Friday, 9 July 2021

ಚಾಮರಾಜನಗರ: ಟ್ರ್ಯಾಕ್ಟರ್​​ಗೆ ಸಿಲುಕಿ ಬಾಲಕ ಮೃತ್ಯು; ನೊಂದ ಚಾಲಕ ಆತ್ಮಹತ್ಯೆ


 ಚಾಮರಾಜನಗರ: ಟ್ರ್ಯಾಕ್ಟರ್​​ಗೆ ಸಿಲುಕಿ ಬಾಲಕ ಮೃತ್ಯು; ನೊಂದ ಚಾಲಕ ಆತ್ಮಹತ್ಯೆ

ಚಾಮರಾಜನಗರ : ಟ್ರ್ಯಾಕ್ಟರ್​​ಗೆ ಸಿಲುಕಿ ಬಾಲಕನೋರ್ವ ಮೃತಪಟ್ಟಿದ್ದು ಇದರಿಂದ ನೊಂದ ಚಾಲಕನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸವಕನಹಳ್ಳಿಪಾಳ್ಯ ಎಂಬಲ್ಲಿ ನಡೆದಿದೆ.

ಸವಕನಹಳ್ಳಿಪಾಳ್ಯ ಗ್ರಾಮದ ಹರ್ಷ (5) ಎಂಬ ಬಾಲಕ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪಿಹೆಚ್​ಡಿ ಸಂಶೋಧನೆ ಕೈಗೊಂಡಿದ್ದ ಸುನೀಲ್ (23) ಮೃತರು ಎಂದು ಗುರುತಿಸಲಾಗಿದೆ.

ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಜಮೀನೊಂದನ್ನು ಸಮತಟ್ಟು ಮಾಡುತ್ತಿದುದನ್ನು ನೋಡುತ್ತಾ ನಿಂತಿದ್ದ ಹರ್ಷ ಎಂಬ ಬಾಲಕನಿಗೆ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಗುದ್ದಿದೆ. ಈ ವೇಳೆ ಸುನೀಲ್ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ ಎನ್ನಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟ ವಿಚಾರ ತಿಳಿದು, ಮನನೊಂದ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ


SHARE THIS

Author:

0 التعليقات: