Thursday, 8 July 2021

ಬಂಟ್ವಾಳ: ಹಿಟಾಚಿ ಯಂತ್ರ ಸಹಿತ ಮನೆ ಮೇಲೆ ಉರುಳಿದ ಟಿಪ್ಪರ್


ಬಂಟ್ವಾಳ: ಹಿಟಾಚಿ ಯಂತ್ರ ಸಹಿತ ಮನೆ ಮೇಲೆ ಉರುಳಿದ ಟಿಪ್ಪರ್

ಬಂಟ್ವಾಳ: ಹಿಟಾಚಿ ಯಂತ್ರವನ್ನು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮನೆಯೊಂದರ ಮೇಲೆ ಉರುಳಿ ಬಿದ್ದು ಟಿಪ್ಪರ್ ಕ್ಲೀನರ್ ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಅಮ್ಟಾಡಿಯ ಕೆಂಪುಗುಡ್ಡೆ ಕ್ರಾಸ್ ಬಳಿ ಗುರುವಾರ ಸಂಭವಿಸಿದೆ. 

ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಹಿಟಾಚಿ ಯಂತ್ರ ಸಹಿತ ಮನೆ ಮೇಲೆ ಉರುಳಿ ಬಿದ್ದಿದೆ‌. ಘಟನೆಯಲ್ಲಿ ಟಿಪ್ಪರ್ ನಲ್ಲಿದ್ದ ಕ್ಲೀನರ್ ವಿಠಲ್ ಎಂಬವರು ತೀವ್ರ ಸ್ವರೂಪದ ಗಾಯಗೊಂಡಿದ್ದಾರೆ. 

ವಿಠಲ್ ಅವರು ಟಿಪ್ಪರ್ ನ ಅಡಿಯಲ್ಲಿ ಸಿಲುಕಿಕೊಂಡಿದ್ದರೆನ್ನಲಾಗಿದೆ. ಬಳಿಕ ಬಿ.ಸಿ.ರೋಡ್ ನಿಂದ ಕ್ರೇನ್ ಅನ್ನು ತರಿಸಿ ಟಿಪ್ಪರನ್ನು ಮೇಲಕ್ಕೆತ್ತಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. 

ಘಟನೆಯಲ್ಲಿ ನಾರಾಯಣ ಭಂಡಾರಿ ಎಂಬವರ ಮನೆಯ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.


SHARE THIS

Author:

0 التعليقات: