Tuesday, 27 July 2021

ಅಶ್ಲೀಲ ಚಿತ್ರ ತಯಾರಿ ಪ್ರಕರಣ: ರಾಜ್ ಕುಂದ್ರಾ ಕಸ್ಟಡಿ ಅವಧಿ ವಿಸ್ತರಣೆ


 ಅಶ್ಲೀಲ ಚಿತ್ರ ತಯಾರಿ ಪ್ರಕರಣ: ರಾಜ್ ಕುಂದ್ರಾ ಕಸ್ಟಡಿ ಅವಧಿ ವಿಸ್ತರಣೆ

ಹೊಸದಿಲ್ಲಿ: ಅಶ್ಲೀಲ ಚಿತ್ರ ತಯಾರಿ ಹಾಗೂ ಹಂಚಿಕೊಂಡ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಪೊಲೀಸ್ ಕಸ್ಟಡಿ ಮಂಗಳವಾರ ಕೊನೆಯಾಗಿದೆ. ನ್ಯಾಯಾಲಯವು ಕುಂದ್ರಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯನ್ನು ವಿವಾಹವಾಗಿರುವ ರಾಜ್ ಕುಂದ್ರಾ ಜುಲೈ 19ರಂದು ಅಶ್ಲೀಲ ಚಿತ್ರಗಳ ತಯಾರಿ ಹಾಗೂ ವಿತರಣೆ ಆರೋಪಕ್ಕೆ ಸಂಬಂಧಿಸಿ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು.

ಜುಲೈ 23ರಂದು ಮುಂಬೈ ಅಪರಾಧ ಶಾಖೆಯು ರಾಜ್ ಕುಂದ್ರಾ ಅವರ ಮುಂಬೈನ ಅಂಧೇರಿಯ ವಿಯಾನ್ ಇಂಡಸ್ಟ್ರೀಸ್ ಕಚೇರಿಗೆ ದಾಳಿ ನಡೆಸಿದ್ದರು.  ರಾಜ್ ಹಾಗೂ ಶಿಲ್ಪಾ ಶೆಟ್ಟಿಗೆ ಸೇರಿರುವ ಜುಹು ಬಂಗಲೆ ಮೇಲೆಯೂ ಪೊಲೀಸರು ರೈಡ್ ಮಾಡಿದ್ದರು. ನಟಿ ಶಿಲ್ಪಾ ಶೆಟ್ಟಿಯನ್ನು ಪೊಲೀಸರು ಪ್ರಶ್ನಿಸಿದ್ದರು. ಕಂಪೆನಿಯಲ್ಲಿ ತಾನು  ಭಾಗಿಯಾಗಿಲ್ಲ ಎಂದು ಶಿಲ್ಪಾ ಹೇಳಿದ್ದಾಗಿ ತಿಳಿದುಬಂದಿದೆ.


SHARE THIS

Author:

0 التعليقات: