Friday, 9 July 2021

ಹೆಚ್ಚುತ್ತಿರುವ ಹಣದುಬ್ಬರ, ‘ಅಚ್ಛೇ ದಿನ್’ಗಳು ದೇಶಕ್ಕೆ ಹೊರೆಯಾಗಿವೆ: ರಾಹುಲ್ ಗಾಂಧಿ ವ್ಯಂಗ್ಯ


ಹೆಚ್ಚುತ್ತಿರುವ ಹಣದುಬ್ಬರ, 
‘ಅಚ್ಛೇ ದಿನ್’ಗಳು ದೇಶಕ್ಕೆ ಹೊರೆಯಾಗಿವೆ: 
ರಾಹುಲ್ ಗಾಂಧಿ ವ್ಯಂಗ್ಯ

ಹೊಸದಿಲ್ಲಿ,ಜು.9: ಹೆಚ್ಚುತ್ತಿರುವ ಸಿಎನ್ಜಿ ಮತ್ತು ಪಿಎನ್ಜಿ ಬೆಲೆಗಳ ಕುರಿತಂತೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಹಣದುಬ್ಬರವು ಹೆಚ್ಚುತ್ತಿದೆ ಮತ್ತು ‘ಅಚ್ಛೇ ದಿನ್’ಗಳು ದೇಶಕ್ಕೆ ಹೊರೆಯಾಗಿವೆ. ಪ್ರಧಾನಿ ತನ್ನ ಸ್ನೇಹಿತರಿಗೆ ಮಾತ್ರ ಉತ್ತರದಾಯಿಯಾಗಿದ್ದಾರೆ ಎಂದು ಟ್ವೀಟಿಸಿದ್ದಾರೆ.

ದಿಲ್ಲಿಯಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಚಿಲ್ಲರೆ ಬೆಲೆಗಳು ದಾಖಲೆ ಮಟ್ಟವನ್ನು ತಲುಪಿವೆ. ಸಿಎನ್ಜಿ ಬೆಲೆ ಪ್ರತಿ ಕೆ.ಜಿ.ಗೆ 44.30 ರೂ.ಗೇರಿದ್ದರೆ ನೊಯ್ಡ,ಗ್ರೇಟರ್ ನೊಯ್ಡ ಮತ್ತು ಘಾಝಿಯಾಬಾದ್ಗಳಲ್ಲಿ ಪ್ರತಿ ಕೆ.ಜಿ.ಗೆ 49.98 ರೂ.ಗೇರಿದೆ. ಪರಿಷ್ಕೃತ ಬೆಲೆಗಳು ಜು.8ರಿಂದಲೇ ಜಾರಿಗೊಂಡಿವೆ.

ಗೃಹ ಬಳಕೆಯ ಪಿಎನ್ಜಿ ಬೆಲೆ ದಿಲ್ಲಿಯಲ್ಲಿ ಪ್ರತಿ ಸ್ಟಾಂಡರ್ಡ್ ಕ್ಯುಬಿಕ್ ಮೀಟರ್(ಎಸ್ಸಿಎಂ)ಗೆ 29.66 ರೂ.ಆಗಿದ್ದರೆ,ನೊಯ್ಡಾ,ಗ್ರೇಟರ್ ನೊಯ್ಡಾ ಮತ್ತು ಘಾಝಿಯಾಬಾದ್ಗಳಲ್ಲಿ ಪ್ರತಿ ಎಸ್ಸಿಎಂಗೆ 29.61 ರೂ.ಗೇರಿದೆ.


SHARE THIS

Author:

0 التعليقات: