Saturday, 10 July 2021

ವರದಕ್ಷಿಣೆ ಪದ್ಧತಿ ಇಸ್ಲಾಂ ಧರ್ಮಕ್ಕೆ ಅನ್ಯವಾದದ್ದು: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ


 ವರದಕ್ಷಿಣೆ ಪದ್ಧತಿ ಇಸ್ಲಾಂ ಧರ್ಮಕ್ಕೆ ಅನ್ಯವಾದದ್ದು: ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ

ಕೋಝಿಕ್ಕೋಡ್: ವರದಕ್ಷಿಣೆ ಪದ್ಧತಿ ಇಸ್ಲಾಂ ಧರ್ಮಕ್ಕೆ ಅನ್ಯವಾದದ್ದು ಮತ್ತು ವಿವಾಹ ಎಂಬ ಪವಿತ್ರ ಕಾರ್ಯ, ಆರ್ಥಿಕವಾದ ನಿಯಮಗಳನ್ನು ಮುಂದಿಟ್ಟುಕೊಂಡು ಮಾಡಬೇಕಾದದ್ದಲ್ಲ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಮಹಿಳೆಯರಲ್ಲಿ ಮಾನ್ಯತೆಯಿಂದಲೂ ಗೌರವದೊಂದಿಗೂ ವರ್ತಿಸಲು ಸಮೂಹವು ಅಭ್ಯಾಸ ಮಾಡಬೇಕು ಎಂದು ಅವರು ಹೇಳಿದರು. ಎಸ್ಸೆಸ್ಸೆಫ್ ಕೇರಳ ರಾಜ್ಯ, ಆನ್ಲೈನ್ ಮೂಲಕ ಏರ್ಪಡಿಸಿದ ಪ್ರೊಫೆಸನಲ್ ವಿದ್ಯಾರ್ಥಿಗಳ ಕಾನ್ಫರೆನ್ಸ್ ಆಗಿರುವ ಪ್ರೊಫ್ಸಮ್ಮಿಟ್ ಉದ್ಘಾಟಿಸಿಕೊಂಡು ಅವರು ಮಾತನಾಡಿದರು.

ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸೆ ಮತ್ತು ಅರಾಜಕತೆಯಿಂದಾಗಿ ಸಮಾಜದ ಧಾರ್ಮಿಕ ಆರೋಗ್ಯ ಹದಗೆಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು. ಆರು ತಿಂಗಳ ಮತ್ತು ಆರು ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರ ಮತ್ತು ವರದಕ್ಷಿಣೆ ಮರಣಗಳ ಹೆಚ್ಚಳ ಮತ್ತು ಕ್ವಟೇಷನ್ ಸಂಘಟನೆಗಳ ಹೆಚ್ಚಳ, ಇವೆಲ್ಲವೂ ಸಮಾಜದ ನೈತಿಕತೆ ಹದಗೆಡುವುದರ ಲಕ್ಷಣಗಳಾಗಿವೆ. ಸಮಾಜದ ನೈತಿಕತೆಯಾಗಿದೆ ಈ ಸಮಸ್ಯೆಗಳ ಪರಿಹಾರ. ಮೌಲ್ಯಗಳನ್ನು ಹಿಡಿದಿಟ್ಟುಕೊಳ್ಳುವ ಒಂದು ಪೀಳಿಗೆಯ ಸೃಷ್ಟಿಯಿಂದ ಮಾತ್ರವೇ ಈ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ. ಹೊಸ ತಲೆಮಾರನ್ನು ಸತ್ಯದ ಮತ್ತು ಸನ್ಮಾರ್ಗದ ಹಾದಿಯಲ್ಲಿ ಮುಂದೆ ಸಾಗಿಸಬೇಕಾಗಿರುವ ಪರಿಶ್ರಮಗಳು ನಿರಂತರ ನಡೆಸಬೇಕೆಂದು ಅವರು ಹೇಳಿದರು.


SHARE THIS

Author:

0 التعليقات: