Thursday, 8 July 2021

ಕಾನೂನು ಸುವ್ಯವಸ್ಥೆ ಕುರಿತು ಉತ್ತರಿಸಲು ಫೇಸ್ ಬುಕ್ ಗೆ ಒತ್ತಾಯಿಸಲು ಅಸಾಧ್ಯ: ಸುಪ್ರೀಂಕೋರ್ಟ್


 ಕಾನೂನು ಸುವ್ಯವಸ್ಥೆ ಕುರಿತು ಉತ್ತರಿಸಲು ಫೇಸ್ ಬುಕ್ ಗೆ ಒತ್ತಾಯಿಸಲು ಅಸಾಧ್ಯ: ಸುಪ್ರೀಂಕೋರ್ಟ್

ಹೊಸದಿಲ್ಲಿ: ಕಾನೂನು ಹಾಗೂ ಸುವ್ಯವಸ್ಥೆ ಕುರಿತು ಫೇಸ್‌ಬುಕ್‌ಗೆ ಉತ್ತರಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಇದನ್ನು ಕೇಂದ್ರ ಸರಕಾರ ನೋಡಿಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. 2020 ರ ಗಲಭೆ ತನಿಖೆಗೆ ಸಂಬಂಧಿಸಿ ದಿಲ್ಲಿ ವಿಧಾನಸಭೆ ಸಮಿತಿಯ ಮುಂದೆ ಹಾಜರಾಗುವಂತೆ ಸೋಷಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ ಅನ್ನು ನ್ಯಾಯಾಲಯ ಕೇಳಿದೆ.

"ಸಾಮಾಜಿಕ ಮಾಧ್ಯಮ ವೇದಿಕೆಗಳು ಗಡಿಯುದ್ದಕ್ಕೂ ಜನರ ಮೇಲೆ ಪ್ರಭಾವ ಬೀರುವ ಶಕ್ತಿ ಹಾಗೂ  ಸಾಮರ್ಥ್ಯವನ್ನು ಹೊಂದಿವೆ. ಫೇಸ್‌ಬುಕ್‌ನಂತಹ ಈ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ಚರ್ಚೆಗಳು ಸಮಾಜವನ್ನು ಧ್ರುವೀಕರಿಸುವ ಸಾಮರ್ಥ್ಯವನ್ನು ಹೊಂದಿವೆ ಹಾಗೂ  ಕಡಿಮೆ ತಿಳುವಳಿಕೆಯುಳ್ಳ ವ್ಯಕ್ತಿಗಳು ಮಾಹಿತಿಯನ್ನು ಪರಿಶೀಲಿಸದೆ ಅದನ್ನು ಸತ್ಯದ ಸುವಾರ್ತೆ ಎಂದು ತೆಗೆದುಕೊಳ್ಳಬಹುದು" ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿದೆ.


SHARE THIS

Author:

0 التعليقات: