ದೇಶದಲ್ಲಿ ದೈನಂದಿನ ಕೋವಿಡ್ ಸಾವುಗಳಲ್ಲಿ ಭಾರೀ ಏರಿಕೆ
ಹೊಸದಿಲ್ಲಿ: ಮಧ್ಯಪ್ರದೇಶ ತನ್ನ ಅಂಕಿ-ಅಂಶವನ್ನು ಪರಿಷ್ಕರಿಸಿದ್ದರಿಂದ ಭಾರತ ಮಂಗಳವಾರ ಬೆಳಿಗ್ಗೆ ಕೋವಿಡ್ ಸಾವುಗಳಲ್ಲಿ ಭಾರಿ ಏರಿಕೆ ದಾಖಲಿಸಿದೆ.
ಮಧ್ಯಪ್ರದೇಶ ರಾಜ್ಯದಿಂದ 1,481 ಸಾವುಗಳು ವರದಿಯಾಗಿದ್ದು, ಕೋವಿಡ್ನಿಂದಾಗಿ ದೇಶದಲ್ಲಿ ಒಂದೇ ದಿನ 2,020 ಸಾವುಗಳು ಸಂಭವಿಸಿವೆ.
ಮೂರನೇ ಕೋವಿಡ್ ಅಲೆಯ ಎಚ್ಚರಿಕೆಗಳ ಮಧ್ಯೆ, ಭಾರತವು ಕಳೆದ 24 ಗಂಟೆಗಳಲ್ಲಿ 32,906 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಇದು ಸುಮಾರು ನಾಲ್ಕು ತಿಂಗಳಲ್ಲಿ ಕಡಿಮೆ ದೈನಂದಿನ ಕೊರೋನ ಪ್ರಕರಣವಾಗಿದೆ.
0 التعليقات: