SSF ಈಶ್ವರಮಂಗಲ ಸೆಕ್ಟರ್ ವತಿಯಿಂದ Arouse-21
ಪುತ್ತೂರು: ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ವತಿಯಿಂದ ಶಾಖಾ ಕಾರ್ಯಕರ್ತರಿಗಾಗಿ Arouse-21 ಕ್ಯಾಂಪ್ ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಸಭಾಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಜಿಲ್ಲಾ ನಾಯಕರೂ, ತ್ವೈಬಾ ಕಾರ್ಯದರ್ಶಿಯೂ ಆದ ಅಬ್ದುಲ್ ಅಝೀಝ್ ಮಿಸ್ಬಾಹಿ
ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ತರಬೇತುದಾರರಾಗಿ ಆಗಮಿಸಿದ ಜಿ.ಎಂ. ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದರು ಸಂಘಟನೆಯ ಮಹತ್ವ ಹಾಗೂ ಕಾರ್ಯಕರ್ತರು ಜೀವನದಲ್ಲಿ ರೂಡಿ ಮಾಡಬೇಕಾದ ವಿಷಯ ಗಳನ್ನು ಸವಿಸ್ತಾರವಾಗಿ ವಿವರಿಸಿದರು.
ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಫೈಝಲ್ ಝುಹ್ರಿ ಕಲ್ಲುಗುಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕೆ.ಸಿ.ಎಫ್ ನಾಯಕರಾದ ಮುಹಮ್ಮದ್ ಕುಂಞಿ ಮೇನಾಲ, ಆದಂ.ಕೆ.ಪಿ, ಅಬ್ದುಲ್ಲತೀಫ್ ಕನ್ನಡ್ಕ, ರಹೀಂ.ಬಿ.ಸಿ, ಎಸ್ ವೈ ಎಸ್ ನಾಯಕರಾದ ಅಬ್ದುಲ್ ರಝ್ಝಾಕ್ ಖಾಸಿಮಿ, ತ್ವಾಹ ಸಅದಿ, ಉಮರ್ ಸಅದಿ, ರಫೀಕ್ ಕಾವುಂಜ, ಅಬ್ದುಲ್ಲತೀಫ್ ಮುಸ್ಲಿಯಾರ್ ಮೀನಾವು, ರವೂಫ್ ಕಾವು, ಎಸ್ಸೆಸ್ಸೆಫ್ ನಾಯಕರಾದ ಶಫೀಕ್ ಸಾದಿ ಬಿ.ಇ , ಅಬೂಬಕರ್ ಲತೀಫಿ, ನೌಫಾನ್ ಕಾವು,ಅಬ್ದುಲ್ಲತೀಫ್ ಮೇನಾಲ, ಇಸ್ಮಾಯಿಲ್ ಮೇನಾಲ, ರಮೀಝ್ ಕೊಯಿಲ ಹಾಗೂ 75ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ರಂಝಾನ್ ತಿಂಗಳಲ್ಲಿ
ಕ್ಯಾಂಪಸ್ ವಿಧ್ಯಾರ್ಥಿ ಗಳಿಗಾಗಿ ನಡೆಸಿದ ತರ್ತೀಲ್ ಸ್ಪರ್ಧೆ ಯಲ್ಲಿ ರಾಜ್ಯ ಮಟ್ಟದ ಸೀನಿಯರ್ ವಿಭಾಗದ ಕಿರಾ ಅತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಿಸ್ಹಬ್ ಪಾಳ್ಯತ್ತಡ್ಕ , ಜೂನಿಯರ್ ವಿಭಾಗದ ಹಿಫ್ಳ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಶಫೀಕ್ ಎಂ.ಎ ಮೇನಾಲ ಹಾಗೂ ಜಿಲ್ಲೆ, ಡಿವಿಷನ್, ಸೆಕ್ಟರ್ ಮಟ್ಚದಲ್ಲಿ ವಿಜೇತರಾದವರನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಕಾರ್ಯಕರ್ತರ ಮನ ಮುಟ್ಟುವಂತೆ ತರಗತಿ ನಡೆಸಿದ ಜಿ.ಎಂ.ಉಸ್ತಾದರನ್ನು ಸೆಕ್ಟರ್ ವತಿಯಿಂದ ಕೆ.ಸಿ.ಎಫ್, ಎಸ್ ವೈ ಎಸ್ ನಾಯಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸೆಕ್ಟರ್ ಉಪಾಧ್ಯಕ್ಷರಾದ ಹುಸೈನ್ ಜೌಹರಿ ಸ್ವಾಗತಿಸಿ ಪ್ರ.ಕಾರ್ಯದರ್ಶಿ ಸಲೀಂ ಝುಹ್ರಿ ವಂದಿಸಿದರು.
0 التعليقات: