Tuesday, 6 July 2021

ಜಗನ್ನಾಥಪುರಿ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ 'ರಥಯಾತ್ರೆ' ನಡೆಸಲು ಅನುಮತಿ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್


 ಜಗನ್ನಾಥಪುರಿ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ 'ರಥಯಾತ್ರೆ' ನಡೆಸಲು ಅನುಮತಿ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಒಡಿಶಾದ ಜಗನ್ನಾಥ ಪುರಿ ಹೊರತುಪಡಿಸಿ ಬೇರೆ ಬೇರೆ ಸ್ಥಳಗಳಲ್ಲಿ 'ರಥಯಾತ್ರೆ' ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಜ್ಯ ಸರಕಾರ ಜಾರಿಗೊಳಿಸಿದ ನಿರ್ದೇಶನಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ನ್ಯಾಯಪೀಠ ಹೇಳಿದೆ.

ಪುರಿಯಲ್ಲಿ ಭಗವಾನ್ ಜಗನ್ನಾಥರ ರಥಯಾತ್ರೆ ವಾರ್ಷಿಕ ಆಚರಣೆಯಾಗಿದ್ದು, ಈ ಬಾರಿ ಜುಲೈ 12 ರಂದು ನಿಗದಿಯಾಗಿದೆ.

ಜಗನ್ನಾಥ ಪುರಿಯಲ್ಲಿ ಮಾತ್ರ ರಾಜ್ಯವು ರಥಯಾತ್ರೆಗೆ ಅವಕಾಶ ನೀಡಿದೆ.


SHARE THIS

Author:

0 التعليقات: