Tuesday, 6 July 2021

ಪಂಜಾಬ್ ಗಡಿಯಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಬೀದರ್ ನ ಯೋಧ ಹುತಾತ್ಮ


 ಪಂಜಾಬ್ ಗಡಿಯಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ: ಬೀದರ್ ನ ಯೋಧ ಹುತಾತ್ಮ

ಬೀದರ್: ಪಂಜಾಬ್ ಗಡಿಯಲ್ಲಿ ಬುಧವಾರ ಮುಂಜಾವ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲೂಕು ನಿವಾಸಿ, ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾಗಿರುವುದಾಗಿ ವರದಿಯಾಗಿದೆ.

ಔರಾದ್ ತಾಲೂಕಿನ ಆಲೂರ (ಕೆ) ಗ್ರಾಮದ ಬಸವರಾಜ ಗಣಪತಿ (33) ಉಗ್ರರ ಗುಂಡೇಟಿನಿಂದ ಸಾವಿಗೀಡಾಗಿದ ಯೋಧ. 2013ರಲ್ಲಿ ಭಾರತೀಯ ಸೇನೆಯನ್ನು ಸೇರಿದ್ದ ಬಸವರಾಜ ಅವರು 20 ದಿನಗಳ ಹಿಂದೆಯಷ್ಟೇ ಪಂಜಾಬ್ ನ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು.


SHARE THIS

Author:

0 التعليقات: