Friday, 2 July 2021

ಬೆಂಗಳೂರು: ನಗರದ ಹಲವೆಡೆ ಭಾರೀ ಸದ್ದಿಗೆ ಬಿಚ್ಚಿಬಿದ್ದ ಜನತೆ!


 ಬೆಂಗಳೂರು: ನಗರದ ಹಲವೆಡೆ ಭಾರೀ ಸದ್ದಿಗೆ ಬಿಚ್ಚಿಬಿದ್ದ ಜನತೆ!

ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಭಾರೀ ಸದ್ದು ಕೇಳಿ ಬಂದಿದ್ದು, ಕೆಲಕಾಲ ಜನತೆ ಬೆಚ್ಚಿಬಿದ್ದಿರುವುದು ವರದಿಯಾಗಿದೆ.

ಮಧ್ಯಾಹ್ನ 12:30ರ ಸುಮಾರಿಗೆ ದಕ್ಷಿಣ ಬೆಂಗಳೂರಿನಲ್ಲಿ ಭಾರೀ ಸದ್ದು ಕೇಳಿಬಂದಿದೆ ಎನ್ನಲಾಗಿದೆ. ಶಬ್ದದ ತೀವ್ರತೆಗೆ ಈ ಭಾಗದ ಜನರನ್ನು ಬೆಚ್ಚಿ ಬಿದ್ದಿದ್ದಾರೆ. ಆದರೆ ಶಬ್ದದ ಮೂಲ ಪತ್ತೆಯಾಗಿಲ್ಲ. ಎಲ್ಲರೂ ಕುತೂಹಲದಿಂದ ಏನಿರಬಹುದು ಎನ್ನುವ ಆತಂಕ ಮತ್ತು ಅದರ ಬಗ್ಗೆ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ನಿರತರಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಉಪ ಆಯುಕ್ತರು, 'ಇದೊಂದು ಸೂಪರ್ ಸಾನಿಕ್ ಇರಬಹುದು‌. ಎಚ್‌ಎಎಲ್ ವಿಮಾನ ನಿಲ್ದಾಣದ ಆಸುಪಾಸಿನಲ್ಲಿ ತೇಜಸ್ ವಿಮಾನ ಹಾರಾಟ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ, ಅದರ ಸದ್ದು ಕೂಡಾ ಆಗಿರಬಹುದು ಎಂದು ಊಹೆ ಮಾಡಲಾಗಿದೆ. ಆದರೂ, ಈ ಕುರಿತು ಇನ್ನಷ್ಟು ಮಾಹಿತಿ ತಿಳಿಯಬೇಕಾಗಿದೆ' ಎಂದು ಹೇಳಿದ್ದಾರೆ.

ಕಳದ ವಾರ  ಸೂಪರ್ ಸಾನಿಕ್ ಬೂಮ್ ಸದ್ದು ಬೆಂಗಳೂರು ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇದೀಗ ಅದೇ ಮಾದರಿಯ ಭಾರಿ ಪ್ರಮಾಣದ ಸದ್ದು ಕೇಳಿಸಿರುವುದು ಜನರನ್ನು ಆತಂಕಕ್ಕೆ ಗುರಿಮಾಡಿದೆ.


SHARE THIS

Author:

0 التعليقات: