ಕುಲಶೇಖರದಲ್ಲಿ ಹಳಿಯಿಂದ ಮಣ್ಣು ತೆರವು ಕಾರ್ಯ ಪೂರ್ಣ: ರೈಲು ಸಂಚಾರ ಪುನರಾರಂಭ
ಮಂಗಳೂರು: ನಗರ ಹೊರವಲಯದ ಕುಲಶೇಖರ ಬಳಿ ರೈಲ್ವೆ ಹಳಿಗೆ ತಡೆಗೋಡೆ ಸಹಿತ ಮಣ್ಣು ಕುಸಿದ ಪರಿಣಾಮ ಸ್ಥಗಿತಗೊಂಡಿದ್ದ ರೈಲು ಸಂಚಾರ ರವಿವಾರದಿಂದ ಬೆಳಗ್ಗಿನಿಂದ ಪುನರಾರಂಭಗೊಂಡಿದೆ.
ಹಳಿ ಮೇಲೆ ಬಿದ್ದ ಕಲ್ಲುಮಣ್ಣಿನ ತೆರವು ಕಾರ್ಯಾಚರಣೆ ಶನಿವಾರ ತಡರಾತ್ರಿಯವರೆಗೂ ನಡೆಯಿತು. ತಡೆಗೋಡೆ ಕುಸಿತಗೊಂಡ ಸ್ಥಳದಿಂದ ಮಣ್ಣು, ಬೃಹತ್ ಗಾತ್ರದ ಕಲ್ಲುಗಳನ್ನು ಹಿಟಾಚಿ ಬಳಸಿ ತೆರವುಗೊಳಿಸಲಾಯಿತು. ರೈಲ್ವೆ ಹಳಿಗೆ ವಾಲಿದ ತಡೆಗೋಡೆಯನ್ನು ಯಂತ್ರ ಬಳಸಿ ತುಂಡರಿಸಿ ತೆಗೆಯಲಾಯಿತು
ಪಾಲ್ಘಾಟ್ ರೈಲ್ವೇ ವಿಭಾಗಕ್ಕೆ ಬರುವ ಈ ಹಳಿಯಲ್ಲಿ ಜು.18ರಿಂದ ರೈಲು ಸಂಚಾರ ಪುನಾರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ರವಿವಾರ ಬೆಳಗ್ಗೆ 8:45ರ ವೇಳೆಗೆ ಎರ್ನಾಕುಲಂನಿಂದ ಅಜ್ಮೀರ್ಗೆ ಮೊದಲ ರೈಲು ಪ್ರಯಾಣ ಬೆಳೆಸಿತು. ಮಣ್ಣು ಕುಸಿತಗೊಂಡ ಕುಲಶೇಖರ ಪ್ರದೇಶದಲ್ಲಿ ರೈಲು ತೆರಳುವ ವೇಳೆ ರೈಲ್ವೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದು, ವೀಕ್ಷಣೆ ಮಾಡಿದರು.
0 التعليقات: