ಮೂಡುಬಿದಿರೆ : ಚಿರತೆಯ ಬಾಯಿಗೆ ಸಿಕ್ಕರೂ ಪ್ರಾಣ ಉಳಿಸಿಕೊಂಡ ನಾಯಿ !
ಮೂಡುಬಿದಿರೆ: ತಾಲೂಕಿನ ಪಡುಕೋಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಬಂದು ನಾಯಿಯೊಂದನ್ನು ಹಿಡಿದಿದ್ದು, ಚಿರತೆ ಕಾಂಪೌಂಡ್ ಹಾರುವ ವೇಳೆ ಚಿರತೆಯ ಬಾಯಿಯಿಂದ ನಾಯಿ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದೆ. ಘಟನೆ ಸಿಸಿಟಿವಿಯಲ್ಲಿ ವೀಡಿಯೊ ಸೆರೆಯಾಗಿದೆ.
ಪಡುಕೋಣಾಜೆಯ ಸತೀಶ್ ಎಂಬವರ ಮನೆಯ ಬಳಿ ಗುರುವಾರ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದೆ.
ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜೊತೆ ಮಾತುಕತೆ ನಡೆಸಿದ್ದು, ಚಿರತೆಯನ್ನು ಹಿಡಿಯಲು ಬೋನು ಇಡುವುದೆಂದು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
0 التعليقات: