Sunday, 4 July 2021

ಮದುವೆಯಿಂದ ದೂರವಾಗುವ ಭಯ: ಅವಳಿ ಸೋದರಿಯರು ನೇಣಿಗೆ ಶರಣು


ಮದುವೆಯಿಂದ ದೂರವಾಗುವ ಭಯ: ಅವಳಿ ಸೋದರಿಯರು ನೇಣಿಗೆ ಶರಣು

ಮಂಡ್ಯ, ಜು.4: ಮದುವೆಯಾಗಿ ತಾವು ದೂರವಾಗಲು ಇಷ್ಟವಿಲ್ಲದ ಅನ್ಯೋನ್ಯತೆಯಿಂದಿದ್ದ ಅವಳಿ ಸೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುರೇಶ್ ಮತ್ತು ಯಶೋಧ ದಂಪತಿಯ ಅವಳಿ ಪುತ್ರಿಯರಾದ ದೀಪಿಕಾ ಮತ್ತು ದಿವ್ಯಾ (19) ಆತ್ಮಹತ್ಯೆ ಮಾಡಿಕೊಂಡವರು. 

ಚಿಕ್ಕಂದಿನಿಂದ ಬಹಳ ಅನ್ಯೋನ್ಯತೆಯಿಂದಿದ್ದ ಈ ಇಬ್ಬರನ್ನು ಬೇರೆ ಬೇರೆ ಮನೆಗೆ ಮದುವೆ ಮಾಡಿಕೊಡಲು ಪೋಷಕರು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಬೇರೆ ಬೇರೆ ಹುಡುಗರನ್ನು ಮದುವೆ ಯಾದರೆ ತಮ್ಮ ಬಾಂಧವ್ಯ ಕೊನೆಯಾಗುತ್ತದೆ ಎಂದು ಬೇಸರಗೊಂಡು ಶನಿವಾರ ಸಂಜೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಅರಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


SHARE THIS

Author:

0 التعليقات: