ಬಂಟ್ವಾಳ ಮನೆ ಮೇಲೆ ಕುಸಿದ ತಡೆಗೋಡೆ: ಇಬ್ಬರಿಗೆ ಗಾಯ
ಬಂಟ್ವಾಳ: ಕಳೆದೆರಡು ದಿನಗಳಲ್ಲಿ ಮಳೆ ಬಿರುಸುಗೊಂಡಿದ್ದರಿಂದ ಮನೆ ಮೇಲೆ ತಡೆಗೋಡೆ ಕುಸಿದು ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ - ಮೂಡುಬಿದಿರೆ ರಸ್ತೆಯ ವಿದ್ಯಾಗಿರಿ ಬಳಿ ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ.
ಘಟನೆಯಲ್ಲಿ ನವೀನ್ ಎಂಬವರು ಹಾಗೂ ಅವರ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನವೀನ್ ಕುಟುಂಬ ಈ ಮನೆಯಲ್ಲಿ ಬಾಡಿಗೆಗೆ ವಾಸವಿದೆ.
ಮನೆ ಪಕ್ಕದ ಗುಡ್ಡದ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆ ಮಳೆ ಹಿನ್ನೆಲೆಯಲ್ಲಿ ಕುಸಿದು ಮನೆಯ ಮೇಲೆಯೇ ಬಿದ್ದಿದೆ. ಪರಿಣಾಮ ಮನೆಯ ಗೋಡೆ, ಮೇಲ್ಛಾವಣಿಗೆ ಹಾಗೂ ಮನೆಯಲ್ಲಿದ್ದ ಸೊತ್ತುಗಳಿಗೆ ಹಾನಿಯಾಗಿದೆ.
0 التعليقات: