ದೇಶದ್ರೋಹ ಕಾನೂನು ವಸಾಹತುಶಾಹಿ, ಇದರ ಸಿಂಧುತ್ವ ಪರಿಶೀಲಿಸಲಾಗುವುದು: ಸುಪ್ರೀಂಕೋರ್ಟ್
ಹೊಸದಿಲ್ಲಿ: ಬ್ರಿಟಿಷ್ ಯುಗದ ದೇಶದ್ರೋಹ ಕಾನೂನನ್ನು "ವಸಾಹತುಶಾಹಿ" ಎಂದು ಗುರುವಾರ ಬಣ್ಣಿಸಿರುವ ಸುಪ್ರೀಂ ಕೋರ್ಟ್ "ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಈ ಕಾನೂನಿನ ಅಗತ್ಯವಿದೆಯೇ" ಎಂದು ಪ್ರಶ್ನಿಸಿದೆ.
ದೇಶದ್ರೋಹ ಕಾನೂನಿನ ಸಿಂಧುತ್ವವನ್ನು ಪರಿಶೀಲಿಸುವುದಾಗಿ ಹೇಳಿರುವ ನ್ಯಾಯಾಲಯ ಈ ಕುರಿತು ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿತು.
"ದೇಶದ್ರೋಹ ಕಾನೂನು ವಸಾಹತುಶಾಹಿ ಕಾನೂನು. ಸ್ವಾತಂತ್ರ್ಯ ಪಡೆದ 75 ವರ್ಷಗಳ ನಂತರವೂ ನಮ್ಮ ದೇಶದಲ್ಲಿ ನಮಗೆ ಈ ಕಾನೂನು ಬೇಕೇ?" ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪ್ರಶ್ನಿಸಿದರು.
ವಿವಾದವೆಂದರೆ ಅದು ವಸಾಹತುಶಾಹಿ ಕಾನೂನು, ಅದೇ ಕಾನೂನನ್ನು ಬ್ರಿಟಿಷರು ಗಾಂಧೀಜಿಯವರನ್ನು ಮೌನಗೊಳಿಸಲು ಬಳಸಿದರು ಎಂದು ನ್ಯಾಯಾಲಯ ಹೇಳಿದೆ.
ಹಲವಾರು ಅರ್ಜಿಗಳು ದೇಶದ್ರೋಹ ಕಾನೂನನ್ನು ಪ್ರಶ್ನಿಸಿವೆ ಹಾಗೂ ಎಲ್ಲವನ್ನು ಒಟ್ಟಿಗೆ ಆಲಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
0 التعليقات: