ಪಾಕಿಸ್ತಾನದ ಇಬ್ಬರು ನುಸುಳುಕೋರರನ್ನು ಗುಂಡಿಕ್ಕಿ ಕೊಂದ ಬಿಎಸ್ ಎಫ್
ಚಂಡೀಗಡ: ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬಿನ ತಾರ್ನ್ ತರನ್ ಜಿಲ್ಲೆಯಲ್ಲಿ ಇಬ್ಬರು ಪಾಕಿಸ್ತಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಸಾಯಿಸಿದೆ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಬಿಎಸ್ಎಫ್ ಪಡೆಗಳು ಶುಕ್ರವಾರ ರಾತ್ರಿ 8.48 ಕ್ಕೆ ಗಡಿ ಬೇಲಿ ಬಳಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿವೆ ಎಂದು ಅವರು ಹೇಳಿದರು.
ಬಿಎಸ್ಎಫ್ ಸಿಬ್ಬಂದಿ ನುಸುಳುಕೋರರನ್ನು ನಿಲ್ಲುವಂತೆ ಕೇಳಿದರು. ಆದರೆ ಅವರು ಪದೇ ಪದೇ ಎಚ್ಚರಿಕೆ ನೀಡಿದರೂ ಅದನ್ನು ಗಮನಿಸಲಿಲ್ಲ. ಬೆದರಿಕೆಯನ್ನು ಗ್ರಹಿಸಿದ ಬಿಎಸ್ಎಫ್ ಪಡೆಗಳು ಗುಂಡಿನ ದಾಳಿ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0 التعليقات: