Friday, 16 July 2021

ಮಹಾರಾಷ್ಟ್ರದಲ್ಲಿ ಸಣ್ಣ ವಿಮಾನ ಪತನ: ಪೈಲಟ್ ಬಲಿ, ಇನ್ನೋರ್ವನಿಗೆ ಗಾಯ

ಮಹಾರಾಷ್ಟ್ರದಲ್ಲಿ ಸಣ್ಣ ವಿಮಾನ ಪತನ: ಪೈಲಟ್ ಬಲಿ, ಇನ್ನೋರ್ವನಿಗೆ ಗಾಯ

ಮುಂಬೈ: ಮಹಾರಾಷ್ಟ್ರದ ಜಲ್ಗಾಂವ್ ನಲ್ಲಿ ಶುಕ್ರವಾರ ಸಣ್ಣ ತರಬೇತುದಾರ ವಿಮಾನ ಪತನಗೊಂಡ ಪರಿಣಾಮ ಪೈಲಟ್ ಮೃತಪಟ್ಟಿದ್ದಾರೆ ಹಾಗೂ  ಇನ್ನೋರ್ವ ಪೈಲಟ್  ಗಾಯಗೊಂಡಿದ್ದಾರೆ. ವಿಮಾನವು  ಫ್ಲೈಯಿಂಗ್ ಸ್ಕೂಲ್ ಗೆ ಸೇರಿದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ವಿಮಾನ ಅಪಘಾತಕ್ಕೀಡಾದಾಗ ಮಹಿಳಾ ಪೈಲಟ್ ಸೇರಿದಂತೆ ಇಬ್ಬರು ಪೈಲಟ್‌ಗಳು ವಿಮಾನದಲ್ಲಿದ್ದರು. ಗಾಯಗೊಂಡ ಮಹಿಳಾ ಪೈಲಟ್‌ ಅನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತ್ಪುರ ಪರ್ವತ ಶ್ರೇಣಿಗಳ ಭಾಗವಾಗಿರುವ ಜಿಲ್ಲೆಯ ಚೋಪ್ಡಾ ಪ್ರದೇಶದ ವಾರ್ಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದ್ದಾರೆSHARE THIS

Author:

0 التعليقات: