ಸೆಮಿಫೈನಲ್ನಲ್ಲಿ ಸೋತ ಸಿಂಧು : ಇಂದು ಕಂಚಿನ ಪದಕಕ್ಕಾಗಿ ಹೋರಾಟ
ಟೋಕಿಯೋ : ಟೋಕಿಯೋ ಒಲಿಂಪಿಕ್ಸ್ನ ನಿನ್ನೆ ನಡೆದ ಮಹಿಳೆಯರ ಸಿಂಗಲ್ಸ್ನ ಸೆಮಿಫೈನಲ್ನಲ್ಲಿ ತೈ ಜು ಯಿಂಗ್ ವಿರುದ್ಧ ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸೋಲುಂಡಿದ್ದಾರೆ.
ಸೆಮಿಫೈನಲ್ನಲ್ಲಿ ತೈ ಜು-ಯಿಂಗ್ ವಿರುದ್ಧ 18-21, 12-21 ಸೋಲನುಭವಿಸಿದ್ದಾರೆ. ಎರಡು ನೇರ ಸೆಟ್ ಗಳಲ್ಲಿ ಪಂದ್ಯವನ್ನು ಕೈ ಚೆಲ್ಲಿದ ಸಿಂಧು, ಬಂಗಾರ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಆ ಮೂಲಕ ಚಿನ್ನ ಬೆಳ್ಳಿಯ ಕನಸು ಭಗ್ನವಾಗಿದೆ.
ಸೆಮಿಫೈನಲ್ನಲ್ಲಿ ಸೋಲು ಕಂಡಿರುವ ಕಾರಣ ಇದೀಗ ಪಿವಿ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಆಟಗಾರ್ತಿ ವಿರುದ್ಧ ಹೋರಾಟ ನಡೆಸಲಿದ್ದಾರೆ.
0 التعليقات: