ ದಲಿತ ಸಮುದಾಯದ ನಾಗರಾಜು ಎಂಬವರು ಮತ್ತು ಶೆಟ್ ಬಣಜಿಗ ಜಾತಿಯ ಮಹಿಳೆಯೊಂದಿಗೆ ಪ್ರೀತಿಸಿ ಮದುವೆಯಾಗಿ ಆದೇ ಗ್ರಾಮದಲ್ಲಿ ವಾಸವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಇದನ್ನು ಸಹಿಸದ ಗ್ರಾಮದ ಸವರ್ಣೀಯರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಈ ದಂಪತಿ ಆರೋಪಿಸಿದ್ದಾರೆ.

ತಮ್ಮ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡು, ಕೃಷಿ ಕೆಲಸದ ಜೊತೆಗೆ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಈ ನಡುವೆ ತಮ್ಮ ಮೇಲೆ ಹಲ್ಲೆ  ನಡೆದಿದೆ, ಅಲ್ಲದೆ ಗ್ರಾಮದಲ್ಲಿ ಇರಕೂಡದು ಎಂದು ಬಹಿಷ್ಕಾರ ಹಾಕಿದ್ದಾರೆ. ಕುಡಿಯುವ ನೀರು, ಅಂಗಡಿ ಸಾಮಾನುಗಳನ್ನು ನೀಡುತ್ತಿಲ್ಲ. ಈ ಬಗ್ಗೆ ಹುಳಿಯಾರು ಠಾಣೆ ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ತಿಪಟೂರು ಪೊಲೀಸರು ರಾಜಿ ಮಾಡಿಸಲು ಮುಂದಾಗಿದ್ದಾರೆ. ಹಾಗಾಗಿ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ‌ಮಾಡಿದ್ದೇವೆ. ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ನಮಗೆ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂದವರು ಮಾಧ್ಯಮದೆದುರು  ಮನವಿ ಮಾಡಿದ್ದಾರೆ.

 ಬಿಜೆಪಿ ಶಾಸಕನ ವಿರುದ್ಧದ ಪ್ರಕರಣ ಹಿಂಪಡೆಯಲು ಉತ್ತರಪ್ರದೇಶ ಸರಕಾರದ ಮನವಿ ತಿರಸ್ಕರಿಸಿದ ಮುಝಫರ್ ನಗರ ನ್ಯಾಯಾಲಯ

ಬಿಜೆಪಿ ಶಾಸಕನ ವಿರುದ್ಧದ ಪ್ರಕರಣ ಹಿಂಪಡೆಯಲು ಉತ್ತರಪ್ರದೇಶ ಸರಕಾರದ ಮನವಿ ತಿರಸ್ಕರಿಸಿದ ಮುಝಫರ್ ನಗರ ನ್ಯಾಯಾಲಯ


 ಬಿಜೆಪಿ ಶಾಸಕನ ವಿರುದ್ಧದ ಪ್ರಕರಣ ಹಿಂಪಡೆಯಲು ಉತ್ತರಪ್ರದೇಶ ಸರಕಾರದ ಮನವಿ ತಿರಸ್ಕರಿಸಿದ ಮುಝಫರ್ ನಗರ ನ್ಯಾಯಾಲಯ

ಲಕ್ನೊ: ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಬಿಜೆಪಿ ಶಾಸಕ ಉಮೇಶ್ ಮಲಿಕ್ ವಿರುದ್ಧದ ಎರಡು ಪ್ರಕರಣಗಳನ್ನು ಹಿಂಪಡೆಯುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಮನವಿಯನ್ನುಗುರುವಾರ ಉತ್ತರಪ್ರದೇಶದ ಮುಝಫರ್ ನಗರದಲ್ಲಿರುವ ವಿಶೇಷ ನ್ಯಾಯಾಲಯವು  ನಿರಾಕರಿಸಿದೆ ಎಂದು ಪಿಟಿಐ ವರದಿ ಮಾಡಿದೆ.

 ರಾಜ್ಯಗಳ ಹೈಕೋರ್ಟ್‌ಗಳ ಅನುಮತಿಯಿಲ್ಲದೆ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲಾಗುವುದಿಲ್ಲ ಎಂದು ಆಗಸ್ಟ್ 9 ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಬುಧನಾದ ಶಾಸಕರಾದ ಮಲಿಕ್ ಗುರುವಾರ ನ್ಯಾಯಾಲಯದ ಮುಂದೆ ಶರಣಾದರು ಹಾಗೂ  ಅವರ ವಿರುದ್ಧ ನೀಡಲಾದ ಜಾಮೀನು ರಹಿತ ವಾರಂಟ್ ಅನ್ನು ಹಿಂಪಡೆಯಲು ಪ್ರಯತ್ನಿಸಿದರು.

147 (ಗಲಭೆಗಾಗಿ ಶಿಕ್ಷೆ), 148 (ಗಲಭೆ, ಮಾರಕ ಆಯುಧ ಸಂಗ್ರಹ) ಹಾಗೂ  149 (ಕಾನೂನುಬಾಹಿರ ಸಭೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಂಎಲ್‌ಎ ಹಾಗೂ  ಇತರ ನಾಗರಿಕರ ವಿರುದ್ಧ  ಪೊಲೀಸರು ಪ್ರಕರಣ ದಾಖಲಿಸಿದ್ದರು.

 ಚಾಮರಾಜನಗರದಲ್ಲಿ ವಾರಾಂತ್ಯದ ಕರ್ಫ್ಯೂ ರದ್ದುಪಡಿಸಲು ಸಿಎಂ ಜತೆ ಚರ್ಚೆ: ಸಚಿವ ಸೋಮಶೇಖರ್

ಚಾಮರಾಜನಗರದಲ್ಲಿ ವಾರಾಂತ್ಯದ ಕರ್ಫ್ಯೂ ರದ್ದುಪಡಿಸಲು ಸಿಎಂ ಜತೆ ಚರ್ಚೆ: ಸಚಿವ ಸೋಮಶೇಖರ್


 ಚಾಮರಾಜನಗರದಲ್ಲಿ ವಾರಾಂತ್ಯದ ಕರ್ಫ್ಯೂ ರದ್ದುಪಡಿಸಲು ಸಿಎಂ ಜತೆ ಚರ್ಚೆ: ಸಚಿವ ಸೋಮಶೇಖರ್

ಚಾಮರಾಜನಗರ: ವಾರಾಂತ್ಯದ ಕರ್ಫ್ಯೂ ರದ್ದುಪಡಿಸುವ ಸಂಬಂಧ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುವುದಾಗಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸುತ್ತೂರಿ‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮನಗರದಲ್ಲಿ ಕೋವಿಡ್ ಕ್ಷೀಣಿಸಿದೆ. ವಾರಾಂತ್ಯದ ಕರ್ಫ್ಯೂ ಮುಂದುವರಿಸುವ ಆವಶ್ಯಕತೆ ಇಲ್ಲ. ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ.‌ ಇಂದು ಸಂಜೆ ಶನಿವಾರ ಮತ್ತು ರವಿವಾರ ವಾರಾಂತ್ಯದ ಕರ್ಫ್ಯೂ ಮುಂದುವರಿಸಬೇಕೋ ಬೇಡವೋ ಎಂದು ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದರು.

 ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಲ್ವಿಂದರ್ ರಾಜೀನಾಮೆ

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಲ್ವಿಂದರ್ ರಾಜೀನಾಮೆ


 ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಲ್ವಿಂದರ್ ರಾಜೀನಾಮೆ

ಚಂಡೀಗಡ: ಪಂಜಾಬ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಸಲಹೆಗಾರರಾಗಿರುವ ಮಲ್ವಿಂದರ್ ಸಿಂಗ್ ಮಾಲಿ ಶುಕ್ರವಾರ ರಾಜೀನಾಮೆ ನೀಡಿದರು. ಸಿಂಗ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪಕ್ಷದ ರಾಜ್ಯಾಧ್ಯಕ್ಷರು ಅವರನ್ನು ಪಕ್ಷದಿಂದ ಉಚ್ಚಾಟಿಸದೇ ಇದ್ದರೆ ಅವರನ್ನು ವಜಾ ಮಾಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದ ಮರುದಿನ ಸ್ವತಃ ಸಿಂಗ್ ರಾಜೀನಾಮೆ ನೀಡಿದ್ದಾರೆ.

 ಇತ್ತೀಚೆಗೆ ಫೇಸ್‌ಬುಕ್ ಪೋಸ್ಟ್‌ಗಳಲ್ಲಿ, ಮಾಲಿ ಅವರು ಭಾರತ ಹಾಗೂ  ಪಾಕಿಸ್ತಾನ ಎರಡೂ ದೇಶಗಳು ಕಾಶ್ಮೀರದಲ್ಲಿ ಕಾನೂನುಬಾಹಿರ ಆಕ್ರಮಿಸಿಕೊಂಡಿವೆ ಎಂದು  ಬರೆದಿದ್ದರು. ಇನ್ನೊಂದು ಪೋಸ್ಟ್ ನಲ್ಲಿ, ತಾಲಿಬಾನ್ ಕುರಿತಾಗಿ ಬರೆದಿದ್ದ ಸಿಂಗ್ : "ಈಗ ಸಿಖ್ಖರು ಹಾಗೂ  ಹಿಂದೂಗಳನ್ನು ರಕ್ಷಿಸುವುದು ಅವರ ಜವಾಬ್ದಾರಿಯಾಗಿದೆ. ಅವರು ಮೊದಲಿನ ರೀತಿ ಆಡಳಿತ ನಡೆಸದೆ ದೇಶದ ಸ್ಥಿತಿಯನ್ನು ಸುಧಾರಿಸಲು ಆಡಳಿತ ನಡೆಸುತ್ತಾರೆ ಎಂದು ಬರೆದಿದ್ದರು.

 ನನಗೆ ಯಾವುದೇ ದೈಹಿಕ ಹಲ್ಲೆ  ನಡೆದರೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಪಕ್ಷದ ಸಂಸದ ಮನೀಶ್ ತಿವಾರಿ, ಎಸ್‌ಎಡಿಯ ಸುಖ್‌ಬೀರ್ ಬಾದಲ್, ಎಎಪಿಯ ರಾಘವ್ ಚಡ್ಡಾ ಅವರನ್ನು ದೂಷಿಸಲಾಗುವುದು ಎಂದು ಮಾಜಿ ಸಲಹೆಗಾರ ಇಂದು ಪತ್ರಿಕಾ ಹೇಳಿಕೆಯಲ್ಲಿ ಮಲ್ವಿಂದರ್  ತಿಳಿಸಿದರು.

ರವಿವಾರ ಸಿಧು ಸಲಹೆಗಾರನ ಮೇಲೆ ವಾಗ್ದಾಳಿ ನಡೆಸಿದ್ದ ಮುಖ್ಯಮಂತ್ರಿ ಅಮರಿಂದರ್ ಸಿಂಗ್, “ಮಲ್ವಿಂದರ್ ಸಿಂಗ್ ಅವರ ಟ್ವೀಟ್ ಗಳು ಪಂಜಾಬ್ ಹಾಗೂ  ದೇಶದ ಶಾಂತಿ ಮತ್ತು ಸ್ಥಿರತೆಗೆ "ಸಂಭಾವ್ಯ ಅಪಾಯಕಾರಿ" ಎಂದು ಹೇಳಿದ್ದಾರೆ.

 ಅಫ್ಘಾನ್ ಮಹಿಳಾ ಸಂಸದೆಯನ್ನು ವಾಪಸ್ ಕಳುಹಿಸಿದ ಪ್ರಕರಣ: ಉದ್ದೇಶಪೂರ್ವಕವಲ್ಲದ ತಪ್ಪು ಎಂದ ಕೇಂದ್ರ ಸರ್ಕಾರ

ಅಫ್ಘಾನ್ ಮಹಿಳಾ ಸಂಸದೆಯನ್ನು ವಾಪಸ್ ಕಳುಹಿಸಿದ ಪ್ರಕರಣ: ಉದ್ದೇಶಪೂರ್ವಕವಲ್ಲದ ತಪ್ಪು ಎಂದ ಕೇಂದ್ರ ಸರ್ಕಾರ


 ಅಫ್ಘಾನ್ ಮಹಿಳಾ ಸಂಸದೆಯನ್ನು ವಾಪಸ್ ಕಳುಹಿಸಿದ ಪ್ರಕರಣ: ಉದ್ದೇಶಪೂರ್ವಕವಲ್ಲದ ತಪ್ಪು ಎಂದ ಕೇಂದ್ರ ಸರ್ಕಾರ

ಹೊಸದಿಲ್ಲಿ: ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆಗಸ್ಟ್ 20ರಂದು ಅಫ್ಘಾನಿಸ್ತಾನದ ಮಹಿಳಾ ಸಂಸದೆಯೊಬ್ಬರನ್ನು ವಾಪಸ್ ಕಳುಹಿಸಿದ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಇದೊಂದು ಉದ್ದೇಶಪೂರ್ವಕವಲ್ಲದ ತಪ್ಪು ಎಂದು ಹೇಳಿದೆ.

ಅಷ್ಟೇ ಅಲ್ಲದೆ ಅಫ್ಘಾನಿಸ್ತಾನದ ವೊಲೆಸಿ ಜಿರ್ಗಾ ಕ್ಷೇತ್ರದ ಸಂಸದೆಯಾಗಿರುವ ರಂಗೀನಾ ಕರ್ಗರ್ ಅವರನ್ನು ಸಂಪರ್ಕಿಸಿರುವ ಸರ್ಕಾರ ನಡೆದಿರುವುದಕ್ಕೆ ಕ್ಷಮೆಯನ್ನೂ ಕೇಳಿದೆಯಲ್ಲದೆ ತುರ್ತು ವೀಸಾಗೆ ಅರ್ಜಿ ಸಲ್ಲಿಸುವಂತೆಯೂ ಆಕೆಗೆ ತಿಳಿಸಿದೆ ಎಂದು indianexpress.com ವರದಿ ಮಾಡಿದೆ.

ಅಫ್ಘಾನಿಸ್ತಾನದ ಸ್ಥಿತಿ ಕುರಿತು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡ ನಂತರ ಮೇಲಿನ ಬೆಳವಣಿಗೆ ನಡೆದಿದೆ.

"ರಾಜತಾಂತ್ರಿಕ ಪಾಸ್‍ಪೋರ್ಟ್ ಹೊಂದಿರುವ ಹಾಗೂ ಭಾರತಕ್ಕೆ ಆಗಾಗ ಭೇಟಿ ನೀಡುತ್ತಿರುವ ರಾಜಕೀಯ ನಾಯಕರೊಬ್ಬರ ವಿರುದ್ಧ ವಿದೇಶಾಂಗ ಸಚಿವಾಲಯ ಇಂತಹ ಕ್ರಮ ಹೇಗೆ ಕೈಗೊಂಡಿತು?,'' ಎಂದು ನಾಯಕರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಸಭೆಯಲ್ಲಿ ಪ್ರಶ್ನಿಸಿದರು.

ಗೊಂದಲವಿದ್ದ ಕಾರಣ ಹಾಗೂ ಭಾರತೀಯ ವೀಸಾಗಳಿದ್ದ ಕೆಲ ಪಾಸ್‍ಪೋರ್ಟ್‍ಗಳನ್ನು ತಾಲಿಬಾನಿಗಳು ಸೆಳೆದಿದ್ದಾರೆಂಬ ಸುದ್ದಿಗಳ ಹಿನ್ನೆಲೆಯಲ್ಲಿ ಇಂತಹ ಒಂದು ಉದ್ದೇಶಪೂರ್ವಕವಲ್ಲದ ತಪ್ಪು ಸಂಭವಿಸಿದೆ ಎಂದು ಸಭೆಯಲ್ಲಿ ಸರ್ಕಾರ ಸ್ಪಷ್ಟೀಕರಣ ನೀಡಿದೆ.

ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಜೆ ಪಿ ಸಿಂಗ್ ಅವರು ರಂಗೀನಾ ಅವರನ್ನು ಸಂಪರ್ಕಿಸಿ ಕ್ಷಮೆ ಕೇಳಿ ತುರ್ತು ಇ-ವೀಸಾಗೆ ಅರ್ಜಿ ಸಲ್ಲಿಸುವಂತೆ ಹೇಳಿದ್ದಾರೆ ಎಂದು ಆಕೆ ತಿಳಿಸಿದ್ದಾರೆ.

ಆಗಸ್ಟ್ 20ರಂದು ಇಸ್ತಾಂಬುಲ್‍ನಿಂದ ದುಬೈ ಮೂಲಕ ಆಗಮಿಸಿದ್ದ ರಂಗೀನಾ ಅವರನ್ನು ವಿಮಾನ ನಿಲ್ದಾಣದಲ್ಲಿ 16 ಗಂಟೆಗಳ ಕಾಯಿಸಿದ್ದ ಅಧಿಕಾರಿಗಳು ಅವರನ್ನು ಮತ್ತೆ ಅದೇ ವಿಮಾನದಲ್ಲಿ ಇಸ್ತಾಂಬುಲ್‍ಗೆ ವಾಪಸ್ ಕಳುಹಿಸಿದ್ದರು.

Thursday, 26 August 2021

 ವಿಶ್ವದಲ್ಲೇ ಗರಿಷ್ಠ ಸಿಸಿಟಿವಿ ಕಣ್ಗಾವಲು ಇರುವ ನಗರ ಯಾವುದು ಗೊತ್ತೇ?

ವಿಶ್ವದಲ್ಲೇ ಗರಿಷ್ಠ ಸಿಸಿಟಿವಿ ಕಣ್ಗಾವಲು ಇರುವ ನಗರ ಯಾವುದು ಗೊತ್ತೇ?


 ವಿಶ್ವದಲ್ಲೇ ಗರಿಷ್ಠ ಸಿಸಿಟಿವಿ ಕಣ್ಗಾವಲು ಇರುವ ನಗರ ಯಾವುದು ಗೊತ್ತೇ?

ಹೊಸದಿಲ್ಲಿ: ಲಂಡನ್, ಶಾಂಘೈ, ಸಿಂಗಾಪುರ, ನ್ಯೂಯಾರ್ಕ್ ಹಾಗೂ ಬೀಜಿಂಗ್ ನಗರಗಳನ್ನು ಹಿಂದಿಕ್ಕಿದ ದಿಲ್ಲಿ, ಪ್ರತಿ ಚದರ ಮೈಲು ಪ್ರದೇಶದಲ್ಲಿ ಗರಿಷ್ಠ ಸಿಸಿಟಿವಿ ಕ್ಯಾಮರಾಗಳನ್ನು ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದಿಲ್ಲಿಯಲ್ಲಿ ಪ್ರತಿ ಚದರ ಮೈಲು ಪ್ರದೇಶದಲ್ಲಿ 1,826.6 ಸಿಸಿಟಿವಿ ಕ್ಯಾಮರಾಗಳಿದ್ದರೆ, ಎರಡನೇ ಸ್ಥಾನದಲ್ಲಿರುವ ಲಂಡನ್‌ನಲ್ಲಿ 1,138.5 ಕ್ಯಾಮರಾಗಳಿವೆ ಎಂದು ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆಯಾದ ಕಂಪ್ಯಾರಿಟೆಕ್ ಸಂಘಟನೆಯ ಅಂಕಿಅಂಶಗಳಿಂದ ದೃಢಪಟ್ಟಿದೆ. ಫೋರ್ಬ್ಸ್ ಇಂಡಿಯಾ ವರದಿಯ ಪ್ರಕಾರ ಚೆನ್ನೈ ನಗರ 609.9 ಕ್ಯಾಮರಾ ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದರೆ, 157.4 ಕ್ಯಾಮರಾ ಹೊಂದಿರುವ ಮುಂಬೈ 18ನೇ ಸ್ಥಾನದಲ್ಲಿದೆ.

ಮುಖ್ಯವಾಗಿ ಕಾನೂನು ಜಾರಿ ಏಜೆನ್ಸಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾಗಳ ಬಗ್ಗೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಕಂಪ್ಯಾರಿಟೆಕ್ ಹೇಳಿದೆ. ಸಿಸಿಟಿವಿ ಕ್ಯಾಮರಾಗಳು ಮತ್ತು ಅಪರಾಧ ಅಥವಾ ಸುರಕ್ಷತೆಗೆ ಇರುವ ಸಾಮ್ಯತೆ ಕಡಿಮೆ ಎಂದು ವರದಿಯಲ್ಲಿ ಹೇಳಲಾಗಿದೆ. 150 ನಗರಗಳ ಪೈಕಿ ದಿಲ್ಲಿ ಅಗ್ರಸ್ಥಾನದಲ್ಲಿರುವುದು ನಗರದ ಹೆಮ್ಮೆಯ ವಿಚಾರ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಅಡೆತಡೆಗಳನ್ನು ಒಡ್ಡಿದ ನಡುವೆಯೂ, ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಗರಿಷ್ಠ ಸಂಖ್ಯೆಯ ಕ್ಯಾಮರಾ ಅಳವಡಿಸಲಾಗಿದೆ ಎಂದು ಎಎಪಿ ಸರ್ಕಾರ ಹೇಳಿದೆ.

ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ, ನಿನ್ನೆಯೂ 30,007 ಪ್ರಕರಣ ದಾಖಲು

ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ, ನಿನ್ನೆಯೂ 30,007 ಪ್ರಕರಣ ದಾಖಲು


ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ, ನಿನ್ನೆಯೂ 30,007 ಪ್ರಕರಣ ದಾಖಲು

ನವದೆಹಲಿ : ಕೇರಳದ ಕೋವಿಡ್-19 ಪ್ರಕರಣದ ಹೆಚ್ಚಳ ಕಂಡು ಬಂದಿದ್ದು, ವಿರೋಧ ಪಕ್ಷಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ರಾಜ್ಯ ಸರ್ಕಾರದ 'ಅಜಾಗರೂಕತೆ' ಮತ್ತು 'ಅವಿವೇಕದ' ನಿರ್ಧಾರ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಗುರುವಾರ 30,007 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಬುಧವಾರದ 31,445 ಪ್ರಕರಣಗಳಿಗಿಂತ ಸ್ವಲ್ಪ ಕಡಿಮೆಯಾಗಿದೆ.

ಭಾರತದ ಹೊಸ ಕೋವಿಡ್-19 ಪ್ರಕರಣಗಳಲ್ಲಿ ಕೇರಳವು ಶೇ.68ರಷ್ಟಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಗುರುವಾರ ಪರಿಸ್ಥಿತಿ ಮತ್ತು ದಕ್ಷಿಣ ರಾಜ್ಯದಲ್ಲಿ ವೈರಸ್ ನ ಆತಂಕಕಾರಿ ಗ್ರಾಫ್ ಅನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.

ಏತನ್ಮಧ್ಯೆ, ಮೂರನೇ ಅಲೆ ಅಪ್ಪಳಿಸಿದರೆ ಮತ್ತು ಹೊಡೆದಾಗ, ಸುಮಾರು ೬೦ ಲಕ್ಷ ಜನರು ಬಾಧಿತರಾಗುತ್ತಾರೆ ಎಂದು ಅಂದಾಜಿಸಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪ್ ಹೇಳಿದರು. ಕೋವಿಡ್-19 ರ ಮೂರನೇ ಅಲೆಯನ್ನು ನಿಭಾಯಿಸಲು ರಾಜ್ಯವು ಸಿದ್ಧತೆ ಆರಂಭಿಸಿದೆ ಎಂದು ಅವರು ಹೇಳಿದರು.

ಕೇರಳವು ಗುರುವಾರ ಸತತ ಎರಡನೇ ದಿನವೂ ೩೦,೦೦೦ ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿದ್ದರಿಂದ ಮೂರನೇ ಅಲೆಯ ಭಯವು ದೊಡ್ಡದಾಗಿದೆ ಮತ್ತು ದೆಹಲಿ ಮತ್ತು ಮುಂಬೈ ಸಹ ದೈನಂದಿನ ಪ್ರಕರಣಗಳಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿವೆ.

ಭಾರತದ ಕೋವಿಡ್ ಪ್ರಕರಣಗಳಲ್ಲಿ ಕೇರಳ ಶೇ.51ರಷ್ಟಿದೆ

ಭಾರತದಲ್ಲಿ ಪ್ರಸ್ತುತ ಕೋವಿಡ್-19 ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳನ್ನು ಕೇರಳ ಸೇರಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ತಿಳಿಸಿದೆ. 'ಕೇರಳವು ಇಂದು ಶೇಕಡಾ ೫೧ ಕ್ಕೂ ಹೆಚ್ಚು ಪ್ರಕರಣಗಳಿಗೆ ಕೊಡುಗೆ ನೀಡುತ್ತಿದೆ' ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಕೇರಳ ವು 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಕೋವಿಡ್-19 ಪ್ರಕರಣಗಳನ್ನು ವರದಿ ಮಾಡುವ ಏಕೈಕ ರಾಜ್ಯವಾಗಿದೆ, ನಾಲ್ಕು ರಾಜ್ಯಗಳಲ್ಲಿ 10,000 ರಿಂದ 1 ಲಕ್ಷ ಸಕ್ರಿಯ ಪ್ರಕರಣಗಳು ಮತ್ತು 31 ರಾಜ್ಯಗಳಲ್ಲಿ 10,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ ಎಂದು ಹೇಳಿದರು.
 

 ಕಾಬೂಲ್ ಬೆನ್ನಲ್ಲೇ ಕಜಕಿಸ್ತಾನದ ಸೇನಾ ನೆಲೆ ಬಳಿಯೂ ಭಾರಿ ಸ್ಪೋಟ

ಕಾಬೂಲ್ ಬೆನ್ನಲ್ಲೇ ಕಜಕಿಸ್ತಾನದ ಸೇನಾ ನೆಲೆ ಬಳಿಯೂ ಭಾರಿ ಸ್ಪೋಟ


 ಕಾಬೂಲ್ ಬೆನ್ನಲ್ಲೇ ಕಜಕಿಸ್ತಾನದ ಸೇನಾ ನೆಲೆ ಬಳಿಯೂ ಭಾರಿ ಸ್ಪೋಟ

ಡಿಜಿಟಲ್ ಡೆಸ್ಕ್ : ಕಾಬೂಲ್ : ಇಲ್ಲಿನ ವಿಮಾನ ನಿಲ್ದಾಣದ ಹೊರಗೆ ಶಂಕಿತ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ . ಅಫ್ಘಾನಿಸ್ತಾನದಿಂದ ಬೃಹತ್ ಸಂಖ್ಯೆಯ ಜನರನ್ನು ಸ್ಥಳಾಂತರಿಸುವ ಪ್ರಯತ್ನದ ನಡುವೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದೆ.ಈ ಬೆನ್ನಲ್ಲೇ ಕಜಕಿಸ್ತಾನದ ಸೇನಾ ನೆಲೆಯ ಬಳಿ ಭಾರೀ ಸ್ಪೋಟ ಸಂಭವಿಸಿದೆ.

ಕಜಕಿಸ್ತಾನದ ತಾರಾಜ್ ನ ಸೇನಾ ನೆಲೆಯ ಬಳಿ ಸ್ಪೋಟ ಉಂಟಾಕಿ ಬೆಂಕಿ ಹೊತ್ತುಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿದೆ.

ಬೈಜಾಕ್ ಜಿಲ್ಲೆಯಲ್ಲಿರುವ ಜಂಬಿಲ್ ವಲಯದ ಸೇನಾ ನೆಲೆಯ ಬಳಿ ಈ ಸ್ಪೋ ಸಂಭವಿಸಿದೆ. ಸ್ಪೋಟಕಗಳನ್ನು ಎಸೆದು ಬೆಂಕಿ ಹಚ್ಚಲಾಗಿದ್ದು, ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಗೊತ್ತಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ.

 ದೇಶದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕೊವಿಡ್-19 ಕೇಸ್ ದಾಖಲಿಸಿದ ಕೇರಳ!

ದೇಶದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕೊವಿಡ್-19 ಕೇಸ್ ದಾಖಲಿಸಿದ ಕೇರಳ!


 ದೇಶದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಕೊವಿಡ್-19 ಕೇಸ್ ದಾಖಲಿಸಿದ ಕೇರಳ!

ತಿರುವನಂತಪುರಂ, ಆಗಸ್ಟ್ 26: ಭಾರತದಲ್ಲಿರುವ ಒಟ್ಟು ಕೊರೊನಾವೈರಸ್ ಸೋಂಕಿತ ಸಕ್ರಿಯ ಪ್ರಕರಣಗಳ ಪೈಕಿ ಕೇರಳದಲ್ಲೇ ಶೇ.51ರಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ 1 ಲಕ್ಷ ಕೊವಿಡ್-19 ಸಕ್ರಿಯ ಪ್ರಕರಣಗಳನ್ನು ವರದಿ ಮಾಡಿರುವ ಏಕೈಕ ರಾಜ್ಯ ಕೇರಳ ಎಂದು ಹೇಳಿದ್ದಾರೆ. ದೇಶದ ನಾಲ್ಕು ರಾಜ್ಯಗಳಲ್ಲಿ 10,000ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದರೆ, 31 ರಾಜ್ಯಗಳಲ್ಲಿ 10,000ಕ್ಕಿಂತ ಕಡಿಮೆ ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.

"ಕೇರಳದಲ್ಲಿ ಕೊರೊನಾವೈರಸ್ ಸೋಂಕಿತ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವುದು. ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವುದರಲ್ಲಿ ಹೆಚ್ಚು ಒತ್ತು ನೀಡಬೇಕು. ಏಕೆಂದರೆ ಒಬ್ಬ ಸೋಂಕಿತನ ಸಂಪರ್ಕದಲ್ಲಿ ಇರುವವರ ಪತ್ತೆಯಲ್ಲಿ ಕೇರಳ ತುಂಬಾ ಹಿಂದೆ ಉಳಿದಿದ್ದು ಕೇವಲ ಇಬ್ಬರು ಸಂಪರ್ಕಿತರನ್ನು ಮಾತ್ರ ಪತ್ತೆ ಮಾಡುತ್ತಿದೆ. ಇದರ ಜೊತೆಗೆ ಕೇರಳದಲ್ಲಿ ಶೇ.80ರಷ್ಟು ಸೋಂಕಿತರು ಗೃಹ ದಿಗ್ಬಂಧನದಲ್ಲಿದ್ದು, ಅವರ ಬಗ್ಗೆ ಹೆಚ್ಚು ಗಮನ ಹರಿಸುವುದು ಮುಖ್ಯ," ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಜೂನ್ ತಿಂಗಳ ಮೊದಲ ವಾರದಲ್ಲಿ ಭಾರತದ 279 ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಕೊವಿಡ್-19 ಸಕ್ರಿಯ ಪ್ರಕರಣಗಳಿದ್ದವು. ಜುಲೈ ಮೊದಲ ವಾರದಲ್ಲಿ ದೇಶವು 107 ದಿನಗಳ ಕನಿಷ್ಠ ಹೊಸ ಪ್ರಕರಣಗಳನ್ನು ದಾಖಲಿಸಿತ್ತು. ಇಂದು 41 ಜಿಲ್ಲೆಗಳಲ್ಲಿ ವಾರದ ಪಾಸಿಟಿವಿಟಿ ದರವು ಶೇ.10ರಷ್ಟಿದೆ.

ಭಾರತದಲ್ಲಿ ಒಂದು ದಿನದಲ್ಲಿ 46,164 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 34,159 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊವಿಡ್-19 ಸೋಂಕಿನಿಂದ ಗುಣಮುಖರಾದವರ ಶೇಕಡಾವಾರು ಪ್ರಮಾಣ 97.63ರಷ್ಟಿದ್ದು, ಇದರ ಹೊರತಾಗಿ 3,33,725 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೇರಳದಲ್ಲಿ 30,000ಕ್ಕೂ ಹೆಚ್ಚು ಹೊಸ ಪ್ರಕರಣ:

ಕೇರಳದಲ್ಲಿ ಪಾಸಿಟಿವಿಟಿ ದರ ಶೇ.18.03ರಷ್ಟಿದೆ. ಒಂದು ದಿನದಲ್ಲಿ 30,007 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 18,997 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 162 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 20,134 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ 1,81,209 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.


 ಚಿಕ್ಕಮಗಳೂರು: ಭದ್ರಾ ನಾಲೆಗೆ ಬಿದ್ದ ಕಾರು; ಇಬ್ಬರು ನೀರುಪಾಲು

ಚಿಕ್ಕಮಗಳೂರು: ಭದ್ರಾ ನಾಲೆಗೆ ಬಿದ್ದ ಕಾರು; ಇಬ್ಬರು ನೀರುಪಾಲು

ಚಿಕ್ಕಮಗಳೂರು: ಭದ್ರಾ ನಾಲೆಗೆ ಬಿದ್ದ ಕಾರು; ಇಬ್ಬರು ನೀರುಪಾಲು

ಚಿಕ್ಕಮಗಳೂರು: ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಕಾರೊಂದು ಭದ್ರಾ ನಾಲೆಗೆ ಬಿದ್ದಿದೆ. ಘಟನೆಯಲ್ಲಿ ಇಬ್ಬರು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಇನ್ನಿಬ್ಬರು ಪಾರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕರೆ ತಾಲೂಕು ಎಂ.ಸಿ.ಹಳ್ಳಿ ಬಳಿ ಘಟನೆ ಸಂಭವಿಸಿದೆ. ಬೆಳಗಿನ ಜಾವ ಕಾರು ನಾಲೆಗೆ ಬಿದ್ದಿದ್ದು, ಇವರು ಭದ್ರಾವತಿ ತಾಲೂಕು ಹಳೆ ಜೇಡಿಕಟ್ಟೆ ನಿವಾಸಿಗಳು ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಭದ್ರಾವತಿಗೆ ಮರಳುತ್ತಿದ್ದಾಗ ಎಂ.ಸಿ.ಹಳ್ಳಿ ಬಳಿ ಘಟನೆ ಸಂಭವಿಸಿದೆ. ಮಂಜುನಾಥ್, ಅವರ ತಾಯಿ ಸುನಂದಾ, ಪತ್ನಿ ನೀತಾ, ಮಗ ಧ್ಯಾನ್ ಕಾರಿನಲ್ಲಿದ್ದರು. ಮಂಜುನಾಥ್ ಅವರು ಕಾರು ಚಲಾಯಿಸುತ್ತಿದ್ದರು. ಭದ್ರಾ ನಾಲೆ ಬಳಿಗೆ ಬರುತ್ತಿದ್ದಂತೆ ಕಾರು ಏಕಾಏಕಿ ರಸ್ತೆಯಿಂದ ನಾಲೆ ಕಡೆಗೆ ತಿರುಗಿದ್ದು, ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದೃಷ್ಟವಶಾತ್ ನೀತಾ ಮತ್ತು ಅವರ ಮಗ ಧ್ಯಾನ್ ಪಾರಾಗಿದ್ದಾರೆ.

ಮಂಜುನಾಥ್ ಮತ್ತು ಅವರ ತಾಯಿ ಸುನಂದಾ ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ನಾಲೆಯಲ್ಲಿ ಶೋಧ ಮುಂದುವರೆಸಿದ್ದಾರೆ. ಆದರೆ ಈವರೆಗೂ ಸುಳಿವು ಪತ್ತೆಯಾಗಿಲ್ಲ. ಭದ್ರಾ ನಾಲೆಯಲ್ಲಿ ನೀರು ಹರಿಸುತ್ತಿರುವುದರಿಂದ ಶೋಧ ಕಾರ್ಯಕ್ಕೆ ತೊಡಗಾಗುತ್ತಿದೆ.

ಆಡಿಯೋದಲ್ಲಿ ಆತ್ಮಹತ್ಯೆಯ ಸುಳಿವು

ಕಾರು ಚಲಾಯಿಸುತ್ತಿದ್ದ ಮಂಜುನಾಥ್ ಅವರು ಆತ್ಮಹತ್ಯೆಗೆ ಯೋಜಿಸಿದ್ದರು ಎಂದು ಹೇಳಲಾಗುತ್ತಿದೆ. ಸಂಬಂಧಿಕರಿಗೆ ಮಂಜುನಾಥ್ ಅವರು ನಡುರಾತ್ರಿ ಕರೆ ಮಾಡಿದ್ದರು ಎಂದು ತಿಳಿದ ಬಂದಿದೆ. ಮಂಜುನಾಥ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ತಾವು ಇನ್ನು ಹತ್ತು ನಿಮಿಷದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಕುಟುಂಬದರು ಕೂಡ ಕೊನೆಯಾಗಲಿದ್ದಾರೆ. ಜೊತೆಯಲ್ಲಿದ್ದವರು ಮೋಸ ಮಾಡಿದ್ದೇ ಇದಕ್ಕೆ ಕಾರಣ ಎಂದು ಮಂಜುನಾಥ್ ಅವರು ಹೇಳಿದ್ದರು. ಈ ನಿರ್ಧಾರ ಕೈಬಿಡುವಂತೆ ಸಂಬಂಧಿಕರು ಮನವಿ ಮಾಡಿದ್ದರೂ, ಮಂಜುನಾಥ್ ಅವರು ಆತ್ಮಹತ್ಯೆ ನಿರ್ಧಾರ ಕೈಬಿಡುವುದಿಲ್ಲ ಎಂದು ಹೇಳಿದ್ದರು.

ತರೀಕೆರೆಯ ಎಂ.ಸಿ.ಹಳ್ಳಿ ಬಳಿ ಭದ್ರಾ ನಾಲೆ ಬಳಿಗೆ ಬರುತ್ತಿದ್ದಂತೆ ಮಂಜುನಾಥ್ ಅವರು ಕಾರನ್ನು ನಾಲೆ ಕಡೆಗೆ ತಿರುಗಿಸಿರುವ ಶಂಕೆ ಇದೆ. ಇಡೀ ಕುಟುಂಬದ ಕಥೆಯೇ ಕೊನೆಯಾಗುವ ಸಾಧ್ಯತೆ ಇತ್ತು. ಆದರೆ ಕಾರು ನಾಲೆಗೆ ಬೀಳುತ್ತಿದ್ದಂತೆ ನೀತಾ ಅವರು ತಮ್ಮ ಮಗ ಧ್ಯಾನ್ ಜೊತೆಗೆ ಈಜಿ ನಾಲೆಯಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತರೀಕೆರೆ ಠಾಣೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.


 ಪಿಕಪ್ ಹಾಗೂ ಲಾರಿ ನಡುವೆ ಭೀಕರ ಅಪಘಾತ : ಇಬ್ಬರ ಸ್ಥಿತಿ ಗಂಭೀರ

ಪಿಕಪ್ ಹಾಗೂ ಲಾರಿ ನಡುವೆ ಭೀಕರ ಅಪಘಾತ : ಇಬ್ಬರ ಸ್ಥಿತಿ ಗಂಭೀರ


 ಪಿಕಪ್ ಹಾಗೂ ಲಾರಿ ನಡುವೆ ಭೀಕರ ಅಪಘಾತ : ಇಬ್ಬರ ಸ್ಥಿತಿ ಗಂಭೀರ

ಮೂಡಿಗೆರೆ : ಲಾರಿ ಹಾಗೂ ಪಿಕಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಿಕಪ್ ನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ.

ಬೇಲೂರು ಕಡೆಗೆ ಹೋಗುತ್ತಿದ್ದ ಪಿಕಪ್ ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ಜೇನುಬೈಲ್ ಬಳಿ ಡಿಕ್ಕಿ ಹೊಡೆದಿದೆ ಪರಿಣಾಮ ಪಿಕಪ್ ಸಂಪೂರ್ಣ ಜಖಂ ಗೊಂಡಿದ್ದು ಅದರೊಳಗೆ ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…


 ಕಾಬೂಲ್ ಏರ್ಪೋರ್ಟ್ ಬಳಿ ಭಾರಿ ಸ್ಪೋಟ

ಕಾಬೂಲ್ ಏರ್ಪೋರ್ಟ್ ಬಳಿ ಭಾರಿ ಸ್ಪೋಟ


ಕಾಬೂಲ್ ಏರ್ಪೋರ್ಟ್ ಬಳಿ ಭಾರಿ ಸ್ಪೋಟ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಭಾರಿ ಸ್ಫೋಟ ಸಂಭವಿಸಿದೆ ಎಂದು ಪೆಂಟಗಾನ್ ಹೇಳಿದೆ.

ವಕ್ತಾರ ಜಾನ್ ಕಿರ್ಬಿ ಅವರು, ಸ್ಫೋಟದಲ್ಲಿ ಸಾವು ನೋವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ತಾಲಿಬಾನ್ ಸ್ವಾಧೀನಕ್ಕೆ ಬಂದ ನಂತರ ಸಾವಿರಾರು ಆಫ್ಘನ್ನರು ದೇಶದಿಂದ ಪಲಾಯನ ಮಾಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರಯತ್ನಿಸುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳು ದಾಳಿಯ ಸಾಧ್ಯತೆಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದವು.

ಅಮೆರಿಕ ಮತ್ತು ಮಿತ್ರ ಪಡೆಯ ಸೈನಿಕರು, ವಿವಿಧ ದೇಶಗಳ ಸಾವಿರಾರು ನಾಗರಿಕರೊಂದಿಗೆ ಆಫ್ಘನ್ ಜನತೆ ಕೂಡ ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣದ ಬಳಿ ಬೀಡು ಬಿಟ್ಟಿದ್ದಾರೆ. ಆಫ್ಘನ್ನರು ದೇಶ ಬಿಟ್ಟು ಹೋಗದಂತೆ ತಾಲಿಬಾನ್ ಉಗ್ರರು ತಡೆಯೊಡ್ಡಿದ್ದಾರೆ. ಅಲ್ಲದೇ ಅಮೆರಿಕ ಮತ್ತು ಮಿತ್ರಪಡೆಗಳು ಆಗಸ್ಟ್ 31 ರೊಳಗೆ ದೇಶ ಬಿಡುವಂತೆ ತಾಕೀತು ಮಾಡಿದ್ದಾರೆ.

ತಾಲಿಬಾನ್ ಆಳ್ವಿಕೆಯಿಂದ ಪಲಾಯನ ಮಾಡಲು ಹವಣಿಸುತ್ತಿರುವ ಸಾವಿರಾರು ಅಫ್ಘಾನಿಸ್ಥಾನರು ತಂಗಿರುವ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ಗುರುವಾರ ಎಚ್ಚರಿಕೆ ನೀಡಿದ್ದು, ಇದರ ಬೆನ್ನಲ್ಲೇ ಏರ್ಪೋರ್ಟ್ ಬಳಿ ಭಾರಿ ಸ್ಪೋಟ ಸಂಭವಿಸಿದೆ ಎಂದು ವರದಿಯಾಗಿದೆ.

ವಿಮಾನ ನಿಲ್ದಾಣವನ್ನು ತಪ್ಪಿಸುವಂತೆ ಹಲವಾರು ದೇಶಗಳು ಜನರನ್ನು ಒತ್ತಾಯಿಸಿವೆ, ಅಲ್ಲಿ ಆತ್ಮಾಹುತಿ ಬಾಂಬ್ ದಾಳಿಯ ಬೆದರಿಕೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ಅದೇ ರೀತಿಯ ದಾಳಿ ನಡೆದಿರಬಹುದೆಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


 ನಾಳೆ ರಾಜ್ಯಾದ್ಯಂತ 'ಕೋವಿಡ್-19 ಲಸಿಕಾ ಮೇಳ' :

ನಾಳೆ ರಾಜ್ಯಾದ್ಯಂತ 'ಕೋವಿಡ್-19 ಲಸಿಕಾ ಮೇಳ' :


ನಾಳೆ ರಾಜ್ಯಾದ್ಯಂತ 'ಕೋವಿಡ್-19 ಲಸಿಕಾ ಮೇಳ' : 

ಬೆಂಗಳೂರು : ನಾಳೆ ರಾಜ್ಯದ್ಯಂತ ಕೋವಿಡ್-19 ವಿಶೇಷ ಲಸಿಕಾ ಮೇಳವನ್ನು ನಡೆಸಲಾಗುತ್ತಿದೆ. ಈ ಮೇಳದಲ್ಲಿ ಆದ್ಯತೆಯ ಮೇರೆಗೆ ರಾಜ್ಯದಲ್ಲಿ ಕೊರೋನಾ ಲಸಿಕೆ ನೀಡಲಾಗುತ್ತಿದೆ.

ಈ ಕುರಿತಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕಿ ಅರುಂದತಿಯವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಯಲ್ಲಿ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ಧಿಯ ಉಪಕ್ರಮವಾಗಿ ದಿನಾಂಕ 27-08-2021ರಂದು ರಾಜ್ಯಾದ್ಯಂತ ಕೋವಿಡ್-19 ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಈ ಮೇಳದಲ್ಲಿ ಈ ಕೆಳಕಂಡ ಗುಂಪಿನವರಿಗೆ ಆದ್ಯತೆ ನೀಡುವ ಮುಖಾಂತರ ಈ ಕೋವಿಡ್ ಲಸಿಕಾ ಮೇಳವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

 ನನ್ನ ಅಭಿಪ್ರಾಯ ಮತ್ತು ಹೆಸರನ್ನು ನಿಮ್ಮ ಕೆಟ್ಟ ಉದ್ದೇಶಗಳಿಗೆ ಬಳಸದಿರಿ: ನೀರಜ್‌ ಚೋಪ್ರಾ

ನನ್ನ ಅಭಿಪ್ರಾಯ ಮತ್ತು ಹೆಸರನ್ನು ನಿಮ್ಮ ಕೆಟ್ಟ ಉದ್ದೇಶಗಳಿಗೆ ಬಳಸದಿರಿ: ನೀರಜ್‌ ಚೋಪ್ರಾ


 ನನ್ನ ಅಭಿಪ್ರಾಯ ಮತ್ತು ಹೆಸರನ್ನು ನಿಮ್ಮ ಕೆಟ್ಟ ಉದ್ದೇಶಗಳಿಗೆ ಬಳಸದಿರಿ: ನೀರಜ್‌ ಚೋಪ್ರಾ

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‌ ನ ಜಾವೆಲಿನ್‌ ಎಸೆತ ಸ್ಫರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ನೀರಜ್‌ ಚೋಪ್ರಾ ಇದೀಗ ವಿವಾದವೊಂದರ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕ್ರೀಡೆಯಲ್ಲಿ ಎಲ್ಲರೂ ಒಂದೇ , ನಿಮ್ಮ ಉದ್ದೇಶಗಳಿಗಾಗಿ ನನ್ನ ಹೆಸರನ್ನು ಬಳಸದಿರಿ ಎಂದು ಕಟು ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚೋಪ್ರಾ, "ನಾನು ಜಾವೆಲಿನ ಎಸೆಯುವ ವೇಳೆ ನನ್ನ ಜಾವೆಲಿನ್‌ ಗಾಗಿ ಹುಡುಕಾಟ ನಡೆಸಿದೆ. ಆದರೆ ಅದು ಅಲ್ಲಿರಲಿಲ್ಲ. ಅದು ಪಾಕಿಸ್ತಾನದ ಅರ್ಶದ್‌ ನದೀಮ್‌ ರ ಕೈಯಲ್ಲಿತ್ತು. ಬಳಿಕ ನಾನದನ್ನು ಕೇಳಿದಾಗ ವಾಪಸ್‌ ನೀಡಿದರು" ಎಂದು ಹೇಳಿದ್ದರು. ಆದರೆ ಈ ವಿಚಾರವನ್ನೇ ಸಾಮಾಜಿಕ ತಾಣದಲ್ಲಿ ಗುಲ್ಲೆಬ್ಬಿಸಲು ಬಳಸಿದ ಕೆಲ ಬಳಕೆದಾರರು ಅರ್ಶದ್‌ ನದೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೀಯಾಳಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ವೀಡಿಯೋ ಮೂಲಕ ಮಾಹಿತಿ ನೀಡಿದ ನೀರಜ್‌ "ನಾನು ಸಂದರ್ಶನದಲ್ಲಿ ಹೇಳಿದ್ದನ್ನು ಕೆಲವು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಜಾವೆಲಿನ್‌ ಇಡುವುದಕ್ಕೆಂದು ಒಂದು ಪ್ರತ್ಯೇಕ ಸ್ಥಳವಿದೆ. ಅಲ್ಲಿ ನಮ್ಮ ನಮ್ಮ ಜಾವೆಲಿನ್‌ ನಾವು ಇಡುತ್ತೇವೆ. ಯಾರಿಗೆ ಯಾವ ಜಾವೆಲಿನ್‌ ಬೇಕಾದರೂ ತೆಗೆದುಕೊಳ್ಳುವ ಅವಕಾಶವಿದೆ. ಹಾಗಾಗಿ ಅರ್ಶದ್‌ ಅದನ್ನು ಪಡೆದುಕೊಂಡಿದ್ದರು ಅಷ್ಟೇ. ಕ್ರೀಡೆಯಲ್ಲಿ ದ್ವೇಷವಿಲ್ಲ. ಇಲ್ಲಿ ನಾವೆಲ್ಲರೂ ಪ್ರೀತಿಯಿಂದ ಇದ್ದೇವೆ. ಇಂತಹಾ ಕೆಲ ಮಾತುಗಳಿಂದ ನನಗೆ ತೀವ್ರ ನೋವುಂಟಾಗಿದೆ. ನಿಮ್ಮ ಉದ್ದೇಶಗಳಿಗಾಗಿ, ಪಿತೂರಿಗಳಿಗಾಗಿ ನನ್ನ ಹೆಸರನ್ನು ಬಳಸದರಿ" ಎಂದು ಅವರು ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಅತ್ಯಾಚಾರ ನಡೆದಿದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ: ಸಚಿವ ಅರಗ ಜ್ಞಾನೇಂದ್ರ

ಅತ್ಯಾಚಾರ ನಡೆದಿದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ: ಸಚಿವ ಅರಗ ಜ್ಞಾನೇಂದ್ರ


ಅತ್ಯಾಚಾರ ನಡೆದಿದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ: ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು : ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಅತ್ಯಾಚಾರ ನಡೆದದ್ದು ಅಲ್ಲಿ ಆದರೆ, ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ ಎಂದು ಸಚಿವರು ನೀಡಿರುವ ಹೇಳಿಕೆಯ ವೀಡಿಯೊ ವೈರಲ್ ಆಗಿದೆ.

ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಸಚಿವರು ಹೇಳಿದ್ದಾರೆ. 

 ರಾಷ್ಟ್ರೀಯ ಸೊತ್ತುಗಳ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ ಆರೆಸ್ಸೆಸ್‌ ಸಂಯೋಜಿತ ವ್ಯಾಪಾರ ಸಂಘಟನೆ

ರಾಷ್ಟ್ರೀಯ ಸೊತ್ತುಗಳ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ ಆರೆಸ್ಸೆಸ್‌ ಸಂಯೋಜಿತ ವ್ಯಾಪಾರ ಸಂಘಟನೆ


 ರಾಷ್ಟ್ರೀಯ ಸೊತ್ತುಗಳ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ ಆರೆಸ್ಸೆಸ್‌ ಸಂಯೋಜಿತ ವ್ಯಾಪಾರ ಸಂಘಟನೆ

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಯೋಜಿತ ವ್ಯಾಪಾರ ಸಂಘಟನೆಯಾಗಿರುವ ಭಾರತೀಯ ಮಜ್ದೂರ್‌ ಸಂಘವು ಕೇಂದ್ರ ಸರಕಾರದ ೬ ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ನಗದೀಕರಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ ಎಂದು thehindu.com  ವರದಿ ಮಾಡಿದೆ. ಈ ಯೋಜನೆಯನ್ನು ವಿರೋಧಿಸಿ ಸಂಘಟನೆಯು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಬಿಎಂಎಸ್‌ ಪ್ರಧಾನ ಕಾರ್ಯದರ್ಶಿ ಬಿನೋಯ್‌ ಕುಮಾರ್‌ ಸಿನ್ಹಾ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರಕಾರವು ಮುಂದಿನ ನಾಲ್ಕು ವರ್ಷಗಳಲ್ಲಿ ಜಾರಿಗೆ ತರಲು ಯೋಜಿಸಿರುವ ರಾಷ್ಟ್ರೀಯ ನಗದೀಕರಣ ಯೋಜನೆಯು ʼಕುಟುಂಬದ ಬೆಳ್ಳಿಯ ಆಭರಣಗಳನ್ನುʼ ಮಾರಾಟ ಮಾಡುವಂತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಸರ್ಕಾರಕ್ಕೆ ಹಣದ ಅಗತ್ಯವಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ಆದರೆ ಇದು ಸರಿಯಾದ ಮಾರ್ಗವಲ್ಲ. ಅವರು ಪರ್ಯಾಯ ಯೋಜನೆಯನ್ನು ರೂಪಿಸಬೇಕು. ಪ್ರತಿಭಟನೆ ಸೇರಿದಂತೆ ನಮ್ಮ ಮುಂದಿನ ಕ್ರಮವನ್ನು ನಾವು ಪರಿಗಣಿಸುತ್ತಿದ್ದೇವೆ ಎಂದು ಸಿನ್ಹಾ ಹೇಳಿದರು.

ಸೆಪ್ಟೆಂಬರ್‌ನಲ್ಲಿ ಖಾಸಗೀಕರಣದ ವಿರುದ್ಧ ಒಕ್ಕೂಟ ನಡೆಸಲು ಉದ್ದೇಶಿಸಿದ ಆಂದೋಲನವು ಈಗ ಎನ್‌ಎಂಪಿ ವಿರುದ್ಧದ ಪ್ರತಿಭಟನೆಗಳನ್ನು ಒಳಗೊಂಡಿರುತ್ತದೆ ಎಂದು ಅವರು ಹೇಳಿದರು.

 ಮಿಯಾಗಂಜ್‌ ಅನ್ನು ಮಾಯಾಗಂಜ್‌ ಎಂದು ಬದಲಿಸಲು ಜಿಲ್ಲಾಡಳಿತದಿಂದ ಉತ್ತರಪ್ರದೇಶ ಸರಕಾರಕ್ಕೆ ಶಿಫಾರಸ್ಸು

ಮಿಯಾಗಂಜ್‌ ಅನ್ನು ಮಾಯಾಗಂಜ್‌ ಎಂದು ಬದಲಿಸಲು ಜಿಲ್ಲಾಡಳಿತದಿಂದ ಉತ್ತರಪ್ರದೇಶ ಸರಕಾರಕ್ಕೆ ಶಿಫಾರಸ್ಸು

 

ಮಿಯಾಗಂಜ್‌ ಅನ್ನು ಮಾಯಾಗಂಜ್‌ ಎಂದು ಬದಲಿಸಲು ಜಿಲ್ಲಾಡಳಿತದಿಂದ ಉತ್ತರಪ್ರದೇಶ ಸರಕಾರಕ್ಕೆ ಶಿಫಾರಸ್ಸು

ಲಕ್ನೋ: ಉನ್ನಾವೋ ಜಿಲ್ಲಾಡಳಿತಕ್ಕೊಳಪಟ್ಟ ಮಿಯಾಗಂಜ್‌ ಗ್ರಾಮದ ಹೆಸರನ್ನು ಮಾಯಾಗಂಜ್‌ ಎಂದು ಬದಲಿಸುವಂತೆ ಉತ್ತರಪ್ರದೇಶದ ಆದಿತ್ಯನಾಥ್‌ ಸರಕಾರಕ್ಕೆ ಜಿಲ್ಲಾಡಳಿತ ಪತ್ರ ಬರದು ಶಿಫಾರಸು ಮಾಡಿದೆ. 

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉನ್ನಾವೊ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್, "ಮಿಯಾಗಂಜ್ ಗ್ರಾಮ ಪಂಚಾಯತ್ ಹೆಸರನ್ನು ಮಾಯಾಗಂಜ್ ಎಂದು ಬದಲಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳೀಯರು ಹಾಗೂ ಮುಖ್ಯ ಅಭಿವೃದ್ಧಿ ಅಧಿಕಾರಿಯಿಂದ ಈ ಪ್ರಸ್ತಾವನೆ ಬಂದಿದ್ದು, ಮುಂದಿನ ಕ್ರಮಕ್ಕಾಗಿ ನಾವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

"ಬಿಜೆಪಿ ಶಾಸಕ ಬಂಬಾಲಾಲ್‌ ದಿವಾಕರ್‌ ಅವರ ಪತ್ರದ ಬಳಿಕ ಗ್ರಾಮಸಭೆಯ ಹೆಸರನ್ನು ಬದಲಿಸಲು ಕ್ರಮಗಳನ್ನು ಆರಂಭಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ indianexpress ನೊಂದಿಗೆ ಮಾತನಾಡಿದ ದಿವಾಕರ್, ೨೦೧೭ರ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಆದಿತ್ಯನಾಥ ಮಾಡಿದ ಭಾಷಣದಿಂದ ಈ ಹೆಸರನ್ನು ಬದಲಾಯಿಸುವ ಆಲೋಚನೆ ಬಂದಿದೆ. ೨೦೧೭ರಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಆದಿತ್ಯನಾಥ್‌ ಜಿ, ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಲ್ಲಿ ಹೆಸರು ಮಿಯಾಗಂಜ್‌ ಅಲ್ಲ, ಮಾಯಾಗಂಜ್‌ ಆಗಲಿದೆ ಎಂದಿದ್ದರು. ಇದನ್ನು ಅನುಸರಿಸಿ ನಾನು ಸಿಎಂ ಜೊತೆ ಮಾತನಾಡಿದಾಗ ಅವರು ಪ್ರಸ್ತಾವನೆ ಕಳುಹಿಸುವಂತೆ ಹೇಳಿದ್ದರು. ಎಂದು ದಿವಾಕರ್‌ ಹೇಳಿದ್ದಾರೆ. 

ಈ ನಡುವೆ ರಾಜ್ಯ ಸಚಿವ ರಾಮ ಶಂಕರ್ ಸಿಂಗ್ ಪಟೇಲ್ ಅವರು ಮಿರ್ಜಾಪುರ ಜಿಲ್ಲೆಗೆ ಇದೇ ರೀತಿಯ ಬೇಡಿಕೆಯನ್ನು ಮಾಡಿದ್ದು, ಮಿರ್ಜಾಪುರವನ್ನು ವಿಂಧ್ಯ ಧಾಮ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ.

 ಮಹಾರಾಷ್ಟ್ರ: ಒಂದೇ ದಿನ 5 ಸಾವಿರ ದಾಟಿದ ಕೋವಿಡ್ ಸೋಂಕು

ಮಹಾರಾಷ್ಟ್ರ: ಒಂದೇ ದಿನ 5 ಸಾವಿರ ದಾಟಿದ ಕೋವಿಡ್ ಸೋಂಕು

 

ಮಹಾರಾಷ್ಟ್ರ: ಒಂದೇ ದಿನ 5 ಸಾವಿರ ದಾಟಿದ ಕೋವಿಡ್ ಸೋಂಕು

ಮುಂಬೈ: ಮಹಾರಾಷ್ಟ್ರದಲ್ಲಿ ಐದು ದಿನಗಳ ಬಳಿಕ ಮತ್ತೆ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಬುಧವಾರ 5031 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, 216 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

"ಕೋವಿಡ್ ಸೂಕ್ತ ನಡವಳಿಕೆಯನ್ನು ಜನ ನಿಧಾನವಾಗಿ ಬಿಟ್ಟಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣ" ಎಂದು ಮಸೀನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸತ್ಯೇಂದ್ರನಾಥ್ ಮೆಹ್ರಾ ಹೇಳಿದ್ದಾರೆ.

"ಜನ ಸುರಕ್ಷಿತ ಅಂತರವನ್ನು ಕಾಪಾಡುತ್ತಿಲ್ಲ ಹಾಗೂ ಮಾಸ್ಕ್ ಧರಿಸುವಲ್ಲಿ ನಿಷ್ಕಾಳಜಿ ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳದಿರುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ನಾವು ಮೂರನೇ ಅಲೆಯನ್ನು ಎದುರಿಸಬೇಕಾಗಬಹುದು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಮುಂಬೈನಲ್ಲಿ 342 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಮಹಾನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 15956ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಇದುವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 64,37,680ಕ್ಕೇರಿದ್ದು, 50183 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 1,36,571ಕ್ಕೇರಿದೆ.

ಪುಣೆಯಲ್ಲಿ ಅತ್ಯಧಿಕ ಎಂದರೆ 12673 ಸಕ್ರಿಯ ಪ್ರಕರಣಗಳಿದ್ದು, ಥಾಣೆಯಲ್ಲಿ 7041 ಮತ್ತು ಸತಾರಾದಲ್ಲಿ 5400 ಸಕ್ರಿಯ ಪ್ರಕರಣಗಳಿವೆ.

Thursday, 19 August 2021

 ಆ.23 ರಿಂದ ಭಾರಿ ಮಳೆಯಾಗುವ ಸಾಧ್ಯತೆ : ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್

ಆ.23 ರಿಂದ ಭಾರಿ ಮಳೆಯಾಗುವ ಸಾಧ್ಯತೆ : ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್


 ಆ.23 ರಿಂದ ಭಾರಿ ಮಳೆಯಾಗುವ ಸಾಧ್ಯತೆ : ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಇಳಿಕೆಯಾಗಿದ್ದ ಮಳೆ ಮತ್ತೆ ಆ.23 ರಿಂದ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.
 ತಾಲಿಬಾನ್ ಸೇರಿ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್

ತಾಲಿಬಾನ್ ಸೇರಿ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್


ತಾಲಿಬಾನ್ ಸೇರಿ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್


ತಾಲಿಬಾನಿಗಳೊಂದಿಗೆ ಉಗ್ರ ಸಂಘಟನೆಗಳಿಗೆ ಭಾರತ ವಾರ್ನಿಂಗ್ ಮಾಡಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಡುಗಿದ ಭಾರತ, ಭಾರತವನ್ನು ಕೆಣಕುವ ಕೆಲಸ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಹೇಳಿದೆ.

ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ವಿಶ್ವಸಂಸ್ಥೆಯಲ್ಲಿ ಉಗ್ರವಾದದ ವಿರುದ್ಧ ಭಾಷಣ ಮಾಡಿದ ವಿದೇಶಾಂಗ ಸಚಿವ ಜೈಶಂಕರ್ ಗುಡುಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಗಳು ಅಟ್ಟಹಾಸ ಮೆರೆಯುತ್ತಿರುವ ಹೊತ್ತಲ್ಲೇ ಅವರು ವಾರ್ನಿಂಗ್ ಮಾಡಿದ್ದಾರೆ. ಜಗತ್ತಿನ ಅರ್ಧದಷ್ಟು ಜನರು ಭಯೋತ್ಪಾದನೆ ಎದುರಿಸುತ್ತಿದ್ದೇವೆ. ಸಾವು-ನೋವುಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ್ದಾರೆ.

ಭಾರತದ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದು ಹೇಳಿದ್ದು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ್ದಾರೆ. ಜಗತ್ತಿಗೆ ಅಪಾಯಕಾರಿಯಾಗಿರುವ ಐಸಿಸ್, ಲಷ್ಕರ್ ಎ ತೋಯ್ಬಾ ಸೇರಿ ಹಲವು ಉಗ್ರ ಸಂಘಟನೆಗಳು ತಾಲಿಬಾನ್ ಸಂಪರ್ಕಕ್ಕೆ ಬರುತ್ತಿದ್ದು, ವಿಶ್ವದಲ್ಲಿ ಆತಂಕ ಮೂಡಿಸಿದೆ. ಇದೇ ವೇಳೆ ಭಾರತ ಸ್ಪಷ್ಟ ಮತ್ತು ಖಡಕ್ ಸಂದೇಶ ರವಾನಿಸಿದೆ.

ಉಗ್ರರನ್ನು ಪೋಷಿಸುವ ರಾಷ್ಟ್ರಗಳಿಗೆ ಕೂಡ ಎಚ್ಚರಿಕೆ ನೀಡಲಾಗಿದೆ. ಭಯೋತ್ಪಾದನೆ ವಿರುದ್ಧದ ಸಮರ ತೀವ್ರಗೊಳಿಸಲು ಎಚ್ಚರಿಕೆ ನೀಡಲಾಗಿದ್ದು, ಇಂತಹ ಭಯೋತ್ಪಾದನೆ ಜಗತ್ತಿನ ಬೆಳವಣಿಗೆಗೆ ಮಾರಕ ಎಂದು ಹೇಳಲಾಗಿದೆ.


 ಅಫ್ಘಾನಿಸ್ತಾನದಿಂದ ಬರಿಗೈಯ್ಯಲ್ಲಿ ಬಂದಿದ್ದೇನೆ, ಮತ್ತೆ ವಾಪಸಾಗಲು ಮಾತುಕತೆ ನಡೆಸುತ್ತಿದ್ದೇನೆ ಎಂದ ಅಶ್ರಫ್ ಘನಿ

ಅಫ್ಘಾನಿಸ್ತಾನದಿಂದ ಬರಿಗೈಯ್ಯಲ್ಲಿ ಬಂದಿದ್ದೇನೆ, ಮತ್ತೆ ವಾಪಸಾಗಲು ಮಾತುಕತೆ ನಡೆಸುತ್ತಿದ್ದೇನೆ ಎಂದ ಅಶ್ರಫ್ ಘನಿ


 ಅಫ್ಘಾನಿಸ್ತಾನದಿಂದ ಬರಿಗೈಯ್ಯಲ್ಲಿ ಬಂದಿದ್ದೇನೆ, ಮತ್ತೆ ವಾಪಸಾಗಲು ಮಾತುಕತೆ ನಡೆಸುತ್ತಿದ್ದೇನೆ ಎಂದ ಅಶ್ರಫ್ ಘನಿ

ಅಬುಧಾಬಿ: ತಾಲಿಬಾನಿಗಳು ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಿದ್ದಂತೆಯೇ ದೇಶದಿಂದ ಪಲಾಯನಗೈದಿರುವ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ, ತಾನು ತಾಲಿಬಾನ್ ಮತ್ತು ಉನ್ನತ ಮಾಜಿ ಅಧಿಕಾರಿಗಳ ನಡುವಿನ ಮಾತುಕತೆಗಳನ್ನು ಬೆಂಬಲಿಸುವುದಾಗಿ ಹೇಳಿದರು. ತಾನು ಸಂಯುಕ್ತ ಅರಬ್ ಸಂಸ್ಥಾನಕ್ಕೆ ಪಲಾಯನಗೈಯ್ಯುವ ಮುನ್ನ ದೊಡ್ಡ ಮೊತ್ತದ ಹಣವನ್ನು ದೇಶದ ಹೊರಗೆ ಸಾಗಿಸಿರುವ ಕುರಿತಾದ ಆರೋಪಗಳನ್ನು ನಿರಾಕರಿಸಿದ್ದಾರೆ.

"ನನ್ನನ್ನು ದೇಶದಿಂದ ಹೇಗೆ ಹೊರದಬ್ಬಲಾಯಿತೆಂದರೆ ನನಗೆ ನನ್ನ ಚಪ್ಪಲಿ ತೆಗೆದು ಬೂಟುಗಳನ್ನು ಹಾಕುವಷ್ಟೂ ಅವಕಾಶ ನೀಡಲಾಗಿರಲಿಲ್ಲ,'' ಎಂದು ಹೇಳಿದ ಅವರು ಎಮಿರೇಟ್ಸ್ ಗೆ ಬರಿಗೈಯ್ಯಲ್ಲಿ ಬಂದಿದ್ದಾಗಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಿಂದ ಪಲಾಯನಗೈದ ನಂತರ ಮೊದಲ ಬಾರಿ ಬುಧವಾರ ವೀಡಿಯೋ ಸಂದೇಶ ಬಿಡುಗಡೆಗೊಳಿಸಿದ ಅಶ್ರಫ್ ಘನಿ, ತಮ್ಮ ದೇಶದಲ್ಲಿ ಇನ್ನಷ್ಟು ರಕ್ತಪಾತವಾಗುವುದನ್ನು ತಡೆಯಲು ದೇಶ ತೊರೆದಿದ್ದಾಗಿ ಹೇಳಿದ್ದಾರೆ.

ಅವರ ಫೇಸ್ ಬುಕ್ ಪುಟದಲ್ಲಿ ಈ ವೀಡಿಯೋ ಸಂದೇಶ ಪೋಸ್ಟ್ ಮಾಡಲಾಗಿದ್ದು, ತನಗೆ ಗಲ್ಫ್ ರಾಷ್ಟ್ರದಲ್ಲಿ ಉಳಿದುಕೊಳ್ಳುವ ಉದ್ದೇಶವಿಲ್ಲ ಹಾಗೂ ಮರಳಿ ಸ್ವದೇಶಕ್ಕೆ ವಾಪಸಾಗಲು ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಸಂಯುಕ್ತ ಅರಬ್ ಸಂಸ್ಥಾನ ಕೂಡ ಘನಿ ಅವರು ತನ್ನ ದೇಶದಲ್ಲಿದ್ದಾರೆ ಹಾಗೂ ಮಾನವೀಯ ಕಾರಣದಿಂದ ಅವರಿಗೆ ಇಲ್ಲಿ ಆಶ್ರಯ ನೀಡಲಾಗಿದೆ ಎಂದು ಹೇಳಿದೆ.

ಬುಧವಾರ ಘನಿ ಅವರಿಗಿಂತ ಮುಂಚೆ ಅಫ್ಘಾನ್ ಅಧ್ಯಕ್ಷರಾಗಿದ್ದ ಹಮೀದ್ ಕರ್ಝಾಯಿ ಅವರು ತಾಲಿಬಾನ್‍ನ ಹಿರಿಯ ಸದಸ್ಯರ ಜತೆಗೆ ನಡೆಸಿದ ಮಾತುಕತೆಗಳನ್ನು ಘನಿ ಬೆಂಬಲಿಸಿದರಲ್ಲದೆ ಈ ಪ್ರಕ್ರಿಯೆ ಯಶಸ್ವಿಯಾಗಬೇಕೆಂದು ತಾವು ಬಯಸುವುದಾಗಿ ತಿಳಿಸಿದರು.


ತಮ್ಮ ಹಿತಾಸಕ್ತಿ ರಕ್ಷಿಸಲು ದೇಶ ಬಿಟ್ಟು ಬಂದಿಲ್ಲ, ದೇಶದ ಒಳ್ಳೆಯದಕ್ಕಾಗಿ ಹಾಗೆ ಮಾಡಿದ್ದಾಗಿ ಅವರು ಪುನರುಚ್ಛರಿಸಿದ್ದಾರೆ.


 ಇನ್ನೂ 3 ಕೋಟಿಗೂ ಹೆಚ್ಚು ಜನ ಎರಡನೆ ಕೊವಿಡ್ ಲಸಿಕೆ ತೆಗೆದುಕೊಂಡಿಲ್ಲ!

ಇನ್ನೂ 3 ಕೋಟಿಗೂ ಹೆಚ್ಚು ಜನ ಎರಡನೆ ಕೊವಿಡ್ ಲಸಿಕೆ ತೆಗೆದುಕೊಂಡಿಲ್ಲ!

ಇನ್ನೂ 3 ಕೋಟಿಗೂ ಹೆಚ್ಚು ಜನ ಎರಡನೆ ಕೊವಿಡ್ ಲಸಿಕೆ ತೆಗೆದುಕೊಂಡಿಲ್ಲ!

ನವದೆಹಲಿ:ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ನ ನಿಗದಿತ ಅವಧಿಯಲ್ಲಿ 3.86 ಕೋಟಿಗೂ ಹೆಚ್ಚು ಜನರು ಕೋವಿಡ್ ಲಸಿಕೆಗಳ ಎರಡನೇ ಡೋಸ್ ಅನ್ನು ಪಡೆಯಲಿಲ್ಲ ಎಂದು ಸರ್ಕಾರವು ಆರ್‌ಟಿಐ ಪ್ರಶ್ನೆಗೆ ಪ್ರತಿಕ್ರಿಯಿಸಿದೆ.

ಕೋವಿನ್ ಪೋರ್ಟಲ್‌ನಲ್ಲಿರುವ ಮಾಹಿತಿಯ ಪ್ರಕಾರ, ಗುರುವಾರ ಮಧ್ಯಾಹ್ನದ ಹೊತ್ತಿಗೆ, 44,22,85,854 ಜನರು ತಮ್ಮ ಮೊದಲ ಡೋಸ್ ಅನ್ನು ಪಡೆದಿದ್ದಾರೆ, ಆದರೆ 12,59,07,443 ಜನರು ತಮ್ಮ ಎರಡನೇ ಡೋಸ್ ಅನ್ನು ತೆಗೆದುಕೊಂಡಿದ್ದಾರೆ. ಕಾರ್ಯಕರ್ತ ರಾಮನ್ ಶರ್ಮಾ ಮಾಹಿತಿ ಹಕ್ಕು ಕಾಯಿದೆಯಡಿ ಕೋವಿಶೀಲ್ಡ್ ಮತ್ತು ಕೋವಕ್ಸಿನ್ ಮೊದಲ ಡೋಸ್ ಲಸಿಕೆ ಪಡೆದವರ ಸಂಖ್ಯೆಯನ್ನು ಸರ್ಕಾರದಿಂದ ತಿಳಿಯಲು ಕೋರಿದರು. ಆದರೆ ನಿಗದಿತ ಸಮಯದೊಳಗೆ ಎರಡನೆಯದನ್ನು ತೆಗೆದುಕೊಳ್ಳಲಿಲ್ಲ ಎಂದು ಸರ್ಕಾರ ಉತ್ತರಿಸಿದೆ.

ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್ -19 ಲಸಿಕೆ ಆಡಳಿತ ಕೋಶವು ಕೋವಿಶೀಲ್ಡ್‌ನ ಎರಡನೇ ಡೋಸ್ ಅನ್ನು 84-112 ದಿನಗಳಲ್ಲಿ ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿದೆ, ಆದರೆ ಕೊವಾಕ್ಸಿನ್‌ನ ಸಂದರ್ಭದಲ್ಲಿ ಅಂತರವು 28 -42. ದಿನಗಳ ನಡುವೆ ಇರಬೇಕು . ಭಾರತ ಸರ್ಕಾರವು ನಿಗದಿಪಡಿಸಿದ ಅವಧಿಯೊಳಗೆ ತಮ್ಮ ಎರಡನೇ ಡೋಸ್ ಪಡೆಯದವರ ಸಂಖ್ಯೆ 3 , 40,72,993 (17 ಆಗಸ್ಟ್ 2021 ರ ಮಾಹಿತಿ) ಆಗಿದೆ.

'ಲಸಿಕೆಯ ಮೊದಲ ಡೋಸ್ ಪಡೆದ ಲಸಿಕೆದಾರರು ತಮ್ಮ ಎರಡನೇ ಡೋಸ್ ಅನ್ನು ನಿಗದಿತ ಅವಧಿಯಲ್ಲಿ ಪಡೆಯಲು ಶಿಫಾರಸು ಮಾಡಲಾಗಿದೆ. ವೆಬ್‌ಸೈಟ್‌ನಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳ ವಿಭಾಗದಲ್ಲಿ, 'ಲಸಿಕೆಯ ಸಂಪೂರ್ಣ ಪ್ರಯೋಜನವನ್ನು ಅರಿತುಕೊಳ್ಳಲು ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಳ್ಳಬೇಕು' ಎಂದು ಸರ್ಕಾರ ಶಿಫಾರಸು ಮಾಡುತ್ತದೆ. 'ಎರಡೂ ಡೋಸ್‌ಗಳು ಒಂದೇ ಲಸಿಕೆ ಪ್ರಕಾರವಾಗಿರಬೇಕು' ಎಂದು ಅದು ಹೇಳುತ್ತದೆ.


ರಾಜ್ಯದಲ್ಲಿಂದು 1,432 ಮಂದಿಗೆ ಕೊರೋನ ದೃಢ, 27 ಮಂದಿ ಸಾವು

ರಾಜ್ಯದಲ್ಲಿಂದು 1,432 ಮಂದಿಗೆ ಕೊರೋನ ದೃಢ, 27 ಮಂದಿ ಸಾವು


 ರಾಜ್ಯದಲ್ಲಿಂದು 1,432 ಮಂದಿಗೆ ಕೊರೋನ ದೃಢ, 27 ಮಂದಿ ಸಾವು

ಬೆಂಗಳೂರು, ಆ.19: ರಾಜ್ಯದಲ್ಲಿ ಗುರುವಾರ 1,432 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 27 ಜನರು ಸೋಂಕಿಗೆ ಬಲಿಯಾಗಿದ್ದು, 1,538 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 29,34,624ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37,088ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 21,133ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

27 ಸೋಂಕಿತರು ಬಲಿ: ಬೆಳಗಾವಿ 1, ಬೆಂಗಳೂರು ನಗರ 2, ದಕ್ಷಿಣ ಕನ್ನಡ 7, ದಾವಣಗೆರೆ 1, ಧಾರವಾಡ 1, ಹಾಸನ 1, ಹಾವೇರಿ 2, ಕೊಡಗು 2, ಮಂಡ್ಯ 2, ಮೈಸೂರು 3, ರಾಮನಗರ 1, ಶಿವಮೊಗ್ಗ 1, ತುಮಕೂರು 1, ಉಡುಪಿ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1,432 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಳ್ಳಾರಿ 4, ಬೆಳಗಾವಿ 46, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 318, ಬೀದರ್ 1, ಚಾಮರಾಜನಗರ 6, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 32, ಚಿತ್ರದುರ್ಗ 9, ದಕ್ಷಿಣ ಕನ್ನಡ 326, ದಾವಣಗೆರೆ 28, ಧಾರವಾಡ 7, ಗದಗ 1, ಹಾಸನ 94, ಹಾವೇರಿ 3, ಕಲಬುರಗಿ 6, ಕೊಡಗು 72, ಕೋಲಾರ 20, ಕೊಪ್ಪಳ 2, ಮಂಡ್ಯ 30, ಮೈಸೂರು 103, ರಾಯಚೂರು 4, ರಾಮನಗರ 5, ಶಿವಮೊಗ್ಗ 47, ತುಮಕೂರು 46, ಉಡುಪಿ 162, ಉತ್ತರ ಕನ್ನಡ 42, ವಿಜಯಪುರ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ರಾಜಧಾನಿಯಲ್ಲಿ ಗುರುವಾರದಂದು 318 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 12,34,157 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 15,955 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 12,10,259 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.


 ಬೆಂಗಳೂರು;  ಮಾಸ್ಕ್ ಧರಿಸದಿದ್ರೆ ಇನ್ಮೇಲೆ 250 ರೂ. ದಂಡ ಫಿಕ್ಸ್.!

ಬೆಂಗಳೂರು; ಮಾಸ್ಕ್ ಧರಿಸದಿದ್ರೆ ಇನ್ಮೇಲೆ 250 ರೂ. ದಂಡ ಫಿಕ್ಸ್.!


ಬೆಂಗಳೂರು;
ಮಾಸ್ಕ್ ಧರಿಸದಿದ್ರೆ ಇನ್ಮೇಲೆ 250 ರೂ. ದಂಡ ಫಿಕ್ಸ್.!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಏರಿಕೆ ಕಂಡಿದೆ. ಇದರ ಜೊತೆಗೆ ಸಾಲು ಸಾಲು ಹಬ್ಬಗಳು ಕೂಡ ಬರುತ್ತಿದೆ. ವರಮಹಾಲಕ್ಷ್ಮಿ ಹಬ್ಬ, ಮೊಹರಂ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿದೆ. ಹಬ್ಬದ ಹಿನ್ನೆಲೆ ರಸ್ತೆ, ಮಾರ್ಕೆಟ್ ಗಳಲ್ಲಿ ಹಣ್ಣು ಹೂ ಅಗತ್ಯ ಸಾಮಾನು ಖರೀದಿ ಕೂಡ ಜೋರಾಗಿದೆ.

ಆದ್ದರಿಂದ ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಾರ ಮಾರ್ಕೆಟ್ ಗಳಲ್ಲಿ ಹೆಚ್ಚು ಜನರು ಭೇಟಿ ನೀಡುವಂತಿಲ್ಲ, ಅಲ್ಲದೇ ಮಾಸ್ಕ್ ಧರಿಸದವರಿಗೆ 250 ರೂ.ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡಿದರೇ 250 ರೂ. ದಂಡ ವಿಧಿಸಲಾಗುತ್ತದೆ. ಬೆಂಗಳೂರಿನ ವ್ಯಾಪ್ತಿಯಲ್ಲಿರುವ ಅಂಗಡಿಗಳ ಮಾಲೀಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರುತ್ತದೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ಆಗಸ್ಟ್ 30 ರವರೆಗೆ ನೈಟ್ ಕರ್ಪ್ಯೂ ವಿಸ್ತರಿಸಲಾಗಿದೆ.

ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ಕೊರೊನಾ ಸೋಂಕಿನ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ ಆಗಸ್ಟ್ 30 ರವರೆಗೆ ನೈಟ್ ಕರ್ಪ್ಯೂ ವಿಸ್ತರಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಪ್ಯೂ ಆದೇಶ ಜಾರಿಯಲ್ಲಿರಲಿದೆ.

ನಗರದಲ್ಲಿ ಕೊರೋನಾ ಪ್ರಕರಣಗಳ ( Corona Case ) ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ, ನಿಯಂತ್ರಣ ಕ್ರಮವಾಗಿ, ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 9 ಗಂಟೆಯ ನಂತ್ರ ನೈಟ್ ಕರ್ಪ್ಯೂ ( Night Curfew ) ಜಾರಿಗೊಳ್ಳಲಿದ್ದು, ಈ ವೇಳೆಯಲ್ಲಿ ಅನಗತ್ಯವಾಗಿ ಓಡಾಡುವಂತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಲ್ಲದೇ, ವಾಹನಗಳನ್ನು ಪೊಲೀಸರು ಸೀಜ್ ಕೂಡ ಮಾಡಲಿದ್ದಾರೆ.


 ಸಚಿವ ಮುರುಗೇಶ ನಿರಾಣಿ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ

ಸಚಿವ ಮುರುಗೇಶ ನಿರಾಣಿ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ


 ಸಚಿವ ಮುರುಗೇಶ ನಿರಾಣಿ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ

ಬೆಂಗಳೂರು: ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಮುರುಗೇಶ್‌ ನಿರಾಣಿ ವಿರುದ್ಧ ನಗರದ ನ್ಯಾಯಾಲಯ ತನಿಖೆಗೆ ಆದೇಶಿಸಿದೆ.

ಗೋವಿಂದರಾಮ್‌ ಎಂಬವರು ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಈ ಆದೇಶ ನೀಡಿದೆ. ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಾಲಯ, ನಗರದ ಕೊಡಿಗೇಹಳ್ಳಿ ಪೊಲೀಸರಿಗೆ ಸೆ.13 ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚನೆ ನೀಡಿದೆ.

ಕಳೆದ ವರ್ಷ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಮುರುಗೇಶ್‌ ನಿರಾಣಿ ಹಿಂದೂ ದೇವತೆಗಳ ವಿರುದ್ಧ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

ತನ್ನ ವಿರುದ್ಧ ನ್ಯಾಯಾಲಯ ತನಿಖೆಗೆ ಆದೇಶಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮುರುಗೇಶ್ ನಿರಾಣಿ, ಹಿಂದೂ ದೇವತೆಗಳಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದ ಕುರಿತಾಗಿ ನನ್ನ ವಿರುದ್ಧ ತನಿಖೆಗೆ ನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್‌ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಜವಾಬ್ದಾರಿಯುತ ಪ್ರಜೆಯಾಗಿ ನ್ಯಾಯಾಲಯ ನೀಡಿರುವ ಆದೇಶಕ್ಕೆ ಬದ್ಧನಾಗಿದ್ದೇನೆ. ಹಿಂದೂ ಧರ್ಮ, ಆಚಾರ- ವಿಚಾರ, ಸಂಪ್ರದಾಯ ಹಾಗೂ ದೇವತೆಗಳ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲೂ ಹಿಂದೂ ಧರ್ಮಕ್ಕಾಗಲಿ, ದೇವತೆಗಳ ಬಗ್ಗೆಯಾಗಲಿ ಅಪಮಾನ ಮಾಡುವ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.

 ಸಿದ್ದೀಕ್ ಕಪ್ಪನ್ ವಿಚಾರಣೆಗೆ ಅನುಮತಿ ಕೋರಿ ಎಸ್  ಟಿಎಫ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮಥುರಾ ನ್ಯಾಯಾಲಯ

ಸಿದ್ದೀಕ್ ಕಪ್ಪನ್ ವಿಚಾರಣೆಗೆ ಅನುಮತಿ ಕೋರಿ ಎಸ್ ಟಿಎಫ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮಥುರಾ ನ್ಯಾಯಾಲಯಸಿದ್ದೀಕ್ ಕಪ್ಪನ್ ವಿಚಾರಣೆಗೆ ಅನುಮತಿ ಕೋರಿ ಎಸ್  ಟಿಎಫ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮಥುರಾ ನ್ಯಾಯಾಲಯ


ಮಥುರಾ: ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ದಿಲ್ಲಿ ನಿವಾಸದಲ್ಲಿ ನಿಷೇಧಿತ ಸಂಘಟನೆಯೊಂದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿರುವುದರಿಂದ ಅವರ ವಿಚಾರಣೆಗೆ ಅನುಮತಿಸಬೇಕೆಂದು ಕೋರಿ ಉತ್ತರ ಪ್ರದೇಶದ ಎಸ್‍ಟಿಎಫ್ ಸಲ್ಲಿಸಿದ್ದ ಅರ್ಜಿಯನ್ನು ಮಥುರಾದ ನ್ಯಾಯಾಲಯ ವಜಾಗೊಳಿಸಿದೆ.

ಎಸ್‍ಟಿಎಫ್ ಮನವಿಯನ್ನು ತಿರಸ್ಕರಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಅನಿಲ್ ಕುಮಾರ್ ಪಾಂಡೆ, ಪ್ರಕರಣದ ಚಾರ್ಜ್ ಶೀಟ್ ಈಗಾಗಲೇ ಸಲ್ಲಿಕೆಯಾಗಿರುವುದರಿಂದ ಆರೋಪಿಯ ವಿಚಾರಣೆಗೆ ಮತ್ತೆ ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಕಪ್ಪನ್ ಅವರ ದಿಲ್ಲಿ ನಿವಾಸದ ಮೇಲೆ ಕಳೆದ ವರ್ಷದ ನವೆಂಬರ್ 11ರಂದು ದಾಳಿ ನಡೆಸಿದಾಗ ನಿಷೇಧಿತ ಉಗ್ರ ಸಂಘಟನೆ ಸಿಮಿ ಕುರಿತಾದ ಪುಸ್ತಕ ಹಾಗೂ ಕೆಲ ಕೈಬರಹದ ಟಿಪ್ಪಣಿಗಳು ಪತ್ತೆಯಾಗಿದ್ದವು ಎಂದು ಎಸ್‍ಟಿಎಫ್ ಹೇಳಿತ್ತು.

ದಾಖಲೆಯನ್ನು ಆಗ್ರಾದ ವಿಧಿವಿಜ್ಞಾನ ಪ್ರಯೋಗಾಗಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಕಪ್ಪನ್ ಅವರ ಕೈಬರಹಕ್ಕೂ ಪುಸ್ತಕದಲ್ಲಿನ ಕೈಬರಹಕ್ಕೂ ತಾಳೆಯಾಗುತ್ತಿಲ್ಲ ಎಂಬ ವರದಿ ಬಂದಿದೆ ಈ ಕುರಿತು ವಿಚಾರಿಸಬೇಕು ಎಂದು ಎಸ್‍ಟಿಎಫ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿತ್ತು.

ಹತ್ರಸ್ ಸಾಮೂಹಿಕ ಅತ್ಯಾಚಾರ, ಕೊಲೆಯ ನಂತರ ಕಪ್ಪನ್ ಅವರು ಅಶಾಂತಿ ಸೃಷ್ಟಿಸಲು ಯತ್ನಿಸಿದ್ದಾರೆಂಬ ಆರೋಪವನ್ನು ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಹೊರಿಸಿದ್ದಾರೆ. ಕಪ್ಪನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹತ್ರಸ್‍ಗೆ ವರದಿ ಮಾಡಲೆಂದು ತೆರಳುತ್ತಿದ್ದ ವೇಳೆ ಅಕ್ಟೋಬರ್ 5, 2020ರಂದು ಅವರನ್ನು ಹಾಗೂ  ಇತರ ಕೆಲವರನ್ನು ಬಂಧಿಸಲಾಗಿತ್ತು. ಹಾಗೂ ನಂತರ ಯುಎಪಿಎ ಮತ್ತು ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು.

ಜೂನ್ 17ರಂದು ಮಥುರಾದ ನ್ಯಾಯಾಲಯವು ಕಪ್ಪನ್ ಹಾಗೂ ಇತರ ಮೂವರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿತ್ತು. ನಿಗದಿತ ಆರು ತಿಂಗಳುಗಳೊಗಾಗಿ ಪೊಲೀಸರು ಅವರ ವಿರುದ್ಧದ ತನಿಖೆ ಪೂರ್ಣಗೊಳಿಸಿರಲಿಲ್ಲ.


 ಜಮ್ಮು-ಕಾಶ್ಮೀರ: ಉಗ್ರರೊಂದಿಗೆ ಎನ್ಕೌಂಟರ್,ಕಿರಿಯ ಸೇನಾಧಿಕಾರಿ ಹುತಾತ್ಮ

ಜಮ್ಮು-ಕಾಶ್ಮೀರ: ಉಗ್ರರೊಂದಿಗೆ ಎನ್ಕೌಂಟರ್,ಕಿರಿಯ ಸೇನಾಧಿಕಾರಿ ಹುತಾತ್ಮ


 ಜಮ್ಮು-ಕಾಶ್ಮೀರ: ಉಗ್ರರೊಂದಿಗೆ ಎನ್ಕೌಂಟರ್,ಕಿರಿಯ ಸೇನಾಧಿಕಾರಿ ಹುತಾತ್ಮ

ಶ್ರೀನಗರ: ಜಮ್ಮು ಹಾಗೂ  ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಕಿರಿಯ ನಿಯೋಜಿತ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಉಗ್ರರು ಅನುಮಾನಾಸ್ಪದವಾಗಿ ಸಂಚರಿಸಿದ ವರದಿಗಳ ನಂತರ ಥಾಣಾಮಂಡಿಯ ಕಾರ್ಯೋಟೆ ಕಲಾಸ್ ಪ್ರದೇಶದಲ್ಲಿ ಪೊಲೀಸರು ಹಾಗೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಶೋಧ ಕಾರ್ಯ ಆರಂಭವಾಯಿತು ಹಾಗೂ ಆ ಪ್ರದೇಶದಲ್ಲಿ ಅಡಗಿದ್ದ ಉಗ್ರರು, ಭದ್ರತಾ ಸಿಬ್ಬಂದಿ ಇರುವುದನ್ನು ಗ್ರಹಿಸಿ  ಗುಂಡಿನ ದಾಳಿ ನಡೆಸಿದರು, ನಂತರ ಭದ್ರತಾಪಡೆ ಪ್ರತಿದಾಳಿ ನಡೆಸಿತು.

ಎನ್ಕೌಂಟರ್ ಇನ್ನೂ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

 ಅಂತರ್-ಧರ್ಮೀಯ ವಿವಾಹಕ್ಕೆ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಕೆಲ ನಿಬಂಧನೆಗಳು ಅನ್ವಯಿಸುವುದಿಲ್ಲ: ಹೈಕೋರ್ಟ್

ಅಂತರ್-ಧರ್ಮೀಯ ವಿವಾಹಕ್ಕೆ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಕೆಲ ನಿಬಂಧನೆಗಳು ಅನ್ವಯಿಸುವುದಿಲ್ಲ: ಹೈಕೋರ್ಟ್


 ಅಂತರ್-ಧರ್ಮೀಯ ವಿವಾಹಕ್ಕೆ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯ ಕೆಲ ನಿಬಂಧನೆಗಳು ಅನ್ವಯಿಸುವುದಿಲ್ಲ: ಹೈಕೋರ್ಟ್

ಅಹ್ಮದಾಬಾದ್: ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ) ಕಾಯಿದೆ 2021 ಇದರ ಕೆಲ ನಿಬಂಧನೆಗಳು ಯಾವುದೇ ಬಲವಂತ, ಆಮಿಷ ಅಥವಾ ವಂಚನೆಯಿಲ್ಲದೆ ನಡೆಯುವ ಅಂತರ-ಧರ್ಮೀಯ ವಿವಾಹಗಳಿಗೆ ಅನ್ವಯಿಸುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಇಂದು ಮಧ್ಯಂತರ ಆದೇಶವೊಂದರಲ್ಲಿ ಹೇಳಿದೆ.

ಅಂತರ-ಧರ್ಮೀಯ ವಿವಾಹವಾದವರನ್ನು ಅನಗತ್ಯ ಕಿರುಕುಳದಿಂದ ರಕ್ಷಿಸಲು ಈ ಮಧ್ಯಂತರ ಆದೇಶ ಹೊರಡಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ.

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ)ಕಾಯಿದೆ 2021ರ ಕೆಲವೊಂದು ನಿಬಂಧನೆಗಳನ್ನು ಪ್ರಶ್ನಿಸಿ ಮುಹಮ್ಮದ್ ಐಸಾ ಎಂ ಹಕೀಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಪೀಠ ಮೇಲಿನ ಮಧ್ಯಂತರ ಆದೇಶ ಹೊರಡಿಸಿದೆ.

ಅಂತರ-ಧರ್ಮೀಯ ವಿವಾಹವು ಬಲವಂತದ ಮತಾಂತರಕ್ಕೆ ಕಾರಣವಾದಲ್ಲಿ ಮಾತ್ರ ಕಾಯಿದೆಯ ನಿಬಂಧನೆಗಳು ಅನ್ವಯವಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಈ ವರ್ಷದ ಜೂನ್ 15ರಂದು ಗುಜರಾತ್‍ನಲ್ಲಿ ಈ ಕಾಯಿದೆಯು ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶಗಳಲ್ಲಿ ಜಾರಿಯಾದ `ಲವ್ ಜಿಹಾದ್ ವಿರೋಧಿ' ಕಾನೂನಿನ ಮಾದರಿಯಲ್ಲಿ ಜಾರಿಯಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಅಂತರ-ಧರ್ಮೀಯ ವಿವಾಹವು ಯಾವುದೇ ಬಲವಂತ, ಆಮಿಷ ಅಥವಾ ವಂಚನೆಯಿಂದ ನಡೆಸಲಾಗಿಲ್ಲದೇ ಇದ್ದಲ್ಲಿ ಕಾಯಿದೆಯ ಸೆಕ್ಷನ್ 3,4, 4ಎಯಿಂದ ಹಿಡಿದು 4ಸಿ,5, 6 ತನಕದ ನಿಬಂಧನೆಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

 ಮಂಗಳೂರು : ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ಮಂಗಳೂರು : ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ


 ಮಂಗಳೂರು : ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರತಿಭಟನೆ

ಮಂಗಳೂರು : ಖಾಸಗಿ ಬಸ್ ಪ್ರಯಾಣ ದರವನ್ನು ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರ ಮಾಡಿದೆ ಎಂದು ಆಕ್ಷೇಪಿಸಿ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಫಟನೆಗಳ ಒಕ್ಕೂಟ ದ.ಕ.ಜಿಲ್ಲೆ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಸಾರಿಗೆ ಪ್ರಾಧಿಕಾರದ ಸಭೆ ಕರೆಯದೆ ಜಿಲ್ಲಾಧಿಕಾರಿ ಬಸ್ ದರವನ್ನು ಏರಿಕೆ ಮಾಡಿ ಏಕಪಕ್ಷೀಯ ನಿರ್ಧಾರ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಬಸ್ ಪ್ರಯಾಣ ದರ ಏರಿಕೆ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ಮುಖಂಡ ವಸಂತ ಆಚಾರಿ, ಅವೈಜ್ಞಾನಿಕ ವಾಗಿ ಬಸ್ ಪ್ರಯಾಣ ದರವನ್ನು ಜಿಲ್ಲಾಡಳಿತ ಹೆಚ್ಚಳ ಮಾಡಿದೆ. ಇದರಿಂದ ದುಡಿದು ಬದುಕುವ ಜನ ಸಾಮಾನ್ಯರು, ಬಸ್ ಪ್ರಯಾಣ ಮಾಡುವವರು ತೊಂದರೆ ಅನುಭವಿಸುತ್ತಿದ್ದಾರೆ. ಟಿಕೆಟ್ ದರ ಶೇ.50ರಷ್ಟು ಏರಿಕೆ ಮಾಡಲಾಗಿದೆ. ಜಿಲ್ಲಾಧಿಕಾರಿ ಜನ ಸಾಮಾನ್ಯರ ಪರ ವಹಿಸುವ ಬದಲು ಬಸ್ ಮಾಲಕರ ಪರ ವಹಿಸಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಸದಾಶಿವ ಉಳ್ಳಾಲ್, ನೀರಜ್ ಪಾಲ್,  ಮುಹಮ್ಮದ್ ಕುಂಜತ್ತಬೈಲ್, ಕೃಷ್ಣಪ್ಪ ಸಾಲ್ಯಾನ್,  ವಿ.ಕುಕ್ಯಾನ್,  ಸೀತಾರಾಂ ಬೇರಿಂಜ , ಸುಮತಿ ಹೆಗಡೆ, ಅಲ್ತಾಫ್ ,  ಎಂ. ದೇವದಾಸ್, ಬಾಬಿನ್ ಪ್ರೀತಮ್,  ದುರ್ಗಾಪ್ರಸಾದ್ , ಜಯಂತಿ ಶೆಟ್ಟಿ, ಲತೀಫ್ ಬೆಂಗ್ರೆ, ಕರುಣಾಕರ್,  ಪುಷ್ಪರಾಜ್ , ರಘು ಎಕ್ಕಾರು, ವಿಶುಕುಮಾರ್, ಸಂತೋಷ್ ಕುಮಾರ್ ಬಜಾಲ್, ಜೆರಾಲ್ಡ್  ಟವರ್, ಮೈಕಲ್ ಮೊದಲಾದವರು ಉಪಸ್ಥಿತರಿದ್ದರು.

Wednesday, 18 August 2021

 ಕೇಂದ್ರ ಸಚಿವ ಭಗವಂತ ಖೂಬಾ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ

ಕೇಂದ್ರ ಸಚಿವ ಭಗವಂತ ಖೂಬಾ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ


 ಕೇಂದ್ರ ಸಚಿವ ಭಗವಂತ ಖೂಬಾ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ

ಬೆಂಗಳೂರು : ಜನಾಶೀರ್ವಾದ ಯಾತ್ರೆಯ ಹೆಸರಿನಲ್ಲಿ ನಡೆಸಿರುವ ಕಾನೂನು ಉಲ್ಲಂಘನೆ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿರುವ ಪ್ರಕರಣದಲ್ಲಿ ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ಭಗವಂತ ಖೂಬಾರನ್ನು ವಜಾಗೊಳಿಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರನ್ನೂ ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳೇ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕರೋನ ನಿಯಮ ಪಾಲನೆಯನ್ನು  ಗಾಳಿಗೆ ತೂರುತ್ತಿದ್ದಾರೆ . ಪೊಲೀಸ್ ಇಲಾಖೆಯಂತೂ ಕಣ್ಣುಮುಚ್ಚಿ ಕೂತಿದೆ , ರಾಜ್ಯ ಸರ್ಕಾರದ ಪರವಾಗಿ ಪೋಲಿಸರು ವರ್ತಿಸುತ್ತಿದ್ದಾರೆ. ನೀತಿ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ವಿರೋಧಪಕ್ಷಗಳನ್ನು ಗುರಿಯಾಗಿಸಿ ಪೋಲಿಸ್ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಕೂಡಲೇ ಪೊಲೀಸ್ ಇಲಾಖೆ ಪಕ್ಷಪಾತ ಧೋರಣೆಯನ್ನು ಕೈ ಬಿಟ್ಟು ಯಾರೇ  ನಿಯಮ ಉಲ್ಲಂಘಿಸಿದ್ದರೂ  ಹಾಗೂ ಇಂತಹ ಭಯದ ವಾತಾವರಣ ಸೃಷ್ಟಿಸಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದರು.

ಗಾಳಿಯಲ್ಲಿ  ಗುಂಡು ಹಾರಿಸಲು ಉತ್ತೇಜನ ನೀಡಿರುವ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ನನ್ನು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ರನ್ನು  ಕೂಡಲೇ ಬಂಧಿಸಬೇಕು ಹಾಗೂ  ಕ್ರಮ ಕೈಗೊಳ್ಳದೇ ಹೋದರೆ ರಾಜ್ಯದ ಪೊಲೀಸರಿಗೆ ಇದು ಕಪ್ಪುಚುಕ್ಕೆ ಎಂಬುದನ್ನು ಪೊಲೀಸ್ ಇಲಾಖೆ ಅರ್ಥೈಸಿಕೊಳ್ಳಬೇಕು ಎಂದರು.

ಗಾಳಿಯಲ್ಲಿ ಗುಂಡು ಹಾರಿಸಿರುವುದನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ಭಗವಂತ್ ಖೂಬಾ ಕರ್ನಾಟಕ ಶಾಂತಿಪ್ರಿಯ ನಾಡು ಇಲ್ಲಿ  ತಾಲಿಬಾನ್ ಸಂಸ್ಕೃತಿ ನಡೆಯುವುದಿಲ್ಲ. ಇದಕ್ಕೆ ಕರ್ನಾಟಕದ ಜನ ಅವಕಾಶ ನೀಡುವುದಿಲ್ಲ. ಈ ಮೂಲಕ ಎಚ್ಚರಿಸುತ್ತಿದ್ದೇವೆ ಕೂಡಲೇ ರಾಜಿನಾಮೆ ಕೊಟ್ಟು ತೊಲಗಬೇಕು ಎಂದು ಆಗ್ರಹಿಸುತ್ತಾ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟದ ಮಿತ್ರರು ಯಾವ ಮಟ್ಟಕ್ಕೆ ಸ್ವಾಗತವನ್ನು ಬಯಸಿದ್ದಾರೆ ಎಂಬುದನ್ನು ಗಮನಿಸಿದರೆ ಮೋದಿ ಅವರಿಗೆ ನಮ್ಮ ದೇಶದ ಸಂಸ್ಕೃತಿಯನ್ನು ಕೇಂದ್ರ ಸಚಿವರು  ತಾಲಿಬಾನ್ ಸಂಸ್ಕೃತಿಯತ್ತ ಕೊಂಡೊಯ್ಯತ್ತಿದ್ದಾರೆ ಎಂಬುದು ತಿಳಿಯುತ್ತಿದೆ‌.  ಕೂಡಲೇ ಇಂಥವರನ್ನು  ಸಚಿವ ಸಂಪುಟದಿಂದ ಪ್ರಧಾನಿ ಮೋದಿ  ವಜಾಗೊಳಿಸಲೇಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಭಗವಂತ ಖೂಬಾರ ವರ್ತನೆಯನ್ನು ಖಂಡಿಸಿ ಪ್ರತಿಕೃತಿ ದಹಿಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ನಡೆಸಿದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಮನೋಹರ್, ಜಿ ಜನಾರ್ದನ್, ಎ ಆನಂದ್,  ಎಂ ಎ ಸಲೀಂ, ಜಯಸಿಂಹ ಪ್ರಕಾಶ್ ಪುಟ್ಟರಾಜು, ಮಹೇಶ್, ಚಂದ್ರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

 ಕೋವಿಡ್-19: ಮುಂದಿನ ತಿಂಗಳ ವೇಳೆಗೆ ಮಕ್ಕಳ ಲಸಿಕೆ ನಿರೀಕ್ಷೆ

ಕೋವಿಡ್-19: ಮುಂದಿನ ತಿಂಗಳ ವೇಳೆಗೆ ಮಕ್ಕಳ ಲಸಿಕೆ ನಿರೀಕ್ಷೆ


 ಕೋವಿಡ್-19: ಮುಂದಿನ ತಿಂಗಳ ವೇಳೆಗೆ ಮಕ್ಕಳ ಲಸಿಕೆ ನಿರೀಕ್ಷೆ

ಪುಣೆ : ಮಕ್ಕಳಿಗೆ ಕೊರೋನ ಸೋಂಕು ವಿರುದ್ಧ ಸುರಕ್ಷೆ ನೀಡುವ ಕೊವ್ಯಾಕ್ಸಿನ್‌ನ 2 ಮತ್ತು 3ನೇ ಹಂತದ ಪರೀಕ್ಷಾರ್ಥ ಪ್ರಯೋಗ ಇದೀಗ ನಡೆಯುತ್ತಿದ್ದು, ಸೆಪ್ಟೆಂಬರ್ ವೇಳೆಗೆ ಅಥವಾ ಆ ಬಳಿಕ ಈ ವಯೋವರ್ಗಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಐಸಿಎಂಆರ್- ರಾಷ್ಟ್ರೀಯ ವೈರಾಣು ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಿಯಾ ಅಬ್ರಹಾಂ ಬಹಿರಂಗಪಡಿಸಿದ್ದಾರೆ.

2-18 ವರ್ಷ ವಯೋಮಿತಿಯವರಿಗಾಗಿ 2ನೇ ಹಂತದ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದೆ. ಫಲಿತಾಂಶ ಸದ್ಯವೇ ಲಭ್ಯವಾಗಲಿದೆ. ಇದನ್ನು ನಿಯಂತ್ರಣ ಸಂಸ್ಥೆಗೆ ಸಲ್ಲಿಸಲಾಗುವುದು. ಆದ್ದರಿಂದ ಸೆಪ್ಟೆಂಬರ್ ಮೊದಲು ಅಥವಾ ಬಳಿಕ ಮಕ್ಕಳಿಗೆ ಕೋವಿಡ್-19 ಲಸಿಕೆ ಲಭ್ಯವಾಗಬಹುದು. ಇದರ ಹೊರತಾಗಿ ಝೈದೂಸ್ ಕ್ಯಾಡಿಲ್ಲಾ ಮಕ್ಕಳ ಲಸಿಕೆ ಪ್ರಯೋಗ ಕೂಡಾ ನಡೆಯುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದರು.

ಝೈದೂಸ್ ಕ್ಯಾಡಿಲ್ಲಾ ಲಸಿಕೆ ಬಳಕೆಗಾಗಿ ಲಭ್ಯವಾಗಲಿರುವ ಮೊದಲ ಡಿಎನ್‌ಎ ಲಸಿಕೆಯಾಗಲಿದೆ. ಇದಕ್ಕೆ ಹೊರತಾಗಿ ಜೆನ್ನೋವಾ ಬಯೋ ಫಾರ್ಮಸ್ಯೂಟಿಕಲ್ಸ್ ಲಿಮಿಟೆಡ್‌ನ ಎಂ-ಆರ್‌ಎನ್‌ಎ ಲಸಿಕೆ, ಬಯೋಲಾಜಿಕಲ್-ಇ ಲಸಿಕೆ, ಸೆರೆಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ನೋವೋವ್ಯಾಕ್ಸ್ ಲಭ್ಯವಾಗಬಹುದು. ಇನ್ನೊಂದು ಕುತೂಹಲಕರ ಎನಿಸಿದ ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆಯನ್ನು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿದೆ. ಇದನ್ನು ಚುಚ್ಚುಮದ್ದಾಗಿ ನೀಡುವ ಅಗತ್ಯವಿಲ್ಲ. ಮೂಗಿನ ಹೊಳ್ಳೆಗಳ ಮೂಲಕ ಇದನ್ನು ನೀಡಬಹುದಾಗಿದೆ ಎಂದು ವಿವರಿಸಿದರು.

ಡೆಲ್ಟಾ ಪ್ಲಸ್ ಪ್ರಬೇಧದ ವಿರುದ್ಧ ಪರಿಣಾಮಕಾರಿಯಾಗಿರುವ ಲಸಿಕೆ ಲಭ್ಯವಿದೆಯೇ ಎಂದು ಕೇಳಿದ ಪ್ರಶ್ನೆಗೆ, "ಡೆಲ್ಟಾ ಪ್ರಬೇಧಕ್ಕೆ ಹೋಲಿಸಿದರೆ ಡೆಲ್ಟಾ ಪ್ಲಸ್ ಹರಡುವ ಸಾಧ್ಯತೆ ಕಡಿಮೆ. ಪ್ರಸ್ತುತ ಇದು 130 ದೇಶಗಳಲ್ಲಿದೆ. ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ಈ ಪ್ರಬೇಧದ ದಾಳಿಯನ್ನು ತಡೆದಿದೆ ಎನ್ನುವುದು ಎನ್‌ಐವಿ ಅಧ್ಯಯನದಿಂದ ತಿಳಿದುಬಂದಿದೆ. ಡೆಲ್ಟಾ ವಿರುದ್ಧ ಪ್ರತಿಕಾಯ ಫಲದಾಯಕತೆಯು 2 ರಿಂದ ಮೂರು ಪಟ್ಟು ಕಡಿಮೆಯಾಗುತ್ತದೆ. ಇಷ್ಟಾಗಿಯೂ ಲಸಿಕೆಗಳು ಈ ಪ್ರಬೇಧಗಳ ವಿರುದ್ಧ ಸುರಕ್ಷೆ ನೀಡುತ್ತವೆ ಎಂದರು.

 ರಾಜ್ಯದಲ್ಲಿಂದು 1,365 ಮಂದಿಗೆ ಕೊರೋನ ದೃಢ, 22 ಮಂದಿ ಸಾವು

ರಾಜ್ಯದಲ್ಲಿಂದು 1,365 ಮಂದಿಗೆ ಕೊರೋನ ದೃಢ, 22 ಮಂದಿ ಸಾವು

ರಾಜ್ಯದಲ್ಲಿಂದು 1,365 ಮಂದಿಗೆ ಕೊರೋನ ದೃಢ, 22 ಮಂದಿ ಸಾವು

ಬೆಂಗಳೂರು, ಆ.18: ರಾಜ್ಯದಲ್ಲಿ ಬುಧವಾರ 1,365 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 22 ಜನರು ಸೋಂಕಿಗೆ ಬಲಿಯಾಗಿದ್ದು, 1,558 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 29,33,192ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 37,061ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 21,266ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

22 ಸೋಂಕಿತರು ಬಲಿ: ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 2, ಚಾಮರಾಜನಗರ 1, ದಕ್ಷಿಣ ಕನ್ನಡ 3, ದಾವಣಗೆರೆ 1, ಕೋಲಾರ 1, ಮೈಸೂರು 3, ಶಿವಮೊಗ್ಗ 1, ತುಮಕೂರು 2, ಉಡುಪಿ 2, ಉತ್ತರ ಕನ್ನಡ 1, ಯಾದಗಿರಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1,365 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 2, ಬಳ್ಳಾರಿ 2, ಬೆಳಗಾವಿ 37, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 327, ಬೀದರ್ 2, ಚಾಮರಾಜನಗರ 7, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 47, ಚಿತ್ರದುರ್ಗ 11, ದಕ್ಷಿಣ ಕನ್ನಡ 268, ದಾವಣಗೆರೆ 11, ಧಾರವಾಡ 10, ಗದಗ 1, ಹಾಸನ 107, ಹಾವೇರಿ 1, ಕಲಬುರಗಿ 11, ಕೊಡಗು 86, ಕೋಲಾರ 21, ಮಂಡ್ಯ 25, ಮೈಸೂರು 123, ರಾಯಚೂರು 5, ಶಿವಮೊಗ್ಗ 45, ತುಮಕೂರು 52, ಉಡುಪಿ 97, ಉತ್ತರ ಕನ್ನಡ 51, ವಿಜಯಪುರ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ರಾಜಧಾನಿಯಲ್ಲಿ ಬುಧವಾರದಂದು 327 ಜನರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. 

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 12,33,839 ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 15,953 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 12,09,965 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.


 'ಅಶ್ರಫ್ ಘನಿ', ಕುಟುಂಬವನ್ನ ಸ್ವಾಗತಿಸಿದ್ದೇವೆ :ಯುಎಇ

'ಅಶ್ರಫ್ ಘನಿ', ಕುಟುಂಬವನ್ನ ಸ್ವಾಗತಿಸಿದ್ದೇವೆ :ಯುಎಇ


 'ಅಶ್ರಫ್ ಘನಿ', ಕುಟುಂಬವನ್ನ ಸ್ವಾಗತಿಸಿದ್ದೇವೆ :ಯುಎಇ

'ಮಾನವೀಯ ಆಧಾರದ ಮೇಲೆ' ಅಶ್ರಫ್ ಘನಿ ಮತ್ತು ಅವ್ರ ಕುಟುಂಬವನ್ನ ಕರೆದೊಯ್ಯಲಾಗಿದೆ ಅನ್ನೋದನ್ನ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪ್ಪಿಕೊಂಡಿದೆ.

ಯುಎಇಯ ಸರ್ಕಾರಿ ಡಬ್ಲ್ಯೂಎಎಂ ಸುದ್ದಿ ಸಂಸ್ಥೆ ಬುಧವಾರ ನೀಡಿದ ಹೇಳಿಕೆಯಲ್ಲಿ, ಘನಿ ದೇಶದಲ್ಲಿ ಎಲ್ಲಿದ್ದಾರೆ ಎಂದು ಹೇಳಿಲ್ಲ. ಇದು ದೇಶದ ವಿದೇಶಾಂಗ ಸಚಿವಾಲಯವನ್ನು ಒಂದು ವಾಕ್ಯದ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಅದ್ರಂತೆ 'ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ಮಾನವೀಯ ಆಧಾರದ ಮೇಲೆ ದೇಶಕ್ಕೆ ಸ್ವಾಗತಿಸಿದೆ' ಎಂದು ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯವು ದೃಢಪಡಿಸಿದೆ.

ಅದ್ರಂತೆ, ಕೆಲವು ಗಂಟೆಗಳ ಹಿಂದೆ ದೇಶವನ್ನ ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಕಾಬೂಲ್ʼನಿಂದ ಪಲಾಯನ ಮಾಡಿದ ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಈಗ ಅಬುಧಾಬಿಯಲ್ಲಿ ನೆಲೆಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಘನಿ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರಾಜಧಾನಿಯಲ್ಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಕಾಬೂಲ್ ನ್ಯೂಸ್ ವರದಿ ಮಾಡಿದೆ.

ಈ ಹಿಂದೆ, ತಾಲಿಬಾನ್ ಕೇವಲ ಒಂದೆರಡು ವಾರಗಳಲ್ಲಿ ಆಫ್ಘಾನಿಸ್ತಾನವನ್ನ ತ್ವರಿತವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರಿಂದ ಘನಿ ನೆರೆಯ ತಜಕಿಸ್ತಾನ ಅಥವಾ ಉಜ್ಬೇಕಿಸ್ತಾನಕ್ಕೆ ಪಲಾಯನ ಮಾಡಿದ್ದಾನೆ ಎಂದು ವರದಿಗಳು ಹೇಳಿವೆ. ಆದಾಗ್ಯೂ, ಆಗಸ್ಟ್ 15ರಿಂದ ಘನಿ ಅವರ ಸ್ಥಳದ ಬಗ್ಗೆ ಯಾವುದೇ ದೃಢೀಕೃತ ಮಾಹಿತಿ ಇಲ್ಲ.

ಘನಿ ಹೆಲಿಕಾಪ್ಟರ್ʼನಲ್ಲಿ ಸಾಕಷ್ಟು ನಗದು ಹಣದೊಂದಿಗೆ ಆಫ್ಘಾನಿಸ್ತಾನದಿಂದ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ.

 ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ

ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ

 

ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ 

ನವದೆಹಲಿ : ಡಾಲರ್ ಎದುರು, ಭಾರತೀಯ ಕರೆನ್ಸಿ ರೂಪಾಯಿ ಇಂದು (ಆಗಸ್ಟ್ 18) ಉತ್ತಮ ಏರಿಕೆ ಕಂಡಿದೆ. ಇಂದು ಡಾಲರ್ ಎದುರು ರೂಪಾಯಿ 11 ಪೈಸೆ ಬಲಗೊಂಡಿದ್ದು, 74.24 ಕ್ಕೆ ಕೊನೆಗೊಂಡಿದೆ. ಷೇರು ಮಾರುಕಟ್ಟೆಯಂತೆ ಇಂದು ರೂಪಾಯಿ ಕೂಡ ಡಾಲರ್ ಎದುರು ಪ್ರಬಲವಾಗಿ ಆರಂಭವಾಗಿದೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಡಾಲರ್ ಎದುರು ರೂಪಾಯಿ ಇಂದು ಬೆಳಿಗ್ಗೆ 74.30 ರ ಪ್ರಬಲ ಮಟ್ಟದಲ್ಲಿ ಆರಂಭವಾಯಿತು. ಇದರ ನಂತರ, ವಹಿವಾಟು 74.24 ರಿಂದ 74.31 ರವರೆಗೆ ದಿನವಿಡೀ ಮುಂದುವರೆಯಿತು. ಕೊನೆಯಲ್ಲಿ, ದೇಶೀಯ ಕರೆನ್ಸಿ ನಿನ್ನೆಗಿಂತ 11 ಪೈಸೆ ಹೆಚ್ಚಳದೊಂದಿಗೆ 74.24 ಕ್ಕೆ ಕೊನೆಗೊಂಡಿತು.


 ಸರ್ಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಲು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಸರ್ಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಲು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ


 ಸರ್ಕಾರಿ ದೇವಸ್ಥಾನಗಳ ಆಸ್ತಿ ಸಮೀಕ್ಷೆ ನಡೆಸಲು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಆಸ್ತಿ ಸಮೀಕ್ಷೆ  ನಡೆಸುವಂತೆ ಮುಜರಾಯಿ, ವಕ್ಪ್ ಮತ್ತು ಹಜ್ ಸಚಿವರಾದ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆಯಾದ ಮೇಲೆ  ಬುಧವಾರ ಶಶಿಕಲಾ ಜೊಲ್ಲೆಯವರು ನೂತನ ಕಚೇರಿ ಪೂಜೆ ಮಾಡಿದರು.

ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳಿಂದ  ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಎ. ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳ ಜಿಲ್ಲಾವಾರು ದೇವಸ್ಥಾನಗಳ ಮಾಹಿತಿ ಪಡೆದುಕೊಂಡು,  ಆಸ್ತಿ ಎಷ್ಷಿದೆ ಎಂದು ಸಮೀಕ್ಷೆ ನಡೆಸಿ, ದೇವಸ್ಥಾನಗಳ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇಲಾಖೆ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಅಲ್ಲದೆ ಭಕ್ತರಿಗೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮುಜಾರಾಯಿ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯುವ ಯೋಜನೆಗಳ ಮಾಹಿತಿ ಪಡೆದುಕೊಂಡರು. ರಾಜ್ಯದ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಬಳಿ ಭಕ್ತರಿಗೆ ವಸತಿಗಾಗಿ ಎಷ್ಟು  ಯಾತ್ರಿ ನಿವಾಸಗಳಿವೆ. ರಾಜ್ಯದಲ್ಲಿ ಯಾವ ದೇವಸ್ಥಾನದ ವ್ಯಾಪ್ತಿಯಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲು ಅವಕಾಶ ಇದೆ ಎನ್ನುವ ಬಗ್ಗೆ ಸಂಪೂರ್ಣ ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದರು. 

ಅಲ್ಲದೇ ಮಹಾರಾಷ್ಟ್ರದ ಪಂಡರಪುರ ಹಾಗೂ ತುಳಜಾಭವಾನಿ ದೇವಸ್ಥಾನದ ಬಳಿ ತಿರುಪತಿ ಮಾದರಿ ಯಾತ್ರಿ ನಿವಾಸ್ ನಿರ್ಮಾಣ ಮಾಡುವ ಕುರಿತು ಅಲ್ಲಿ ರಾಜ್ಯ ಸರ್ಕಾರದ  ಜಮೀನು ಎಷ್ಟಿದೆ ಎನ್ನುವ ಮಾಹಿತಿ ಪಡೆಯುವಂತೆ ಸೂಚಿಸಿದರು. ಆಂಧ್ರಪ್ರದೇಶದ ಶ್ರೀಶೈಲಂಗೆ ಭೇಟಿ ನೀಡಿ ಅಲ್ಲಿಯೂ ರಾಜ್ಯದ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡುವ ಕುರಿತು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದರು. 

 ಅದೇ ರೀತಿ, ತಮಿಳುನಾಡು, ಕೇರಳದ ಪ್ರಸಿದ್ಧ ದೇವಸ್ಥಾನಗಳಲ್ಲಿ ಯಾತ್ರಿ ನಿವಾಸಗಳನ್ನು ತೆರೆಯುವ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಇನ್ನು ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಸಂಪೂರ್ಣ ನಿಷೇಧ ಹೇರುವ ಬದಲು ನಿರ್ದಿಷ್ಟ ಭಕ್ತರನ್ನು ಹಂತ ಹಂತವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಯಾವ ಕ್ರಮ ಕೈಗೊಳ್ಳಬಹುದು  ಎನ್ನುವುದನ್ನು ತಿಳಿದುಕೊಂಡು ಮಾಹಿತಿ ನೀಡುವಂತೆ ಸೂಚಿಸಿದರು.

ಇನ್ನು ರಾಜ್ಯ ಸರ್ಕಾರದ ಮಹತ್ವದ ಸಾಮೂಹಿಕ ಮದುವೆ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಈ ಯೋಜನೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಯೋಜನೆ ಯಶಸ್ವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದೇ ವೇಳೆ. ವಕ್ಫ್ ಮತ್ತು ಹಜ್ ಇಲಾಖೆ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕ ಸರ್ಫರಾಜ್ ಖಾನ್ ಅವರೊಂದಿಗೆ ಚರ್ಚೆ ನಡೆಸಿದ ಸಚಿವರು ಹಜ್ ಭವನದಲ್ಲಿ ಯಾವ ರೀತಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಪಡೆದರು. ಹಜ್ ಭವನ ಕೊವಿಡ್ ಕೇಂದ್ರವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.  

ಸಭೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

 ಭಾರತದ ಕ್ರೀಡಾಳುಗಳು ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಮೋದಿಯ ಕಠಿಣ ಪರಿಶ್ರಮವಿದೆ: ಕೇಂದ್ರ ಸಚಿವರ ಹೇಳಿಕೆ

ಭಾರತದ ಕ್ರೀಡಾಳುಗಳು ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಮೋದಿಯ ಕಠಿಣ ಪರಿಶ್ರಮವಿದೆ: ಕೇಂದ್ರ ಸಚಿವರ ಹೇಳಿಕೆ


 ಭಾರತದ ಕ್ರೀಡಾಳುಗಳು ಒಲಿಂಪಿಕ್ಸ್ ಪದಕ ಗೆಲ್ಲುವಲ್ಲಿ ಮೋದಿಯ ಕಠಿಣ ಪರಿಶ್ರಮವಿದೆ: ಕೇಂದ್ರ ಸಚಿವರ ಹೇಳಿಕೆ

ಹೊಸದಿಲ್ಲಿ: ಕಳೆದ ನಾಲ್ಕೈದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಪಟ್ಟ ಶ್ರಮದಿಂದಾಗಿ ನೀರಜ್ ಚೋಪ್ರಾರವರಂತಹ ಯುವಜನತೆ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವಂತಾಗಿದೆ ಎಂದು ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿಂಗ್ ಚೌಹಾಣ್ ಹೇಳಿದ್ದಾರೆ.

ಉತ್ತರ ಗುಜರಾತ್‍ನ ಪಟಾನ್ ಎಂಬಲ್ಲಿ ಜನಾಶೀರ್ವಾದ ಯಾತ್ರೆಯ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕೆಲ ನಿರ್ಧಾರಗಳು ಅಭೂತಪೂರ್ವ ಎಂದು ಬಣ್ಣಿಸಿದ ಅವರು "ಮಹಿಳಾ ಕ್ರೀಡಾಳುವೊಬ್ಬರು ಪದಕ ಗೆದ್ದರೆ ಅಥವಾ ನೀರಜ್ ಚೋಪ್ರಾರಂತಹವರು ಚಿನ್ನ ಗೆದ್ದಿದ್ದರೆ ಅದರ ಹಿಂದೆ ಮೋದಿ ಸಾಹೇಬ್ ಅವರ 4-5 ವರ್ಷಗಳ ಶ್ರಮವಿದೆ,'' ಎಂದು ಹೇಳಿದರು.

 ಮಹಿಳೆಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ ಬರೆಯಬಹುದು: ಸುಪ್ರೀಂ ಕೋರ್ಟ್

ಮಹಿಳೆಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ ಬರೆಯಬಹುದು: ಸುಪ್ರೀಂ ಕೋರ್ಟ್


 ಮಹಿಳೆಯರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆ ಬರೆಯಬಹುದು: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಭಾರತದ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಗೊಳಿಸಲು ಅನುವು ಮಾಡಿಕೊಡುವ ಮಹತ್ವದ ಮಧ್ಯಂತರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಮುಂದಿನ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಎನ್ ಡಿ ಎ (ರಾಷ್ಟ್ರೀಯ ರಕ್ಷಣಾ ಅಕಾಡೆಮಿ) ಪರೀಕ್ಷೆಗೆ ಮಹಿಳೆಯರು ಕುಳಿತುಕೊಳ್ಳಬಹುದು ಎಂದು ಹೇಳಿದೆ.

ದೇಶದ ಮಿಲಿಟರಿಯಲ್ಲಿ ಪುರುಷರು ಹಾಗೂ  ಮಹಿಳೆಯರಿಗೆ ಸಮಾನ ಸೇವಾ ಅವಕಾಶಗಳು ಬಂದಾಗ ಸರಕಾರದ 'ಮನಸ್ಥಿತಿ ಸಮಸ್ಯೆ' ಯನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು ಮತ್ತು 'ನೀವು ಬದಲಾವಣೆ ಮಾಡಿಕೊಳ್ಳುವುದು ಉತ್ತಮ' ಎಂದು ಎಚ್ಚರಿಸಿದೆ.

 ಇಂದಿನಿಂದ ಮಂಗಳೂರು- ಯುಎಇ ವಿಮಾನ ಸಂಚಾರ ಪುನಾರಂಭ

ಇಂದಿನಿಂದ ಮಂಗಳೂರು- ಯುಎಇ ವಿಮಾನ ಸಂಚಾರ ಪುನಾರಂಭ


 ಇಂದಿನಿಂದ ಮಂಗಳೂರು- ಯುಎಇ ವಿಮಾನ ಸಂಚಾರ ಪುನಾರಂಭ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್‌ಟಿಪಿಸಿಆರ್ ಉಪಕರಣ ಅಳವಡಿಸಿದ ಹಿನ್ನೆಲೆಯಲ್ಲಿ ಇಂದಿನಿಂದ (ಆ.18) ಮಂಗಳೂರು-ಯುಎಇ ನಡುವೆ ವಿಮಾನ ಸಂಚಾರ ಪುನಾರಂಭಗೊಳ್ಳಲಿದೆ.

ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರ ಮಂಗಳೂರಿನಿಂದ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದ ಬೆನ್ನಲ್ಲೇ, ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್‌ಟಿ-ಪಿಸಿಆರ್ ಉಪಕರಣ ಅಳವಡಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ರಾಪಿಡ್ ಆರ್‌ಟಿಪಿಸಿಆರ್ ವ್ಯವಸ್ಥೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅಪರಾಹ್ನ ವಿಮಾನ ಸಂಚಾರ ಆರಂಭಗೊಳ್ಳಲಿದೆ.

ಇತ್ತೀಚಿನ ಯುಎಇ ಸರಕಾರದ ಆರೋಗ್ಯ ಸಚಿವಾಲಯ ತನ್ನ ದೇಶಕ್ಕೆ ಆಗಮಿಸುವ ಪ್ರತಿ ಪ್ರಯಾಣಿಕರೂ ವಿಮಾನ ಹತ್ತುವುದಕ್ಕೆ ಆರು ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ರಾಪಿಡ್ ಆರ್‌ಟಿ-ಪಿಸಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿಯನ್ನು ಒಪ್ಪಿಸುವುದು ಕಡ್ಡಾಯಗೊಳಿಸಿತ್ತು. ಆದರೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಸೌಲಭ್ಯ ಇಲ್ಲದೆ ಪ್ರಯಾಣಕ್ಕೆ ಅವಕಾಶ ಇರಲಿಲ್ಲ. ಇದೀಗ ರಾಪಿಡ್ ಟೆಸ್ಟ್ ಗೆ ಉಪಕರಣ ಅಳವಡಿಸುವ ಮೂಲಕ ಯುಎಇ ಪ್ರಯಾಣಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿದಿದೆ.

 ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಅವಧಿ ವಿಸ್ತರಣೆ

ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಅವಧಿ ವಿಸ್ತರಣೆ


 ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಅವಧಿ ವಿಸ್ತರಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭಾವ್ಯ ಕೊರೋನ ಮೂರನೇ ಅಲೆಯನ್ನು ಹತ್ತಿಕ್ಕುವ ಸಲುವಾಗಿ ಆಗಸ್ಟ್ 30 ರವರೆಗೆ ನೈಟ್ ಕರ್ಫ್ಯೂ ವಿಸ್ತರಿಸಲಾಗಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದು, ಕೊರೋನ ಮೂರನೇ ಅಲೆ ಭೀತಿಯ ಹಿನ್ನೆಲೆ ಕೊರೋನ ಸೋಂಕಿನ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ ಆ.30ರವರೆಗೆ ನೈಟ್ ಕರ್ಪ್ಯೂ ವಿಸ್ತರಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದಿದ್ದಾರೆ.

ನಗರದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ, ನಿಯಂತ್ರಣ ಕ್ರಮವಾಗಿ, ರಾತ್ರಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 9 ಗಂಟೆಯ ನಂತರ ನೈಟ್ ಕರ್ಫ್ಯೂ ಜಾರಿಗೊಳ್ಳಲಿದ್ದು, ಈ ವೇಳೆಯಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಲ್ಲದೇ, ವಾಹನಗಳನ್ನು ಪೊಲೀಸರು ಜಪ್ತಿ ಕೂಡ ಮಾಡಲಿದ್ದಾರೆ ಎಂದೂ ಅವರು ಎಚ್ಚರಿಸಿದ್ದಾರೆ.

Tuesday, 17 August 2021

 ದೇಶಾದ್ಯಂತ ಅಡುಗೆ ಅನಿಲ ಬೆಲೆ 25 ರೂ. ಹೆಚ್ಚಳ

ದೇಶಾದ್ಯಂತ ಅಡುಗೆ ಅನಿಲ ಬೆಲೆ 25 ರೂ. ಹೆಚ್ಚಳ


 ದೇಶಾದ್ಯಂತ ಅಡುಗೆ ಅನಿಲ ಬೆಲೆ 25 ರೂ. ಹೆಚ್ಚಳ

ಹೊಸದಿಲ್ಲಿ: ದೇಶೀಯ (14.2 ಕಿಲೋಗ್ರಾಂ) ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG ಅಥವಾ ಅಡುಗೆ ಅನಿಲ) ಸಿಲಿಂಡರ್ ಬೆಲೆಯನ್ನು ಮಂಗಳವಾರ 25 ರೂ. ಏರಿಸಲಾಗಿದೆ. ಈ ಏರಿಕೆಯೊಂದಿಗೆ ದೇಶೀಯ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿಯಲ್ಲಿ 859 ರೂ.ಗೆ ತಲುಪಿದೆ.

ದೇಶಾದ್ಯಂತ ಇದೇ ಪ್ರಮಾಣದಲ್ಲಿ ಬೆಲೆಯನ್ನು ಹೆಚ್ಚಿಸಲಾಗಿದೆ.

ತೈಲ ಕಂಪನಿಗಳು ದೇಶೀಯ ಅಡುಗೆ ಅನಿಲದ ಬೆಲೆಯನ್ನು  ಸತತ ಎರಡನೇ ತಿಂಗಳು ಹೆಚ್ಚಿಸಿವೆ. ದೇಶೀಯ ಸಿಲಿಂಡರ್ ಬೆಲೆ ಜೂನ್ 1 ರಂದು 809 ರೂ. ಇತ್ತು. ಇದನ್ನು ಜುಲೈ 1 ರಂದು 834 ರೂ.ಗೆ ಏರಿಸಲಾಗಿದೆ.

ಜನವರಿ 1 ರಿಂದ ಆಗಸ್ಟ್ 17 ರ ನಡುವೆ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ತಲಾ 165 ರೂ ಏರಿಕೆಯಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಸರಕಾರದ ಮೇಲೆ ಒತ್ತಡವನ್ನು ಕಡಿಮೆ ಮಾಡಲು ತೈಲ ಕಂಪನಿಗಳು ಆಗಸ್ಟ್ 1 ರಂದು ಎಲ್ ಪಿ ಜಿ ಬೆಲೆ ಏರಿಕೆಯನ್ನು ತಡೆಹಿಡಿದಿದ್ದವು ಎಂದು ವಲಯ ವೀಕ್ಷಕರು ಹೇಳುತ್ತಾರೆ.

 ಪಂಜರದ ಗಿಣಿಯನ್ನು(ಸಿಬಿಐ) ಬಿಡುಗಡೆಗೊಳಿಸಬೇಕು: ಮದ್ರಾಸ್ ಹೈಕೋರ್ಟ್

ಪಂಜರದ ಗಿಣಿಯನ್ನು(ಸಿಬಿಐ) ಬಿಡುಗಡೆಗೊಳಿಸಬೇಕು: ಮದ್ರಾಸ್ ಹೈಕೋರ್ಟ್


 ಪಂಜರದ ಗಿಣಿಯನ್ನು(ಸಿಬಿಐ) ಬಿಡುಗಡೆಗೊಳಿಸಬೇಕು: ಮದ್ರಾಸ್ ಹೈಕೋರ್ಟ್

ಹೊಸದಿಲ್ಲಿ: "ಕೇವಲ ಸಂಸತ್ತಿಗೆ ವರದಿ ಸಲ್ಲಿಸುವಂತಿರುವ ಸ್ವಾಯತ್ತ ಸಂಸ್ಥೆಯಾಗಿ ಸಿಬಿಐ ಇರಬೇಕು. ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾದಂತೆ ಸಿಬಿಐಗೆ ಸ್ವಾಯತ್ತತೆಯಿರಬೇಕು ಹಾಗೂ ಅದು ಕೇವಲ ಸಂಸತ್ತಿಗೆ ಮಾತ್ರ ಉತ್ತರದಾಯಿತ್ವ ಹೊಂದಿರಬೇಕು. "ಪಂಜರದ ಗಿಣಿ(ಸಿಬಿಐ)'' ಅನ್ನು ಬಿಡುಗಡೆಗೊಳಿಸುವ ಯತ್ನವಾಗಿ ಈ ತೀರ್ಪು ನೀಡಲಾಗಿದೆ,'' ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಹೇಳಿದೆ.

ಸಿಬಿಐಗೆ ಶಾಸನಬದ್ಧ ಸ್ಥಾನಮಾನ ನೀಡಿದಾಗ ಮಾತ್ರ ಅದೊಂದು ಸ್ವಾಯತ್ತ ಸಂಸ್ಥೆಯಾಗಬಹುದು ಎಂದು ನ್ಯಾಯಾಲಯ ಹೇಳಿದೆ. "ಸಿಬಿಐಗೆ ಶಾಸನಬದ್ಧ ಸ್ಥಾನಮಾನ ಮತ್ತು ಹೆಚ್ಚು ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಆದಷ್ಟು ಬೇಗ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಕಾಯಿದೆಯನ್ನು ಜಾರಿಗೆ ತರುವ ನಿರ್ಧಾರವನ್ನು ಕೈಗೊಳ್ಳುವ ಕುರಿತು ಭಾರತ ಸರಕಾರ ಪರಿಶೀಲಿಸಬೇಕು. ಸರಕಾರದ ಯಾವುದೇ ಆಡಳಿತಾತ್ಮಕ ನಿಯಂತ್ರಣವಿಲ್ಲದೆ ಸಿಬಿಐಗೆ ಕಾರ್ಯನಿರ್ವಹಿಸಲು ಸ್ವಾತಂತ್ರ್ಯ ಒದಗಿಸಬೇಕು,'' ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ತಮಿಳುನಾಡಿನಲ್ಲಿ ನಡೆದಿದೆಯೆನ್ನಲಾದ ರೂ. 300 ಕೋಟಿ ಪೋನ್ಝಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭ ಮದ್ರಾಸ್ ಹೈಕೋರ್ಟ್‍ನ ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಮತ್ತು ಬಿ ಪುಗೆಲೆಂಧಿ ಅವರ ಪೀಠ ಮೇಲಿನಂತೆ ಹೇಳಿದೆ.

"ಸಿಬಿಐಯನ್ನು ಚುನಾವಣಾ ಆಯೋಗ ಮತ್ತು ಸಿಎಜಿಯಂತೆ ಹೆಚ್ಚು ಸ್ವತಂತ್ರಗೊಳಿಸಬೇಕು. ಸಿಬಿಐ ನಿರ್ದೇಶಕರಿಗೆ ಭಾರತ ಸರಕಾರದ ಕಾರ್ಯದರ್ಶಿಯಷ್ಟೇ ಅಧಿಕಾರ ನೀಡಬೇಕು ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮುಖಾಂತರ ಹೋಗದೆ ನೇರವಾಗಿ ಪ್ರಧಾನಿ ಅಥವಾ ಸಂಬಂಧಿತ ಸಚಿವರಿಗೆ ವರದಿ ಮಾಡುವಂತಿರಬೇಕು,'' ಎಂದು ನ್ಯಾಯಾಲಯ ಹೇಳಿದೆ.

ಪೋನ್ಝಿ ಹಗರಣದ  ಪ್ರಕರಣದ ತನಿಖೆಯನ್ನು  ವರ್ಗಾಯಿಸುವುದಕ್ಕೆ ಕೇಂದ್ರದ ವಿರೋಧಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಸಿಬಿಐ ಸಂಸ್ಥೆಯ ಸಂಪೂರ್ಣ ಪುನರ್‍ಸಂಘಟನೆಯನ್ನು ಒಂದು ತಿಂಗಳೊಳಗೆ ಮಾಡುವ ಕುರಿತು ಸರಕಾರ ಒಂದು ನಿರ್ಧಾರ ಕೈಗೊಳ್ಳಬೇಕು,'' ಎಂದು ಹೇಳಿದೆ.

 ಒಂದು ಕೋವಿಡ್ ಪ್ರಕರಣ ವರದಿಯಾಗುತ್ತಲೇ ಇಡೀ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ

ಒಂದು ಕೋವಿಡ್ ಪ್ರಕರಣ ವರದಿಯಾಗುತ್ತಲೇ ಇಡೀ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ


 ಒಂದು ಕೋವಿಡ್ ಪ್ರಕರಣ ವರದಿಯಾಗುತ್ತಲೇ ಇಡೀ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ ನ್ಯೂಜಿಲೆಂಡ್ ಪ್ರಧಾನಿ

ವೆಲ್ಲಿಂಗ್ಟನ್, ಆ.17: ನ್ಯೂಜಿಲೆಂಡ್ ನ ಅತ್ಯಂತ ದೊಡ್ಡ ನಗರವಾದ ಆಕ್ಲೆಂಡ್ನಲ್ಲಿ ಕಳೆದ ಆರು ತಿಂಗಳ ನಂತರ ಕೋವಿಡ್-19 ಸೋಂಕಿನ ಒಂದು ಪ್ರಕರಣ ವರದಿಯಾಗುತ್ತಲೇ ಅಲ್ಲಿನ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಅವರು ದೇಶಾದ್ಯಂತ ಕಠಿಣ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಿದ್ದಾರೆ.

ಬುಧವಾರದಿಂದ ಆರಂಭಗೊಂಡು ಮೂರು ದಿನಗಳ ಕಾಲ ಇಡೀ ನ್ಯೂಜಿಲೆಂಡ್ನಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಾಗಲಿದ್ದರೆ, ಸೋಂಕಿತ ವ್ಯಕ್ತಿ ಇದ್ದ ಆಕ್ಲೆಂಡ್ ಮತ್ತು ಕೊರೊಮಂಡೆಲ್ನಲ್ಲಿ ಏಳು ದಿನಗಳ ಲಾಕ್ ಡೌನ್ ಇರಲಿದೆ.

  ಈ ನಾಲ್ಕನೇ ಹಂತದ ಕಠಿಣ ಲಾಕ್ ಡೌನ್ ನಿಯಮಗಳನ್ವಯ ಶಾಲೆಗಳು, ಕಚೇರಿಗಳು ಹಾಗೂ ಎಲ್ಲಾ ಉದ್ದಿಮೆಗಳು ಬಂದ್ ಆಗಲಿವೆ ಹಾಗೂ ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿಯಿರಲಿದೆ. ಹೊಸ ಕೋವಿಡ್ ಪ್ರಕರಣ ಡೆಲ್ಟಾ ರೂಪಾಂತರಿ ಸೋಂಕು ಇರಬಹುದೆಂಬ ಶಂಕೆಯಿದೆ ಆದರೆ ಅದು ದೃಢಪಟ್ಟಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ನ್ಯೂಜಿಲೆಂಡ್ನಲ್ಲಿ ಕೊನೆಯ ಬಾರಿ ಫೆಬ್ರವರಿಯಲ್ಲಿ ಕೋವಿಡ್ ಪ್ರಕರಣ ವರದಿಯಾಗಿತ್ತು.


 ದಕ್ಷಿಣ ಫ್ರಾನ್ಸ್ ನಲ್ಲಿ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

ದಕ್ಷಿಣ ಫ್ರಾನ್ಸ್ ನಲ್ಲಿ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

 

ದಕ್ಷಿಣ ಫ್ರಾನ್ಸ್ ನಲ್ಲಿ ಕಾಡ್ಗಿಚ್ಚು: ಸಾವಿರಾರು ಜನರ ಸ್ಥಳಾಂತರ

ಮಾರ್ಸೇ (ಫ್ರಾನ್ಸ್): ದಕ್ಷಿಣ ಫ್ರಾನ್ಸ್ ನ ಸೇಂಟ್ ಟ್ರೋಪೆಝ್ ರಿಸಾರ್ಟ್ ಸಮೀಪ ಕಾಡ್ಗಿಚ್ಚು ವ್ಯಾಪಿಸಿದ್ದು ಪ್ರವಾಸಿಗರು ಸೇರಿದಂತೆ ಸಾವಿರಾರು ಜನರನ್ನು ತೆರವುಗೊಳಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಮಂಗಳವಾರ ತಿಳಿಸಿದೆ.

ಸುಮಾರು 750 ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಶ್ರಮಿಸುತ್ತಿದ್ದಾರೆ. ಹೆಲಿಕಾಪ್ಟರ್ಗಳು ಆಕಾಶದಿಂದ ನೀರು ಎರಚಿ ಬೆಂಕಿಯನ್ನು ನಂದಿಸಲು ಯತ್ನಿಸುತ್ತಿವೆ. ಸ್ಥಳದಲ್ಲಿ ಅಧಿಕ ಉಷ್ಣತೆ ನೆಲೆಸಿದೆ ಹಾಗೂ ಬಲವಾದ ಗಾಳಿ ಬೀಸುತ್ತಿದೆ. ಹಾಗಾಗಿ ಬೆಂಕಿಯನ್ನು ನಂದಿಸಲು ಕಷ್ಟವಾಗುತ್ತಿದೆ.

‘‘ಸಾವಿರಾರು ಜನರನ್ನು ಮುಂಜಾಗರೂಕತಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಸಾವು-ನೋವು ಸಂಭವಿಸಿಲ್ಲ. ಆದರೂ ಪರಿಸ್ಥಿತಿ ಈಗಲೂ ಗಂಭೀರವಾಗಿದೆ’’ ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರೆಯೋರ್ವರು ಹೇಳಿದರು.