ನಮ್ಮ ನೆಲದ ಕಾನೂನು ಪಾಲಿಸಬೇಕು: ಟ್ವಿಟರ್ ಗೆ ನೂತನ ಐಟಿ ಸಚಿವ ವೈಷ್ಣವ್ ಎಚ್ಚರಿಕೆ
ಹೊಸದಿಲ್ಲಿ: ನಮ್ಮ ‘ನೆಲದ ಕಾನೂನು ಸರ್ವೋಚ್ಚ’. ಅದನ್ನು ಪಾಲಿಸಬೇಕು ಎಂದು ನೂತನ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಮಧ್ಯಾಹ್ನ ಟ್ವಿಟರ್ಗೆ ಎಚ್ಚರಿಕೆ ನೀಡಿದ್ದಾರೆ.
ಹೊಸ ಐಟಿ ನಿಯಮಗಳ ಬಗ್ಗೆ ಟ್ವಿಟರ್ ನೊಂದಿಗೆ ಇತ್ತೀಚೆಗೆ ಸಂಘರ್ಷ ನಡೆಸಿದ್ದ ರವಿಶಂಕರ್ ಪ್ರಸಾದ್ ಅವರ ರಾಜೀನಾಮೆಯಿಂದ ತೆರವಾಗಿರುವ ಮಾಹಿತಿ ತಂತ್ರಜ್ಞಾನ ಸಚಿವ ಸ್ಥಾನವನ್ನು ವೈಷ್ಣವ್ ಅವರು ಇಂದು ವಹಿಸಿಕೊಂಡರು.
0 التعليقات: