ಆಟವಾಡುವಾಗ ಘಟನೆ:
ಮೊಬೈಲ್ ಬ್ಯಾಟರಿ ಸ್ಪೋಟಿಸಿ ಬಾಲಕನಿಗೆ ಗಾಯ
ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ಮೊಬೈಲ್ ಬ್ಯಾಟರಿ ಸ್ಫೋಟಗೊಂಡು 10 ವರ್ಷದ ಬಾಲಕ ಗಾಯಗೊಂಡಿದ್ದಾನೆ.
ಕಾರ್ತಿಕ್ ಕಲಾದಗಿ ಗಾಯಗೊಂಡ ಬಾಲಕ ಎಂದು ಹೇಳಲಾಗಿದೆ. ಆತನ ಮನೆಯ ಪಕ್ಕದಲ್ಲಿದ್ದ ಎಸೆಯಲಾಗಿದ್ದ ಹಳೆಯ ಮೊಬೈಲ್ ಬ್ಯಾಟರಿ ತೆಗೆದುಕೊಂಡು ಆಟವಾಡುತ್ತಿದ್ದ ಸಂದರ್ಭದಲ್ಲಿ ಸ್ಪೋಟಗೊಂಡಿದ್ದು, ಕಾರ್ತಿಕ್ ಮುಖ, ಮತ್ತು ಕೈಗೆ ಹಾನಿಯಾಗಿದೆ.
ಹಳೆಯ ಬ್ಯಾಟರಿ ತೆಗೆದುಕೊಂಡು ಕಾರ್ತಿಕ್ ಆಟವಾಡುವಾಗ ಕೈಯಲ್ಲೇ ಸ್ಫೋಟಗೊಂಡಿದೆ. ಗಾಯಗೊಂಡ ಬಾಲಕನನ್ನು ಸವಣೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
0 التعليقات: