Sunday, 11 July 2021

ಮೂಡಿಗೆರೆ : ಕುಡಿದ ಕಾರು ಚಾಲಕನಿಂದ ಸರಣಿ ಅಪಘಾತ


ಮೂಡಿಗೆರೆ : ಕುಡಿದ ಕಾರು ಚಾಲಕನಿಂದ ಸರಣಿ ಅಪಘಾತ

ಚಿಕ್ಕಮಗಳೂರು : ಕುಡಿದ ಮತ್ತಿನಲ್ಲಿ ಕಾರು ಚಾಲಕನೋರ್ವ ಯದ್ವಾ ತದ್ವಾ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ಬಳಿ ರವಿವಾರ ಸಂಭವಿಸಿದೆ.

ವೋಕ್ಸ್ ವೆಗನ್ ಪೋಲೋ ಕಾರು ಚಾಲಕನೋರ್ವ ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿದ ಪರಿಣಾಮ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ಚಕ್ರ ಕಳಚಿ ಬಿದ್ದಿದೆ ಈ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಆದ ಕಾರಣ ಚಾಲಕನ ಜೀವ ಉಳಿದಿದೆ.ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


SHARE THIS

Author:

0 التعليقات: