Wednesday, 7 July 2021

ಕಾಸರಗೋಡು ಜಿಲ್ಲಾಧಿಕಾರಿಗೆ ವರ್ಗಾವಣೆ: ನೂತನ ಡಿಸಿಯಾಗಿ ಭಂಡಾರಿ ಸ್ವಾಗತ್ ನೇಮಕ

 

ಕಾಸರಗೋಡು ಜಿಲ್ಲಾಧಿಕಾರಿಗೆ ವರ್ಗಾವಣೆ: ನೂತನ ಡಿಸಿಯಾಗಿ ಭಂಡಾರಿ ಸ್ವಾಗತ್ ನೇಮಕ

ಕಾಸರಗೋಡು: ಕಾಸರಗೋಡು ನೂತನ ಜಿಲ್ಲಾಧಿಕಾರಿಯನ್ನಾಗಿ  ಭಂಡಾರಿ ಸ್ವಾಗತ್  ರಣ್ವೀರ್ ಚಂದ್ ರವರನ್ನು  ನೇಮಿಸಲಾಗಿದೆ. ಹಾಲಿ ಜಿಲ್ಲಾಧಿಕಾರಿ  ಡಾ.ಡಿ.ಸಜಿತ್ ಬಾಬು ಅವರನ್ನು ನಾಗರಿಕ ಪೂರೈಕೆ ಇಲಾಖಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ಕೈಗಾರಿಕಾ ಇಲಾಖಾ ನಿರ್ದೇಶಕರಾಗಿದ್ದ ಭಂಡಾರಿ ಸ್ವಾಗತ್ ಕಾಸರಗೋಡಿನ 24ನೇ ಜಿಲ್ಲಾಧಿಕಾರಿಯಾಗಿದ್ದು, ಮಾತ್ರವಲ್ಲ ಪ್ರಥಮ ಬಾರಿಗೆ ಕಾಸರಗೋಡಿಗೆ ಮಹಿಳಾ ಜಿಲ್ಲಾಧಿಕಾರಿಯನ್ನು ನೇಮಿಸಲಾಗಿದೆ.

2010 ಬ್ಯಾಚ್ ನ ಐಎಎಸ್  ಅಧಿಕಾರಿಯಾಗಿರುವ ಭಂಡಾರಿ ಸ್ವಾಗತ್,  ಸಿವಿಲ್  ಸರ್ವಿಸ್ ಪರೀಕ್ಷೆಯಲ್ಲಿ 69ನೇ ರ್ಯಾಂಕ್ ಪಡೆದುಕೊಂಡಿದ್ದರು.

2018ರ ಜುಲೈ 18ರಂದು ಕಾಸರಗೋಡು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಸಜಿತ್ ಬಾಬು, ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು, ದಕ್ಷ ಜಿಲ್ಲಾಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.


SHARE THIS

Author:

0 التعليقات: