Saturday, 17 July 2021

ಕಾಸರಗೋಡು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಮಂಜೂರು ಮಾಡಬೇಕು - ಶಾಸಕ ಎಕೆಎಂ ಅಶ್ರಫ್


 ಕಾಸರಗೋಡು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಮಂಜೂರು ಮಾಡಬೇಕು - ಶಾಸಕ ಎಕೆಎಂ ಅಶ್ರಫ್ 

ಕಾಸರಗೋಡು : ಅಭಿವೃದ್ಧಿಯ ದೃಷ್ಟಿಯಲ್ಲಿ ಬಹಳ ಹಿಂದುಳಿದಿರುವ ಕಾಸಗೋಡಿನ ಶೈಕ್ಷಣಿಕ ಮತ್ತು ಆರೋಗ್ಯದ ಹಿಂದುಳಿದಿರುವಿಕೆಯನ್ನು ಪರಿಹರಿಸಲು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಒದಗಿಸಬೇಕೆಂದು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಆಗ್ರಹಿಸಿದರು. ಕೇರಳ ರಾಜ್ಯ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವ  ಅಹ್ಮದ್ ದೇವರ್ಕೋವಿಲ್ ಅವರಿಗೆ ಮುಹಿಮ್ಮಾತ್ ನೀಡಿದ ಸ್ವೀಕರಣ ಕಾರ್ಯಕ್ರಮದಲ್ಲಿ ವಿಶಿಷ್ಟ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. 

ಜಿಲ್ಲೆಯ ಉಸ್ತುವಾರಿ ಆಗಿರುವ ಸಚಿವ ಎಂಬ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಸಹಾಯ ಅಗತ್ಯವಿದೆ ಎಂದು ಅವರು ಹೇಳಿದರು. 

ಕೋವಿಡ್ ವಿರುದ್ಧದ ಹೋರಾಟದಲ್ಲಿ, ವಿದ್ಯಾಭ್ಯಾಸ ಸೇವೆಗಳಲ್ಲಿ ಮತ್ತು ಜೀವಕಾರುಣ್ಯ ಕ್ಷೇತ್ರದಲ್ಲಿಯೂ ಉತ್ತಮ ಸೇವೆಗಳನ್ನು ಒದಗಿಸುತ್ತಿರುವ ಮುಹಿಮ್ಮಾತಿಗೆ ಎಲ್ಲಾ ವಿಧದ ಬೆಂಬಲ ವ್ಯಕ್ತಪಡಿಸುತ್ತೇನೆ ಎಂದು ಅವರು ಹೇಳಿದರು.


SHARE THIS

Author:

0 التعليقات: