Thursday, 15 July 2021

ಚಿಕ್ಕಮಗಳೂರು : ಭಾರಿ ಮಳೆಗೆ ರಸ್ತೆ ಕುಸಿತ


 ಚಿಕ್ಕಮಗಳೂರು : ಭಾರಿ ಮಳೆಗೆ ರಸ್ತೆ ಕುಸಿತ

ಚಿಕ್ಕಮಗಳೂರು: ತಾಲೂಕಿನ ಹೊನ್ನಾಳ ಚೆಕ್ ಪೋಸ್ಟ್ ಬಳಿ ಭಾರಿ ಮಳೆಗೆ ರಸ್ತೆ ಕುಸಿತವಾದ ಘಟನೆ ನಡೆದಿದೆ.

ಚಿಕ್ಕಮಗಳೂರಿನಿಂದ ಮುತ್ತೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತವಾಗಿದೆ. ಕಳೆದ 2 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.

ತುಂಗಾ-ಭದ್ರಾ, ಹೇಮಾವತಿ ನದಿಗಳ ನೀರಿನ ಹರಿವು ಹೆಚ್ಚಳವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆಗೆ ಮುಳುಗಡೆ ಭೀತಿ ಉಂಟಾಗಿದೆ.

ಕಳಸ, ಕುದುರೆಮುಖ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸಿರಿವಾಸೆ - ಚಿಕ್ಕಮಂಗಳೂರು ಸಂಪರ್ಕ ಕಡಿತವಾಗಿದೆ.


SHARE THIS

Author:

0 التعليقات: