Wednesday, 14 July 2021

ನೀರು ಕುಡಿಯುವಾಗ ಕೃತಕ ಹಲ್ಲು ನುಂಗಿ ಮಹಿಳೆ ಮೃತ್ಯು


 ನೀರು ಕುಡಿಯುವಾಗ ಕೃತಕ ಹಲ್ಲು ನುಂಗಿ ಮಹಿಳೆ ಮೃತ್ಯು

ಚೆನ್ನೈ: ಮಹಿಳೆಯೊಬ್ಬರು ನೀರು ಕುಡಿಯುವಾಗ ಪ್ರಮಾದವಶಾತ್ ಕೃತಕ ಹಲ್ಲನ್ನು ನುಂಗಿ ಮೃತಪಟ್ಟಿರುವ ಘಟನೆ  ಇತ್ತೀಚೆಗೆ ನಡೆದಿದೆ.

ವರದಿಯ ಪ್ರಕಾರ, ಜುಲೈ 4 ರಂದು ನೀರು ಕುಡಿಯುತ್ತಿದ್ದಾಗ ವಲಸರಾವಕ್ಕಂನ 43 ವರ್ಷದ ರಾಜಲಕ್ಷ್ಮಿ ತನ್ನ ಮೂರು ಕೃತಕ ಹಲ್ಲುಗಳಲ್ಲಿ ಒಂದನ್ನು ನುಂಗಿದ್ದಾರೆ. ತಲೆತಿರುಗುವಿಕೆ ಹಾಗೂ  ವಾಕರಿಕೆ ಬಗ್ಗೆ ದೂರು ನೀಡಿದ ನಂತರ ರಾಜಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು Times of India ವರದಿ ತಿಳಿಸಿದೆ. .

ವೈದ್ಯರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ ಕಾರಣ ಮಹಿಳೆಯನ್ನು  ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ವರದಿ ಯಾಗಿದೆ.

ಆಸ್ಪತ್ರೆಯಿಂದ  ಮನೆಗೆ ಬಂದ ಮರುದಿನ ಮಹಿಳೆ ಪ್ರಜ್ಞೆ ತಪ್ಪಿದ್ದು, ಮತ್ತೆ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಪೊಲೀಸರು ಶವವನ್ನು ಶವಪರೀಕ್ಷೆಗಾಗಿ ಕಳುಹಿಸಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


SHARE THIS

Author:

0 التعليقات: