Wednesday, 7 July 2021

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ರಾಜೀನಾಮೆ


 ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ರಾಜೀನಾಮೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಸಂಪುಟ ಪುನರ್ರಚನೆಗೆ ಕೆಲವೇ ಗಂಟೆಗಳ ಮೊದಲು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಇಂದು ರಾಜೀನಾಮೆ ನೀಡಿದ್ದಾರೆ.

ಕೊರೋನ ಎರಡನೇ ಅಲೆ ನಿಭಾಯಿಸುವಲ್ಲಿ ಕೇಂದ್ರ ಸರಕಾರ ತೀವ್ರ ಟೀಕೆಗೆ ಗುರಿಯಾಗಿದ್ದು, ಇದೀಗ ಹರ್ಷವರ್ಧನ್ ತಲೆದಂಡವಾಗಿದೆ.

ಎಪ್ರಿಲ್-ಮೇ ನಲ್ಲಿ ಕಾಣಿಸಿಕೊಂಡ ಕೊರೋನದ 2ನೆ ಅಲೆ ಕಾಣಿಸಿಕೊಂಡಾಗ ಭಾರತದ ಆರೋಗ್ಯ ಮೂಲಸೌಕರ್ಯದ ಕೊರತೆ ಎದುರಾಗಿತ್ತು. ಸಾವಿರಾರು ಜನರು ಆಮ್ಲಜನಕ, ಆಸ್ಪತ್ರೆ ಹಾಸಿಗೆಗಳು ಹಾಗೂ  ಲಸಿಕೆಗಾಗಿ ಪರದಾಟ ನಡೆಸಿದ್ದರು.

ಕೇಂದ್ರ ಸಚಿವ ಸದಾನಂದ ಗೌಡ, ಬಾಬುಲ್ ಸುಪ್ರಿಯೋ ರಲ್ಲದೆ ಇತರ ಹತ್ತು ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಮೇಶ ಪೋಖ್ರಿಯಾಲ್, ಸಂತೋಷ್ ಗಂಗ್ವಾರ್, ದೇಬಶ್ರೀ ಚೌಧುರಿ, ಸಂಜಯ್ ಧೋತ್ರೆ, ರತನ್ ಲಾಲ್ ಕಟಾರಿಯಾ, ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಚೌಬೆ, ಪ್ರತಾಪ್ ಸಾರಂಗಿ ಹಾಗೂ ರಾವ್ ಸಾಹೇಬ್ ಧನ್ವೆ ಪಾಟೀಲ್ ಅವರು ರಾಜೀನಾಮೆ ನೀಡಿದ ಇನ್ನುಳಿದ  ಸಚಿವರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ 83 ವರ್ಷದ ತಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


SHARE THIS

Author:

0 التعليقات: