Wednesday, 7 July 2021

ಪುತ್ತೂರು: ತಲವಾರು ಪ್ರದರ್ಶಿಸಿ ಬೆದರಿಕೆ; ದೂರು ದಾಖಲು


 ಪುತ್ತೂರು: ತಲವಾರು ಪ್ರದರ್ಶಿಸಿ ಬೆದರಿಕೆ; ದೂರು ದಾಖಲು

ಪುತ್ತೂರು: ಯುವಕರಿಬ್ಬರಿಗೆ ತಲವಾರು ಪ್ರದರ್ಶಿಸಿ ಬೆದರಿಕೆಯೊಡ್ಡಿರುವ ಪ್ರಸಂಗವೊಂದು ಪುತ್ತೂರು ನಗರದ ಹೊರವಲಯದ ಬನ್ನೂರು ಜೈನರ ಗುರಿ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸ್ಥಳೀಯರಾದ ಫಯಾಝ್ ಮತ್ತು ಇನ್ನೋರ್ವ ರಾತ್ರಿ ವೇಳೆ ಅಂಗಡಿ ಬಳಿ ನಿಂತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳಾದ ಅಭಿಜಿತ್ ಮತ್ತು ಶರತ್ ಎಂಬವರು ಕ್ಷುಲ್ಲಕ ಕಾರಣಕ್ಕೆ ತಲವಾರು ಝಳಪಿಸಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ  ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆನ್ನಲಾಗಿದೆ.


SHARE THIS

Author:

0 التعليقات: