Monday, 5 July 2021

ಟಿಎಂಸಿ ಮುಖಂಡ ಮುಕುಲ್ ರಾಯ್ ಅವರ ಪತ್ನಿ ಕೃಷ್ಣಾ ನಿಧನ


 ಟಿಎಂಸಿ ಮುಖಂಡ ಮುಕುಲ್ ರಾಯ್ ಅವರ ಪತ್ನಿ ಕೃಷ್ಣಾ ನಿಧನ

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಮುಖಂಡ ಮುಕುಲ್ ರಾಯ್ ಅವರ ಪತ್ನಿ ಕೃಷ್ಣಾ ರಾಯ್ ಮಂಗಳವಾರ ಬೆಳಿಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೃಷ್ಣಾ ರಾಯ್ ಮಂಗಳವಾರ ಮುಂಜಾನೆ 4: 35 ಕ್ಕೆ ಹೃದಯ ಸ್ತಂಭನದಿಂದ ನಿಧನರಾದರು. ಅವರ ಪಾರ್ಥಿವ ಶರೀರ ವನ್ನು ಬುಧವಾರ ಕೋಲ್ಕತ್ತಾಗೆ ತರಲಾಗುವುದು.

ಟಿಎಂಸಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮುಕುಲ್ ರಾಯ್ ನಾಲ್ಕು ವರ್ಷಗಳ ಕಾಲ ಬಿಜೆಪಿಯಲ್ಲಿದ್ದರು.  ನಂತರ ಇತ್ತೀಚೆಗೆ ತಮ್ಮ ಹಳೆಯ ಪಕ್ಷಕ್ಕೆ ಮರಳಿದರು. ರಾಯ್ ಅವರು ಈ ವರ್ಷದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಕೃಷ್ಣನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು.


SHARE THIS

Author:

0 التعليقات: