ಕೆಆರ್ಎಸ್ ಡ್ಯಾಂ ನಿಜವಾಗಿಯೂ ಬಿರುಕು ಬಿಟ್ಟಿದೆ: ಸಚಿವ ಲಿಂಬಾವಳಿ
ಉಡುಪಿ: ಕೆಆರ್ಎಸ್ ಡ್ಯಾಂಗೆ ನಿಜವಾಗಿಯೂ ಬಿರುಕು ಬಂದಿತ್ತು. ಬಿರುಕು ಬಿಟ್ಟಿರುವ ಈ ಡ್ಯಾಂನ ರಕ್ಷಣೆ ಮಾಡುವುದು ಸರಕಾರದ ಜವಾಬ್ದಾರಿ ಆಗಿದೆ. ಈ ಕಾಮಗಾರಿಯನ್ನು ನೀರಾವರಿ ಇಲಾಖೆಯಿಂದ ಕೈಗೆತ್ತಿ ಕೊಳ್ಳಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ವಿಚಾರ ತಿಳಿಸಿದರು.
ಕೆಆರ್ಎಸ್ ಡ್ಯಾಂ ವಿಚಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಸಮಲತಾ ಇಬ್ಬರು ಜಗಳ ಆಡುತ್ತಿದ್ದಾರೆ. ಅದರ ಬಗ್ಗೆ ನಮ್ಮದು ಏನು ಪ್ರತಿಕ್ರಿಯೆ ಇಲ್ಲ. ಅವರಿಬ್ಬರು ಪರಸ್ಪರ ಆರೋಪ ಮಾಡುವ ಮೂಲಕ ರಾಜಕೀಯ ವ್ಯಕ್ತಿಗಳ ಮಟ್ಟವನ್ನು ಕೆಳಗಡೆ ಇಳಿಸುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವಂತಹದಲ್ಲ. ಅದರ ಬಗ್ಗೆ ಇಬ್ಬರು ಯೋಚನೆ ಮಾಡಬೇಕು ಎಂದು ಲಿಂಬಾವಳಿ ಅಭಿಪ್ರಾಯಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸುಮಲತಾ ಅವರನ್ನು ಬಿಜೆಪಿಯವರು ಯಾರು ಕೂಡ ಬೆಂಬಲಿಸದೆ ಏಕಾಂಗಿ ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತ್ರಿಯಿಸಿದ ಸಚಿವರು, ಅವರು ಏಕಾಂಗಿಯಾಗಿಯೇ ಗೆದ್ದಿರುವುದು ಎಂದು ಹೇಳಿದರು.
ಕಾರ್ಕಳ ರಾಧಾಕೃಷ್ಣ ನಾಯಕ್ ಭಾರತೀಯ ಸೇನೆಯ ಬಗ್ಗೆ ಅಪಮಾನ ಮಾಡಿರುವುದನ್ನು ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಖಂಡಿಸುವ ಬದಲು ನಮ್ಮ ಕಾರ್ಯಕರ್ತನ ಮೇಲೆ ಪೊಲೀಸರು ಕ್ರಮ ಜರಗಿಸಿರುವುದು ತಪ್ಪು ಎಂದು ಹೇಳಿರುವುದು ಖಂಡನೀಯ. ಸಿದ್ದರಾಮಯ್ಯ ತಕ್ಷಣ ತಮ್ಮ ಹೇಳಿಕೆ ಹಿಂಪಡೆಯುವುದು ಉತ್ತಮ ಎಂದು ಸಚಿವರು ತಿಳಿಸಿದರು.
0 التعليقات: