Wednesday, 7 July 2021

ತೈಲ ದರ ಮತ್ತೆ ಏರಿಕೆ


ತೈಲ ದರ ಮತ್ತೆ ಏರಿಕೆ  

ಬೆಂಗಳೂರು : ದೇಶದಲ್ಲಿ ಕೊರೋನಾ ಬಿಕ್ಕಟಿನ ನಡುವೆ ತೈಲ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 104ರ ಗಡಿದಾಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಹ ಪೆಟ್ರೋಲ್ ಶತಕ ಬಾರಿಸಿದ್ದು ಪೆಟ್ರೋಲ್ ಬೆಲೆ 100.21ರೂ. ಆಗಿದೆ.

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 104 ರೂ. ದಾಟಿದೆ ರಾಜಸ್ಥಾನ, ಹೈದರಾಬಾದ್​ನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 102 ರೂ. ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 106 ರೂ.ಗೆ ಏರಿದ್ದು, ಜೈಪುರದಲ್ಲಿ 106 ರೂ., ಬೆಂಗಳೂರಿನಲ್ಲೂ 103 ರೂ. ಆಗಿದೆ.

ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಒರಿಸ್ಸಾ, ಕೇರಳ, ಆಂಧ್ರಪ್ರದೇಶ, ಲಡಾಖ್, ಬಿಹಾರ, ಜಮ್ಮು ಕಾಶ್ಮೀರದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103.43 ರೂ. ದಾಟಿದೆ. ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ಗೆ 103 ರೂ. ಆಗಿದೆ. ಇಂದು ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ.

ಇಂದು ನ ಕೊಲ್ಕತ್ತಾದಲ್ಲಿ 100.23 ರೂ, ಚೆನ್ನೈನಲ್ಲಿ 100.13 ರೂ., ಹೈದರಾಬಾದ್ನಲ್ಲಿ 103.05 ರೂ., ಜೈಪುರದಲ್ಲಿ 106.18 ರೂ.,ತಿರುವನಂತಪುರದಲ್ಲಿ 100.87 ರೂ. ಆಗಿದೆ.

ಭಾರತದ ಕೆಲವು ನಗರಗಳಲ್ಲಿ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ನವದೆಹಲಿಯಲ್ಲಿ ಇಂದು 1 ಲೀಟರ್ ಡೀಸೆಲ್ ಬೆಲೆ 89.53 ರೂ. ಇದೆ. ಚೆನ್ನೈನಲ್ಲಿ 93.72 ರೂ, ಮುಂಬೈನಲ್ಲಿ 96.72 ರೂ, ಬೆಂಗಳೂರಿನಲ್ಲಿ 94.54 ರೂ, ಹೈದರಾಬಾದ್ನಲ್ಲಿ 97.20 ರೂ. ಇದೆ.



SHARE THIS

Author:

0 التعليقات: