Tuesday, 13 July 2021

ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ವಸ್ತುವನ್ನು ಹೊಡೆದುರುಳಿಸಿದ ಸೇನೆ..!


 ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ವಸ್ತುವನ್ನು ಹೊಡೆದುರುಳಿಸಿದ ಸೇನೆ..!

ಜಮ್ಮು: ಕಾಶ್ಮೀರದ ಅರ್ನಿಯಾ ವಲಯದಲ್ಲಿ ಅಂತಾರಾಷ್ಟ್ರೀಯ ಗಡಿ ಬಳಿ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ವಸ್ತುವನ್ನು ಬಿಎಸ್‍ಎಫ್ ಪಡೆಗಳು ಗುಂಡಿನ ದಾಳಿ ನಡೆಸಿ ಹೊಡೆದುರುಳಿಸಿದೆ. ಸುಮಾರು 200 ಮೀಟರ್ ಎತ್ತರದಲ್ಲಿ ಮಧ್ಯರಾತ್ರಿ ಕೆಂಪು ದೀಪ ಹೊಳೆಯುತ್ತಾ ಭಾರತ ಪ್ರದೇಶದೊಳಗೆ ಬರುತ್ತಿದ್ದಂತಹ ವಸ್ತುವನ್ನು ಪತ್ತೆ ಹಚ್ಚಿದ ಬಿಎಸ್‍ಎಫ್ ಪಡೆಗಳು ತಕ್ಷಣ ಎಚ್ಚೆತ್ತು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ಯೋಧರು ಕಾವಲು ಕಾಯುತ್ತಿದ್ದ ಮುಂಚೂಣಿ ವಲಯದಲ್ಲಿ ಏಕಾಏಕಿ ಕೆಂಪು ದೀಪ ಮಿನುಗಿಸುತ್ತಾ ವಸ್ತುವೊಂದು ಬರುತ್ತಿತ್ತು. ಅದು ಏನು ಎಂಬುದು ತಿಳಿಯಲಿಲ್ಲ. ಆದರೂ ಅದನ್ನು ಹೊಡೆದುರುಳಿಸಿದ್ದೇವೆ. ಈವರೆಗೂ ಅದರ ತುಣುಕುಗಳು ಏನು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಜು.2ರಂದು ಪಾಕಿಸ್ತಾನ ಕ್ವಾಡ್ ಕಾಪ್ಟರ್ ಅನ್ನು ಬಳಸಿ ಭಯೋತ್ಪಾದಕರನ್ನು ಭಾರತದೊಳಗೆ ನುಸುಳಿಸಲು ಪ್ರಯತ್ನಿಸಿತ್ತು. ನಂತರ ಭಾರತೀಯ ಸೇನೆ ಗುಂಡು ಹಾರಿಸಿ ಪ್ರತಿರೋಧ ವ್ಯಕ್ತಪಡಿಸಿದ ನಂತರ ಅದು ವಾಪಸ್ ಹೋಗಿತ್ತು ಎಂದು ತಿಳಿಸಿದ್ದಾರೆ. ಇದಲ್ಲದೆ ಜೂ.27ರಂದು ಡ್ರೋನ್ ಬಳಸಿ ಜಮ್ಮುವಿನ ವಾಯುನೆಲೆ ಮೇಲೆ ಬಾಂಬ್ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.


SHARE THIS

Author:

0 التعليقات: