Tuesday, 27 July 2021

ಟೋಕಿಯೊ ಒಲಂಪಿಕ್ಸ್: ಭಾರತದ ಬಾಕ್ಸರ್ ಲೊವ್ಲಿನಾಗೆ ಜಯ

ಟೋಕಿಯೊ ಒಲಂಪಿಕ್ಸ್: ಭಾರತದ ಬಾಕ್ಸರ್ ಲೊವ್ಲಿನಾಗೆ ಜಯ

ಟೋಕಿಯೊ: ಟೋಕಿಯೊ ಒಲಂಪಿಕ್ಸ್ 2020 ರ ಮಹಿಳಾ ವಿಭಾಗದ 69 ಕೆ.ಜಿ ವಿಭಾಗದಲ್ಲಿ ಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಪ್ರೀ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಜಯ ಸಾಧಿಸಿ, ಎಂಟರ ಹಂತ ತಲುಪಿದ್ದಾರೆ.

ಎರಡು ಬಾರಿ ವಿಶ್ವ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತ ಬೋರ್ಗೊಹೈನ್ 3-2 ಅಂತರದಿಂದ ಜರ್ಮನಿಯ ನಾಡಿನ್ ಅವರನ್ನು ಮಣಿಸಿದರು. ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ನಲ್ಲಿ ಲೋವ್ಲಿನಾ ಈಗ ಚೀನಾದ ತೈಪೆಯ ನಿಯಾನ್-ಚಿನ್ ಚೆನ್ ಅವರನ್ನು ಎದುರಿಸಲಿದ್ದಾರೆ.

ಮೊದಲ ಗೇಮ್ ನಲ್ಲಿ ಭಾರತದ ಆಟಗಾರ್ತಿ ನಿರಾಸೆ ಅನುಭವಿಸಿದರೂ, ನಂತರದ ಮೂರು ಸುತ್ತುಗಳಲ್ಲಿ ಲೊವ್ಲಿನಾ ಎದುರಾಳಿಗೆ ಭರ್ಜರಿ ಪಂಚ್ ನೀಡಿ ತೀರ್ಪುಗಾರರ ಮನ ಗೆಲ್ಲುವಲ್ಲಿ ಸಫಲರಾದರು. ಐದನೇ ಗೇಮ್ ನಲ್ಲಿ ಸೋತರೂ ಪಂದ್ಯ ಗೆದ್ದು ಬೀಗಿದರು.SHARE THIS

Author:

0 التعليقات: