Friday, 30 July 2021

ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಭಾರತದ ಹಾಕಿ ತಂಡ. ಜಪಾನ್ ವಿರುದ್ಧ ಭಾರತ ತಂಡದ ಜಯಭೇರಿ.


ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಭಾರತದ ಹಾಕಿ ತಂಡ. 
ಜಪಾನ್ ವಿರುದ್ಧ ಭಾರತ ತಂಡದ ಜಯಭೇರಿ.

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಜಯಭೇರಿ ಬಾರಿಸಿ ಎರಡನೇ ಸ್ಥಾನ ಗಳಿಸಿದ ಭಾರತೀಯ ಪುರುಷರ ಹಾಕಿ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.



ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ಧ ಭಾರತವು 5-3 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಸ್ಥಾನವನ್ನು ದೃಢಪಡಿಸಿಕೊಂಡಿದ್ದ  ಭಾರತದ ಪರ ಶುಕ್ರವಾರ ನಡೆದ ಪಂದ್ಯದಲ್ಲಿ ಗುರ್ಜಂತ್ ಸಿಂಗ್ (17 ನೇ, 56 ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (13 ನೇ), ಶಂಶೇರ್ ಸಿಂಗ್ (34 ನೇ) ಹಾಗೂ  ನೀಲಕಂಠ ಶರ್ಮಾ (51 ನೇ) ಗೋಲು ಗಳಿಸಿದರು. ಈ ಮೂಲಕ ಭಾರತವು ಸತತ ಮೂರನೇ ಜಯವನ್ನು ದಾಖಲಿಸಿತು.

ಈ ಗೆಲುವಿನಿಂದಾಗಿ, ಭಾರತವು ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾದ ನಂತರ 'ಎ' ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿತು.


SHARE THIS

Author:

0 التعليقات: