Sunday, 11 July 2021

"ದನದ ಮಾಂಸ ತಿನ್ನುವವರನ್ನು ಬಿಟ್ಟು ಉಳಿದೆಲ್ಲರ ಡಿಎನ್‌ಎ ಒಂದೇ": ಮೋಹನ್‌ ಭಾಗ್ವತ್‌ ಗೆ ಸಾಧ್ವಿ ಪ್ರಾಚಿ ಪ್ರತಿಕ್ರಿಯೆ


 "ದನದ ಮಾಂಸ ತಿನ್ನುವವರನ್ನು ಬಿಟ್ಟು ಉಳಿದೆಲ್ಲರ ಡಿಎನ್‌ಎ ಒಂದೇ": ಮೋಹನ್‌ ಭಾಗ್ವತ್‌ ಗೆ ಸಾಧ್ವಿ ಪ್ರಾಚಿ ಪ್ರತಿಕ್ರಿಯೆ

ಹೊಸದಿಲ್ಲಿ: ವಿವಾದಾತ್ಮಕ ಹೇಳಿಕೆಗಳ ಮೂಲಕ ಪ್ರಚಾರದಲ್ಲಿರುವ ಮಿಶ್ವ ಹಿಂದೂ ಪರಿಷತ್‌ ನಾಯಕಿ  ಸಾಧ್ವಿ ಪ್ರಾಚಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. "ದನ ತಿನ್ನುವವರನ್ನು ಬಿಟ್ಟು ಉಳಿದೆಲ್ಲರ ಡಿಎನ್‌ಎ ಒಂದೇ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಆರೆಸ್ಸೆಸ್‌ ಮುಖ್ಯಸ್ಥ ಭಾಗ್ವತ್, "ಯಾವುದೇ ಧರ್ಮಗಳಾದರೂ ಸಹ ಭಾರತೀಯರಾಗಿರುವ ನಮ್ಮೆಲ್ಲರ ಡಿಎನ್‌ಎ ಒಂದೇ" ಎಂದು ಹೇಳಿದ್ದರು. ಈ ಹೇಳಿಕೆಗೆ ರಾಜಸ್ಥಾನದ ದೌಸಾದಲ್ಲಿ ನಡೆದ ಕಾರ್ಯ್ರಮವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಪ್ರಾಚಿ, "ದನದ ಮಾಂಸ ತಿನ್ನುವವರನ್ನು ಹೊರತುಪಡಿಸಿ ಉಳಿದವರೆಲ್ಲಾ ಒಂದೇ ಡಿಎನ್‌ಎಯವರು" ಎಂದಿದ್ದಾರೆ.

"ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಕಾನೂನು ಜಾರಿಗೆ ಬರಬೇಕು. ಎರಡು ಮಕ್ಕಳನ್ನು ಹೊಂದಿರುವ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ನಿಲ್ಲಿಸಬೇಕು ಮತ್ತು ಮತದಾನದ ಹಕ್ಕನ್ನು ಸಹ ಕಿತ್ತುಕೊಳ್ಳಬೇಕು. ನಿಮಗೆ ಎಷ್ಟು ಪತ್ನಿಯರಿದ್ದರೂ ಪರವಾಗಿಲ್ಲ, ಇಬ್ಬರು ಮಕ್ಕಳು ಮಾತ್ರ ಇರಬೇಕು ”ಎಂದು ವಿಹಿಂಪ ನಾಯಕಿ ಪ್ರಾಚಿ ಹೇಳಿರುವುದಾಗಿ ವರದಿಯಾಗಿದೆ.

‘ಲವ್ ಜಿಹಾದ್’ ಕುರಿತು ಮಾತನಾಡಿದ ಪ್ರಾಚಿ, ʼರಾಜಸ್ಥಾನ ಸರ್ಕಾರವು ಈ ಕುರಿತು ಮಧ್ಯಪ್ರವೇಶಿಸಿ ಮಹಿಳೆಯರ ಧಾರ್ಮಿಕ ಮತಾಂತರಕ್ಕೆ ಅಂತ್ಯ ಹಾಡಬೇಕುʼ ಎಂದು ಒತ್ತಾಯಿಸಿದರು.


SHARE THIS

Author:

0 التعليقات: