Tuesday, 20 July 2021

ಮಧ್ಯಪ್ರದೇಶ: ಮಕ್ಕಳ ಕಳ್ಳರೆಂಬ ಶಂಕೆಯ ಮೇರೆಗೆ ಇಬ್ಬರು ಸಾಧುಗಳಿಗೆ ಥಳಿಸಿದ ಗ್ರಾಮಸ್ಥರು


ಮಧ್ಯಪ್ರದೇಶ: ಮಕ್ಕಳ ಕಳ್ಳರೆಂಬ ಶಂಕೆಯ ಮೇರೆಗೆ ಇಬ್ಬರು ಸಾಧುಗಳಿಗೆ ಥಳಿಸಿದ ಗ್ರಾಮಸ್ಥರು

ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಜನರ ಗುಂಪೊಂದು  ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಸಾಧುಗಳನ್ನು ಥಳಿಸಿದೆ. ಜನರ ಗುಂಪು  ಸಾಧುಗಳನ್ನು ಥಳಿಸುವ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಎಂದು India Today ವರದಿ ಮಾಡಿದೆ.

ಈ ಘಟನೆಯು  ಧಾರ್‌ ಜಿಲ್ಲೆಯ ಧನ್ನಾಡ್ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಇಬ್ಬರು ಸಾಧುಗಳು ಧನ್ನಾದ್‌ನಿಂದ ಇಂದೋರ್‌ಗೆ ಪ್ರಯಾಣಿಸುತ್ತಿದ್ದಾಗ ದಾರಿ ತಪ್ಪಿ ರಸ್ತೆಬದಿಯಲ್ಲಿ ಆಡುತ್ತಿದ್ದ ಕೆಲವು ಮಕ್ಕಳಿಂದ ಯಾವ ದಿಕ್ಕಿಗೆ  ಹೋಗಬೇಕೆಂದು ಕೇಳಿದ್ದರು. ಮಕ್ಕಳು ಸಾಧುಗಳನ್ನು ನೋಡಿ  ಭಯಭೀತರಾಗಿ ಓಡಿಹೋಗಿದ್ದರು.

ಸಾಧುಗಳನ್ನು ಮಕ್ಕಳ ಕಳ್ಳರೆಂದು ಎಂದು ಶಂಕಿಸಿದ ಕೆಲವು ಸ್ಥಳೀಯರು ಅವರನ್ನು ಹೊಡೆಯಲು ಆರಂಭಿಸಿದರು.

ಧಾರ್ ಜಿಲ್ಲೆಯ ಹೆಚ್ಚುವರಿ ಎಸ್‌.ಪಿ.  ದೇವೇಂದ್ರ ಪಾಟಿದಾರ್ ಅವರ ಪ್ರಕಾರ, ಸ್ಥಳೀಯರು, ಸಾಧುಗಳ ಮೇಲೆ ಮಕ್ಕಳ ಕಳ್ಳರೆಂದು ಆರೋಪಿಸಿ ಸಾಧುಗಳನ್ನು ಪೊಲೀಸ್ ಠಾಣೆಗೆ ಕರೆತಂದರು. ಸಾಧುಗಳನ್ನು ಥಳಿಸುತ್ತಿದ್ದ ಘಟನೆಯ ವೀಡಿಯೊಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ನಾವು ದೂರನ್ನು ಸ್ವೀಕರಿಸಿದ್ದೇವೆ ಹಾಗೂ  ಸ್ಥಳೀಯ ನಿವಾಸಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323,294 ಹಾಗೂ  34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ವೀಡಿಯೊಗಳನ್ನು ಸಹ ನೋಡಿದ್ದೇವೆ. ನಾವು ಅವರನ್ನು ಗುರುತಿಸುವ ಪ್ರಕ್ರಿಯೆಯಲ್ಲಿದ್ದೇವೆ ”ಎಂದು ಹೆಚ್ಚುವರಿ ಎಸ್‌ಪಿ ಪಾಟಿದಾರ್ ಹೇಳಿದರು.

ಸಾಧುಗಳಲ್ಲಿ ಒಬ್ಬರು ಮಧ್ಯಪ್ರದೇಶದವರಾಗಿದ್ದರೆ, ಎರಡನೇ ಸಾಧು ರಾಜಸ್ಥಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 2020 ರಲ್ಲಿ, ಧಾರ್ ಜಿಲ್ಲೆಯಲ್ಲಿ  ನೂರಾರು ಗ್ರಾಮಸ್ಥರು ಮಕ್ಕಳ ಅಪಹರಣದ ವದಂತಿಗಳ ಮೇಲೆ ಏಳು ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.  ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದ.

 


SHARE THIS

Author:

0 التعليقات: